ಮಡಿಕೇರಿ, ಜೂ. ೨೬: “ಕೊಡವರಿಗೆ ವಿಶೇಷ ಸ್ಥಾನಮಾನ, ಸಂವಿಧಾನಾತ್ಮಕ ಮಾರ್ಗಗಳು ಮತ್ತು ಅಂತರರಾಷ್ಟಿçÃಯ ಕಾನೂನು” ಕುರಿತು ಸಿಎನ್‌ಸಿ ಅಧ್ಯಕ್ಷ ಎನ್.ಯು ನಾಚಪ್ಪ ನೇತೃತ್ವದಲ್ಲಿ ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ನಲ್ಲಿ ವಿಚಾರಸಂಕಿರಣ ಏರ್ಪಡಿಸಲಾಗಿತ್ತು.
ವಿಚಾರ ಸಂಕಿರಣದ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ವಕೀಲರಾದ ವಿಕ್ರಮ್ ಹೆಗ್ಡೆ ಅವರು, ಭಾರತದ ಬಹುತ್ವವನ್ನು ಕಾಪಾಡಿಕೊಳ್ಳಲು ಕೊಡವರ ವಿಶಿಷ್ಟ ಗುರುತನ್ನು ರಕ್ಷಿಸುವುದು ಅತ್ಯಗತ್ಯ. ಹಿಂದೆ ತನ್ನದೇ ಆದ ೨೪ ಸದಸ್ಯರ ವಿಧಾನಸಭೆಯನ್ನು ಹೊಂದಿದ್ದ ಸ್ವತಂತ್ರ ‘ಪಾರ್ಟ್-ಸಿ’ ರಾಜ್ಯವಾಗಿದ್ದ ಕೊಡಗನ್ನು ವ್ಯವಸ್ಥಿತವಾಗಿ ದೊಡ್ಡ ಕ್ಷೇತ್ರಗಳಲ್ಲಿ ವಿಲೀನಗೊಳಿಸಲಾಗಿದೆ. ಪ್ರಸ್ತುತ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ, ಕೊಡಗು ಮತದಾರರಿಗಿಂತ ಮೈಸೂರು ಮತದಾರರು ೩:೧ ರ ಅನುಪಾತದಲ್ಲಿ ಹೆಚ್ಚಾಗಿದ್ದಾರೆ, ಇದು ಸ್ವತಂತ್ರ ರಾಜಕೀಯ ಪ್ರಾತಿನಿಧ್ಯವನ್ನು ಸಾಂಸ್ಥಿಕವಾಗಿ ಅಸಾಧ್ಯವಾಗಿಸಿದೆ ಎಂದರು. ಕ್ಷೇತ್ರ ಮರುವಿಂಗಡಣೆ ಸಂದರ್ಭ ಕೊಡವರು ಪ್ರತ್ಯೇಕ ಲೋಕಸಭಾ ಸ್ಥಾನ ಬೇಡುವುದು ಸಮಂಜಸ ಎಂದ ಅವರು, ಅದಕ್ಕಾಗಿ ಕ್ಷೇತ್ರ ಮರುವಿಂಗಡಣೆ ಆಯೋಗಕ್ಕೆ ಸೂಕ್ತ ದಾಖಲೆಗಳನ್ನು ನೀಡುವುದು ಅಗತ್ಯ ಎಂದರು. ಮೈಸೂರಿನ ಬಯಲು ಸೀಮೆಗೆ ಹೋಲಿಸಿದರೆ ಕೊಡಗಿನ ಸೂಕ್ಷö್ಮ, ಪರ್ವತಮಯ ಪಶ್ಚಿಮ ಘಟ್ಟಗಳ ಭೂಪ್ರದೆಶ ವಿಭಿನ್ನವಾಗಿದೆ. ವಿಶಿಷ್ಟವಾದ ಜಮ್ಮಾ, ಸಾಗು ಮತ್ತು ಬಾಣೆ ಭೂ ಹಿಡುವಳಿಗಳ ವಿಶೇಷತೆಯ ಆಧಾರದಲ್ಲಿ ಪ್ರತ್ಯೇಕ ಸ್ಥಾನ ಕೇಳಬಹುದಾಗಿದೆ ಎಂದರು.
ಪರವಾನಗಿ ಇಲ್ಲದೆ ಬಂದೂಕುಗಳನ್ನು ಹೊಂದುವ ಕೊಡವ ಸಾಂಪ್ರದಾಯಿಕ ಹಕ್ಕಿನ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಗತ್ಯವನ್ನು ವಿಶ್ಲೇಷಣೆ ಮಾಡಿದ ವಿಕ್ರಂ ಅವರು, ಕರ್ನಾಟಕ ಉಚ್ಚ ನ್ಯಾಯಾಲಯವು (ಕ್ಯಾಪ್ಟನ್ ಚೇತನ್ ವೈ.ಕೆ. ಹಾಗೂ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ) ೧೯೫೯ ರ ಶಸ್ತಾçಸ್ತç ಕಾಯ್ದೆಯ ಸೆಕ್ಷನ್ ೪೧ ರ ಅಡಿಯಲ್ಲಿ ವಿನಾಯಿತಿಯನ್ನು ಎತ್ತಿ ಹಿಡಿದಿದೆ. ಇದು ಕೊಡವರ ೪ಐದನೇ ಪುಟಕ್ಕೆ
೪ಐದನೇ ಪುಟಕ್ಕೆ ವಿಶಿಷ್ಟ ಇತಿಹಾಸ ಮತ್ತು ಸಂಪ್ರದಾಯಗಳಿAದಾಗಿ ಸಾಧ್ಯವಾಗಿದೆ ಎಂದರು. ಆದರೆ ಸರ್ಕಾರಿ ಅಧಿಸೂಚನೆಗಳು ಬದಲಾಗಬಹುದಾದ್ದರಿಂದ, ಈ ಹಕ್ಕನ್ನು ವಿಧಿ ೨೫ ರ (ಧಾರ್ಮಿಕ ಸ್ವಾತಂತ್ರ‍್ಯದ ಹಕ್ಕು) ಅಡಿಯಲ್ಲಿ “ಅತ್ಯಗತ್ಯ ಧಾರ್ಮಿಕ ಆಚರಣೆ” ಎಂದು ಶಾಶ್ವತವಾಗಿ ಸುರಕ್ಷಿತಗೊಳಿಸಬೇಕು ಎಂದು ಈ ಸಂದರ್ಭ ಪ್ರತಿಪಾದಿಸಿದರು. ಅತ್ಯಗತ್ಯ ಧಾರ್ಮಿಕ ಆಚರಣೆಯನ್ನು ಸಾಬೀತುಪಡಿಸಲು ಮೂರು ಕಾನೂನು ಮಾನದಂಡಗಳಿವೆ: ಅವಿಭಾಜ್ಯತೆಯ ಪರೀಕ್ಷೆ : ಕೊಡವರಲ್ಲಿ ಜನನ, ಕೈಲ್‌ಪೋದ್, ಪುತ್ತರಿ ಮತ್ತು ಮರಣ ಸಂದರ್ಭ ಬಂದೂಕುಗಳಿಲ್ಲದೆ ಆಚರಿಸುವುದು ಅಪೂರ್ಣವಾಗಿವೆ ಎಂದು ಸಾಬೀತುಪಡಿಸುವುದು, ಐತಿಹಾಸಿಕ ಪುರಾವೆ: ಪಟ್ಟೋಲೆ ಪಳಮೆ ಮತ್ತು ಐತಿಹಾಸಿಕ ಬ್ರಿಟಿಷ್ ದಾಖಲೆಗಳಂತಹ ಲಿಖಿತ ಮತ್ತು ಮೌಖಿಕ ಸಂಪ್ರದಾಯಗಳನ್ನು ಕ್ರೋಢೀಕರಿಸುವುದು, ಸಾರ್ವಜನಿಕ ಶಾಂತಿ ದಾಖಲೆ: ಹಾನಿ-ಮುಕ್ತ, ಶಾಂತಿಯುತ ಆಚರಣೆಯ ಬಳಕೆಯ ಶತಮಾನದ ಅವಧಿಯ ದಾಖಲೆಯನ್ನು ಪ್ರದರ್ಶಿಸುವುದರಿಂದ ಕೋವಿ ಹಕ್ಕನ್ನು ಶಾಶ್ವತವಾಗಿಸಬಹುದೆಂದರು.
ಪ್ರಾದೇಶಿಕ ಸ್ವಾಯತ್ತತೆ ಕುರಿತು ಮಾತನಾಡಿದ ವಿಕ್ರಂ ಅವರು, ಪವಿತ್ರ ಕಾಡುಗಳ (ದೇವರಕಾಡುಗಳು) ಮೇಲಿನ ಅತಿಕ್ರಮಣ, ಅನಿಯಂತ್ರಿತ ಪ್ರವಾಸೋದ್ಯಮ ಮತ್ತು ಜಮ್ಮಾ ಭೂಮಿಗೆ ಇರುವ ಬೆದರಿಕೆಗಳು ಕೊಡವರ ರಾಜಕೀಯ ಸ್ವಾಯತ್ತತೆಯ ಕೊರತೆಯ ನೇರ ಪರಿಣಾಮಗಳಾಗಿವೆ ಎಂದರು. ಇದಕ್ಕೆ ಅಂತಿಮ ಪರಿಹಾರವೆಂದರೆ ಭಾರತೀಯ ಸಂವಿಧಾನದ ಆರನೇ ಅನುಸೂಚಿ ಅಥವಾ ವಿಧಿ ೩೭೧ ರ ಅಡಿಯಲ್ಲಿ ಪ್ರಾದೇಶಿಕ ಸ್ವಾಯತ್ತತೆಯನ್ನು ಭದ್ರಪಡಿಸಿಕೊಳ್ಳುವುದು ಅತ್ಯಗತ್ಯ ಎಂಬುದನ್ನು ಈ ಸಂದರ್ಭ ವಿವರವಾಗಿ ಹೇಳಿದರು.
ಸುಪ್ರೀಂಕೋರ್ಟ್ ಮತ್ತು ನ್ಯೂಯಾರ್ಕ್ ವಕೀಲರು ಹಿಮಾ ಲಾರೆನ್ಸ್ ವಿಕ್ರಮ್ ಹೆಗ್ಡೆ ಅವರು ಮಾತನಾಡಿ, “ಅಂತರರಾಷ್ಟಿçÃಯ ಕಾನೂನಿನಡಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಸ್ವಯಂ-ಆಡಳಿತ ಮತ್ತು ಸ್ಥಳೀಯ ಕೊಡವ ಜನಾಂಗೀಯ ಗುರುತು” ಎಂಬ ವಿಷಯದ ಅಡಿಯಲ್ಲಿ ಅಂತರರಾಷ್ಟಿçÃಯ ಕಾನೂನು ಮಾನದಂಡಗಳನ್ನು ಉದ್ದೇಶಿಸಿ ಮಾಹಿತಿ ನೀಡಿದರು.
ತನ್ನದೇ ಆದ ವಿಶಿಷ್ಟ ಭಾಷೆ, ಆಚರಣೆಗಳು, ವಂಶಾವಳಿ ಮತ್ತು ಪವಿತ್ರ ಸ್ಥಳಗಳನ್ನು ಹೊಂದಿರುವ ಸಣ್ಣ ಸಮುದಾಯವನ್ನು ಆಧುನಿಕ ರಾಷ್ಟçವು ಹೇಗೆ ನಡೆಸಿಕೊಳ್ಳಬೇಕು..? ಎಂಬುದರ ಬಗ್ಗೆ ವಿವರಿಸಿದ ಅವರು, ಜನಾಂಗವು ವಿಶಿಷ್ಟರಾಗಿರುವುದರಿಂದ, ಜನಾಂಗದ ಧ್ವನಿಯನ್ನು ರಕ್ಷಿಸುವುದನ್ನು ಸಂವಿಧಾನವು ಖಚಿತಪಡಿಸಿಕೊಳ್ಳಬೇಕು ಎಂದರು. ಕೊಡವ ಐನ್‌ಮನೆಗಳು, ಮಂದ್‌ಗಳು ಮತ್ತು ಹಬ್ಬಗಳು ಕೇವಲ ಖಾಸಗಿ ಹವ್ಯಾಸಗಳಲ್ಲ; ಅವು ಸಮುದಾಯದ ಸಾರ್ವಜನಿಕ ಗುರುತನ್ನು ರೂಪಿಸುತ್ತವೆ.
ಕೊಡಗಿಗೆ ಭೂಮಿ, ಜಮ್ಮಾ ಹಿಡುವಳಿ, ಪವಿತ್ರ ಕಾಡುಗಳು (ದೇವರಕಾಡು) ಮತ್ತು ಕಾಫಿ ಭೂದೃಶ್ಯಗಳೊಂದಿಗೆ ಬೆಸೆದುಕೊಂಡಿದೆ. ಅಭಿವೃದ್ಧಿಯನ್ನು ಕೇವಲ ರೆಸಾರ್ಟ್ಗಳು ಮತ್ತು ಕಾಂಕ್ರೀಟ್‌ಗಳಿAದ ಅಳೆಯಲು ಸಾಧ್ಯವಿಲ್ಲ, ಬದಲಿಗೆ ಪರಿಸರ ಮತ್ತು ಸಾಂಸ್ಕೃತಿಕ ಉಳಿವಿನಿಂದ ಅಳೆಯಬೇಕು ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಕೊಡವ ಭಾಷೆಯು ಕೇವಲ ಔಪಚಾರಿಕ ಹೆಮ್ಮೆಯನ್ನು ಮೀರಿ ಶಿಕ್ಷಣ, ಡಿಜಿಟಲ್ ಸಂರಕ್ಷಣೆ ಮತ್ತು ಸಾರ್ವಜನಿಕ ಜೀವನಕ್ಕೆ ಪ್ರವೇಶಿಸಿದಾಗ ಮಾತ್ರ ಬದುಕುಳಿಯುತ್ತದೆ ಎಂದು ಅವರು ಅಭಿಪ್ರಾಯ ವ್ಯಕಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನ್ಯಾಯಶಾಸ್ತçಜ್ಞ ಕೆ.ಪಿ. ಬಾಲಸುಬ್ರಮಣ್ಯನ್ ಅವರು ಕೊಡವ ಗುರುತಿನ ಬಗ್ಗೆ ಮಾತನಾಡಿ, ಕೊಡವರು ಅತ್ಯಂತ ಅಪರೂಪದ ಜನಾಂಗವಾಗಿದ್ದು, ಅವರನ್ನು ಸಂವಿಧಾನದ ಅಡಿಯಲ್ಲಿ ರಕ್ಷಿಸುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು ನಾಚಪ್ಪ ಅವರು ಮಾತನಾಡಿ, ಆದಿಮಸಂಜಾತ, ಏಕ-ಜನಾಂಗೀಯ ಹಾಗೂ ಪ್ರಕೃತಿ ಆರಾಧಕರಾದ (ಅನಿಮಿಸ್ಟಿಕ್) ಕೊಡವರಿಗಾಗಿ ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತವನ್ನು ಸಾಧಿಸುವ ತಮ್ಮ ಸಂಕಲ್ಪವನ್ನು ಪುನರುಚ್ಚರಿಸಿದರು. ಕಳೆದ ೩೬ ವರ್ಷಗಳಿಂದ ಶಾಂತಿಯುತವಾಗಿ ನಡೆಯುತ್ತಿರುವ ಈ ಹೋರಾಟವು, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ಅತಿ ಸಣ್ಣ ಹಾಗೂ ಸೂಕ್ಷö್ಮ ಸಮುದಾಯವಾದ ಕೊಡವರಿಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಅವರು ಈ ಸಂದರ್ಭ ಹೇಳಿದರು.
ವಿಚಾರಗೋಷ್ಠಿಯಲ್ಲಿ ನಂದೇಟಿರ ಕವಿತಾ ಸುಬ್ಬಯ್ಯ, ಪುಲ್ಲೇರ ಸ್ವಾತಿ ಕಾಳಪ್ಪ, ಲೆಫ್ಟಿನೆಂಟ್ ಕರ್ನಲ್ ಬಿ.ಎಂ. ಪಾರ್ವತಿ, ಪಟ್ಟಮಾಡ ಲಲಿತಾ ಗಣಪತಿ, ಅಪ್ಪಾರಂಡ ನಂದಿನಿ ನಂಜಪ್ಪ, ಅಜ್ಜಿನಿಕಂಡ ಗಾನ ಮಾಚಯ್ಯ, ನಂದಿನೆರವAಡ ನಿಶಾ ಅಚ್ಚಯ್ಯ, ನಂದಿನೆರವAಡ ಸುಮಿತ್ರಾ ದಿನೇಶ್, ಅಚ್ಚಕಾಳೆರ ಅಳಮಂಡ ಜೈ ಗಣಪತಿ, ಪಟ್ಟಮಾಡ ಕುಶ, ಬಾಚರಣಿಯಂಡ ಚಿಪ್ಪಣ್ಣ, ನಂದೇಟಿರ ರವಿ ಸುಬ್ಬಯ್ಯ, ಪುಳ್ಳಂಗಡ ನಟೇಶ್, ಜಮ್ಮಡ ಮೋಹನ್, ಮಂದಪAಡ ಮನೋಜ್ ಮಂದಣ್ಣ, ಅರೆಯದ ಗಿರೀಶ್, ಅಜ್ಜಿಕುಟ್ಟಿರ ಲೋಕೇಶ್, ಕಿರಿಯಮಾಡ ಶೆರಿನ್, ಪುಲ್ಲೇರ ಕಾಳಪ್ಪ, ಡಾ. ಚೌರೀರ ಜಗತ್ ತಿಮ್ಮಯ್ಯ, ನಿವೃತ್ತ ಐ.ಎ.ಎಸ್ ಅಧಿಕಾರಿ ಅವರೆಮಾದಂಡ ಮೊಣ್ಣಪ್ಪ, ಮಡಿಕೇರಿ ಕೊಡವ ಸಮಾಜದ ನಿರ್ದೇಶಕರಾದ ನಂದಿನೆರವAಡ ದಿನೇಶ್, ಕುಕ್ಕೇರ ಜಯ ಚಿಣ್ಣಪ್ಪ, ಚೋಳಪಂಡ ನಾಣಯ್ಯ, ನಂದಿನೆರವAಡ ವಿಜು, ಮೇದುರ ಕಂಠಿ ನಾಣಿಯಪ್ಪ, ನಂದಿನೆರವAಡ ಅಯ್ಯಣ್ಣ, ಕೊಟ್ಟುಕತ್ತಿರ ಬಾಬಿ ಪಳಂಗಪ್ಪ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಬೇಪಡಿಯಂಡ ದಿನು, ಬೇಪಡಿಯಂಡ ಬಿದ್ದಪ್ಪ, ಪಾಲೆಕಂಡ ಪ್ರಧಾನ್ ಪೂಣಚ್ಚ, ಅಚ್ಚಕಾಳೇರ ನವೀನ್ ಮೊನ್ನಪ್ಪ, ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ಮಾಚಯ್ಯ, ಚಂಬAಡ ಜನತ್ ಕುಮಾರ್, ಮಂಡೆಡ ಪ್ರದೀಪ್, ದೇಯಂಡ ಪ್ರಕಾಶ್, ಪುಲ್ಲೇರ ಬೋಪಯ್ಯ, ಕೊಟ್ಟ್ಕತ್ತಿರ ಗೌತಮ್ ಪೊನ್ನಣ್ಣ, ಕೇಕಡ ಜೋಯಪ್ಪ, ಚಂಗAಡ ಚಾಮಿ ಪಳಂಗಪ್ಪ, ಮೆಕತಂಡ ಪ್ರವಿ ಪೂಣಚ್ಚ, ಕುಟ್ಟಂಡ ಸೋಮಣ್ಣ, ಅಚ್ಚಕಾಳೇರ ನವೀನ ಮೊಣ್ಣಪ್ಪ, ಮಣವಟ್ಟಿರ ಸ್ವರೂಪ್ ಪೂವಯ್ಯ, ಮಣವಟ್ಟಿರ ನಂದ ಭೀಮಯ್ಯ, ನಂದಿನೆರವAಡ ಅಚ್ಚಯ್ಯ, ಪೊರಿಮಂಡ ಧ್ಯಾನ್ ಪೊನ್ನಣ್ಣ, ಬದಲೆರ ಕೌಶಿಕ್ ಬೊಳ್ಳಿಯಪ್ಪ, ಐತಿಚಂಡ ಪೂವಣ್ಣ, ಚೆಯ್ಯಂಡ ಸತ್ಯ, ಅಪ್ಪಾರಂಡ ಪ್ರಕಾಶ್, ಪುಡಿಯೊಕ್ಕಡ ಪ್ರಥ್ವಿ ಬೋಪಣ್ಣ, ಪಟ್ಟಮಾಡ ಪ್ರಥ್ವಿ, ಬಲ್ಟಿಕಾಳಂಡ ರಾಯ್ ಮಂದಣ್ಣ, ಬಲ್ಲಚಂಡ ಸುನಿಲ್ ಬಿದ್ದಪ್ಪ, ಕಡೆಮಾಡ ವಿನ್ಸಿ ಅಪ್ಪಯ್ಯ, ಬಿದ್ದಾಟಂಡ ಪವನ್ ಮುತ್ತಪ್ಪ, ಅವರೆಮಾದಂಡ ಚಂಗಪ್ಪ, ಬಡುವಂಡ ವಿಜಯ, ಕುಲ್ಲೇಟಿರ ಬೇಬ ಅರುಣ್, ಮಣವಟ್ಟಿರ ಸೋಮೇಶ್, ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಮುಕ್ಕಾಟಿರ ಕಿಟ್ಟು, ಕೊಣಿಯಂಡ ಸಂಜು ಸೋಮಯ್ಯ, ತೋಳಂಡ ಸೋಮಯ್ಯ, ಕೆಚಟ್ಟಿರಾ ಶಂಬು ಅಯ್ಯಪ್ಪ, ಕಾಟಿಮಾಡ ಕಾರ್ಯಪ್ಪ, ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕೊಟ್ಟ್ಕತ್ತಿರ ಜಗತ್ ಭಾಗವಹಿಸಿದ್ದರು.