ಮಡಿಕೇರಿ, ಜೂ.೨೩: ಕೊಡಗಿನಲ್ಲಿ ಮಿತಿ ಮೀರಿದ ವನ್ಯ ಜೀವಿ ಮಾನವ ಸಂಘರ್ಷ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರಕಾರ ಸ್ಪಂದನ ನೀಡುತ್ತಿಲ್ಲ ಎಂದು ಆರೋಪಿಸಿರುವ ಭಾರತೀಯ ಕಿಸಾನ್ ಸಂಘ ರಾಜ್ಯ ಸರಕಾರ ರೈತರು ಮತ್ತು ಬೆಳೆಗಾರರ ನೆರವಿಗೆ ಕೂಡಲೇ ಧಾವಿಸಬೇಕು ಎಂದು ಆಗ್ರಹಿಸಿದೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ರಾಷ್ಟಿçÃಯ ಅಧ್ಯಕ್ಷ ಕೆ.ಸಾಯಿ ರೆಡ್ಡಿ, ಕೊಡಗಿನಲ್ಲಿ ಆನೆ ಹುಲಿ ಧಾಳಿಯಿಂದ ಬಹಳಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಕಾಡಾನೆ, ಮಂಗಗಳು, ಹುಲಿ ಸಹಿತ ವನ್ಯ ಜೀವಿ ಮಾನವ ಸಂಘರ್ಷ ಹೆಚ್ಚಾಗಿದ್ದು ಪರಿಣಾಮವಾಗಿ ಮಾನವ ಜೀವ ಹಾನಿಯೊಂದಿಗೆ ಕೃಷಿ ಫಸಲುಗಳು ಕೂಡ ನಾಶವಾಗುತ್ತಿವೆ. ಈ ಸಮಸ್ಯೆಯನ್ನು ಪರಿಹಾರ ಮಾಡಲು ರಾಜ್ಯ ಸರಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರೈತರು ಬೆಳೆಗಾರರಿಗೆ ಸೂಕ್ತ ಪರಿಹಾರವೂ ಸಿಗುತ್ತಿಲ್ಲ. ಕೂಡಲೇ ರಾಜ್ಯ ಸರಕಾರ ರೈತರು ಮತ್ತು ಬೆಳೆಗಾರರ ನೆರವಿಗೆ ಮುಂದಾಗಬೇಕು ಹಾಗೂ ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ಬೆಲೆ ನಿಗದಿ ಮಾಡಿ ಖರೀದಿಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಭಾರತೀಯ ಕಿಸಾನ್ ಸಂಘ ೨೦೨೭ರಲ್ಲಿ ಸಂಘದ ಸದಸ್ಯತ್ವ ಸಂಖ್ಯೆಯನ್ನು ೧ ಕೋಟಿಗೆ ಏರಿಸಲು ಚಿಂತಿಸಿದ್ದು. ಕೊಡಗಿನಲ್ಲೂ ಸಂಘವನ್ನು ಬಲಿಷ್ಠಗೊಳಿಸಿ ಕೊಡಗಿನ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲೆಯ ಸಮಸ್ಯೆಗಳನ್ನು ರಾಷ್ಟç ಮಟ್ಟದಲ್ಲಿ ಪರಿಹರಿಸಲು ಕೂಡ ಪ್ರಯತ್ನಿಸಲಾಗುತ್ತದೆ ಎಂದು ಸಾಯಿ ರೆಡ್ಡಿ ಹೇಳಿದರು.

ಕಾಫಿ ಬೆಳೆಗಾರ ಮಾಚಿಮಾಡ ರವೀಂದ್ರ ಮಾತನಾಡಿ, ನಾಗರಹೊಳೆ ವನ್ಯಜೀವಿ ವಲಯ, ವೀರಾಜಪೇಟೆ, ಮಡಿಕೇರಿ, ಸೋಮವಾರಪೇಟೆ ವನ್ಯ ಜೀವಿ ವಲಯ ಸೇರಿ ೮೯೯ ಕಿ.ಮೀ. ಅರಣ್ಯದಂಚಿನ ಪ್ರದೇಶಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ಈ ಕುರಿತು ಅಧ್ಯಯನ ನಡೆಸಿ ೪ ತಿಂಗಳ ಹಿಂದೆ ಭಾರತೀಯ ಕಿಸಾನ್ ಸಂಘ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮಗಳ ಬಗ್ಗೆ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಗೆ ವರದಿ ನೀಡಿತ್ತು. ಆದರೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಇಂದಿಗೂ ಕ್ರಮಕ್ಕೆ ಮುಂದಾಗಿಲ್ಲ ಎಂದರು. ಕಾಡಾನೆ ಹಾವಳಿ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮಾಹಿ ಸಂಘದ ನಿರ್ದೇಶಕ ವಾಸುದೇವ್ ರಾವ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರೇ ಹೆಚ್ಚಿದ್ದು, ಕಾಫಿ ದರದ ಲಾಭಾಂಶದಿAದ ಕಾಫಿ ಬೆಳೆಗಾರರು ವಂಚಿತರಾಗುತ್ತಿದ್ದಾರೆ. ಕಾಫಿ ಉತ್ಪನ್ನ ಅವಲಂಬಿತ ಸಂಸ್ಥೆಗಳು ಕಾಫಿ ಬೆಳೆಸದಿದ್ದರೂ ಬೆಳೆಗಾರರಿಗಿಂತ ಹೆಚ್ಚಿನ ಲಾಭ ಗಳಿಸುತ್ತಿವೆ. ಇದು ಬೇಸರದÀ ವಿಚಾರವಾಗಿದ್ದು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಫ್‌ಪಿಓ ಸಂಸ್ಥೆಗಳ ಸಂಖ್ಯೆಯನ್ನು ಹೆಚ್ಚಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಭಾರತೀಯ ಕಿಸಾನ್ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಭಗವಾನ್ ಮಾತನಾಡಿ, ಸಿ ಮತ್ತು ಡಿ ಭೂಮಿ ವಿಚಾರ ಸಂಬAಧ ಹಲವಾರು ಬಾರಿ ಪ್ರತಿಭಟನೆಯೊಂದಿಗೆ ಬಂದ್ ಕೂಡ ಮಾಡಲಾಗಿತ್ತು. ಆದರೆ ರಾಜ್ಯ ಸರಕಾರ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೂ ಸರಕಾರ ಹೆಚ್ಚಿನ ಅನುದಾನ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಭಾರತೀಯ ಕಿಸಾನ್ ಸಂಘದ ಕೊಡಗು ಜಿಲ್ಲಾಧ್ಯಕ್ಷ ಎಂ.ಕೆ. ಪ್ರವೀಣ್ ಭೀಮಯ್ಯ, ಸಂಘದ ಸೋಮವಾರಪೇಟೆ ತಾಲೂಕು ಕಾರ್ಯದರ್ಶಿ ಪ್ರಸಾದ್ ಉಪಸ್ಥಿತರಿದ್ದರು.