ಕೊಡ್ಲಿಪೇಟೆ: ಬೆಂಗಳೂರಿನ ಯೂತ್ ಫಾರ್ ಸೇವಾ ಸಂಸ್ಥೆಯ ಮೂಲಕ ಟೆಕ್ಸಾಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತು ಲೇಖನಿ ಪರಿಕರಗಳನ್ನು ವಿತರಿಸಲಾಯಿತು.
ಕೊಡ್ಲಿಪೇಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ೨೨೦ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಉರ್ದು ಶಾಲೆ, ದೊಡ್ಡಕೊಡ್ಲಿ ಮತ್ತು ಬ್ಯಾಡಗೊಟ್ಟ, ಊರುಗುತ್ತಿ, ಮೂದ್ರವಳ್ಳಿ ಎ. ಶಾಲೆಗಳ ಒಟ್ಟು ೩೫೦ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್, ಪೆನ್ಸಿಲ್, ಪೌಚ್, ಕ್ರಯನ್ಸ್, ಥರ್ಮಲ್ ಪ್ಲಾಸ್ಕ್, ಸ್ಟೋರಿ ಬುಕ್ ಸೇರಿದಂತೆ ತರಗತಿವಾರು ಲೇಖನಿ ಸಾಮಗ್ರಿಗಳನ್ನೊಳಗೊಂಡ ಬ್ಯಾಗ್‌ಗಳನ್ನು ಯೂತ್ ಫಾರ್ ಸೇವಾ ಸಂಸ್ಥೆಯ ಸ್ವಯಂ ಸೇವಕರು ವಿತರಿಸಿದರು.
ಪ್ರತಿ ವರ್ಷ ಶಾಲಾರಂಭ ಸಮಯದಲ್ಲಿ ಈ ಭಾಗದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಂಸ್ಥೆಯು ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದು ಶಿಕ್ಷಕ ವರ್ಗದವರು ಪ್ರಶಂಸೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸೇವಾ ಪ್ರತಿನಿಧಿ ಮೊÊದ್ದೀನ್ ಅಬ್ಬು ಶಿರಂಗಾಲ, ಶಾಲೆಯ ಶಿಕ್ಷಕ ವೃಂದ ಮತ್ತು ಶಾಲಾಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಇದ್ದರು.