ಮಡಿಕೇರಿ: ಕ್ಲೋಸ್‌ಬರ್ನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸ್ಥಳೀಯ ಬೆಳೆಗಾರ ಜೆ. ಶರತ್ ಬಾಬು ನೋಟ್ ಪುಸ್ತಕ ಹಾಗೂ ಪಠ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.

ಶಾಲೆಯ ಆವರಣದಲ್ಲಿ ವೇದಿಕೆ ನಿರ್ಮಾಣಕ್ಕೂ ಅವರು ನೆರವಾಗಿದ್ದು, ಆ ಕಾಮಗಾರಿ ಕೂಡ ನಡೆಯುತ್ತಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ತಿಳಿಸಿದ್ದಾರೆ. ನಿವೃತ್ತ ಮುಖ್ಯ ಶಿಕ್ಷಕಿ ಲಕ್ಷ್ಮೀ, ಶಿಕ್ಷಕರಾದ ಪಿ.ಸಿ. ಉಷಾ, ಕೆ.ಎಫ್. ಜೆಸ್ಸಿ, ಪ್ರಜ್ಞಾ ಹಾಜರಿದ್ದರು.ಕೂಡಿಗೆ: ಕೂಡಿಗೆಯ ಶ್ರೀ ಸದ್ಗುರು ಅಪ್ಪಯ್ಯ ಸ್ವಾಮಿ ಪ್ರಾಢಶಾಲೆ ವಿದ್ಯಾರ್ಥಿಗಳಿಗೆ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪ್ಪಳ್ಳಿ ರವೀಂದ್ರ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದರು. ಶಾಲೆಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಮುಖ್ಯೋಪಾಧ್ಯಾಯಿನಿ ಎನ್. ಪುಷ್ಪ, ಶಿಕ್ಷಕರಾದ ಎ. ಪಿ. ಸೋಮಯ್ಯ, ಕುಸುಮ, ಕಾಂತರಾಜು, ಪ್ರತಾಪ್, ರೂಪಕಲಾ, ಹೇಮಮಾಲಿನಿ, ಗಣೇಶ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.