ಮುಳ್ಳೂರು, ಜೂ. ೨೪: ಸಮೀಪದ ಶನಿವಾರಸಂತೆಯ ಸನ್ನಿಧಿ ವಿಶೇಷಚೇತನ ಮಕ್ಕಳ ಶಾಲೆಯ ವತಿಯಿಂದ ಶನಿವಾರಸಂತೆ ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ‘ಬ್ಯಾಗ್‌ಲೆಸ್ ಡೇ’ ದಿನದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಂದ ಸಂವಾದ ಕಾರ್ಯಕ್ರಮ ಮತ್ತು ನೃತ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಶಾಲೆಯ ವಿದ್ಯಾರ್ಥಿಗಳಾದ ಪ್ರಾರ್ಥನಾ, ಕನಕ, ಶಫಿಕ್, ಧನುಷ್, ಸಮೀರ್ ನೃತ್ಯ ಮತ್ತು ಸಂದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶೇಷಚೇತನ ಮಕ್ಕಳ ಶಾಲೆಯ ಶಿಕ್ಷಕಿಯರಾದ ಕಾವ್ಯ, ಭಾಗ್ಯಲಕ್ಷಿö್ಮ, ಶ್ರೀ ವಿಘ್ನೇಶ್ವರ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಮಹಮ್ಮದ್ ಜಹೀರ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುಚಿತ್ರ, ವಿದ್ಯಾಸಂಸ್ಥೆ ಶಿಕ್ಷಕರಾದ ಕೆ.ಪಿ. ಜಯಕುಮಾರ್, ಕೆ.ಪಿ. ಸಂದೇಶ್, ಅಂಜಿನಪ್ಪ, ಸವಿತ, ಶ್ರೀಕಲಾ, ಉಪನ್ಯಾಸಕರಾದ ಸರ್ಫ್ರಾಜ್ ಅಹಮ್ಮದ್, ತೀರ್ಥಾನಂದ್, ಭವ್ಯ ಮುಂತಾದವರು ಹಾಜರಿದ್ದರು.