ಕುಶಾಲನಗರ, ಜೂ. ೨೩ : ಕೊಡಗು ವಿಶ್ವ ವಿದ್ಯಾಲಯದಲ್ಲಿ ಶರಣ ಚಿಂತನೆ ಗಳ ಅಧ್ಯಯನಕ್ಕೆ ಬಸವ ಪೀಠ ಸ್ಥಾಪಿಸಬೇಕು. ಶಾಲಾ ಕಾಲೇಜುಗಳಲ್ಲಿ ಸರಳ ವಚನಗಳ ಕಂಠಪಾಠ ಮಾಡಿಸಬೇಕು.ಹಳ್ಳಿ ಹಳ್ಳಿಗಳಲ್ಲಿ ಪೂಜ್ಯರ ಸತ್ ಸಂಕಲ್ಪದAತೆ ಬಸವಾದಿ ಶರಣರ ಚಿಂತನೆಗಳನ್ನು ಹರಡಿ ಸಮಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಬೇಕಿದೆ ಎಂದು ಸಮ್ಮೇಳನಾಧ್ಯಕ್ಷ ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕೊಡಗು ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆ ವತಿಯಿಂದ ಇಲ್ಲಿನ ರೈತ ಭವನದಲ್ಲಿ ಆಯೋಜಿಸಿದ್ದ ಪ್ರಥಮ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ೧೨ನೇ ಶತಮಾನದ ಜಗಜ್ಯೋತಿ ಶ್ರೀ ಬಸವಣ್ಣ ನವರ ಶರಣ ಪರಂಪರೆ ನಮ್ಮ ಸಮಾಜದ ಎಲ್ಲ ವರ್ಗಗಳಿಗೂ ಸಂಬAಧಿಸಿದ ತತ್ವವಾಗಿದೆ.ಅದು ಯಾರನ್ನೂ ಹೊರಗಿಡುವುದಿಲ್ಲ. ಎಲ್ಲರನ್ನು ಒಳಗೊಳ್ಳುತ್ತದೆ. ಅದು ಮತದ ಸೀಮೆಯನ್ನು ಮೀರಿ ಮಾನವತೆಯ ಸಂದೇಶವನ್ನು ತೆರೆದಿಡುತ್ತದೆ. ಶರಣ ಸಿದ್ಧಾಂತದಲ್ಲಿ ಜಾತಿ,ಮತ,ವರ್ಗ, ಪ್ರವೇಶ,ಲಿಂಗ ಇಲ್ಲ.ಇರುವುದೆಂದರೆ ಮಾನವೀಯ ಸಂಬAಧ ಮತ್ತು ಸಹೋದರತೆ.ಇಂದಿನ ಸಮಾಜದಲ್ಲಿ ಒಡೆದುಹೋದ ಸಂಬAಧಗಳನ್ನು ಮರುಕಟ್ಟಲು ಈ ಒಂದೇ ವಚನ ಸಾಕು. ಒಂದೇ ವಚನದಿಂದ ಸಂಕುಚಿತ ಹೃದಯವನ್ನು ವಿಶಾಲಗೊಳಿಸಬಹುದು ಎಂದರು.

ಬಸವಣ್ಣ ನವರ ಕಾಯಕವೇ ಕೈಲಾಸ ಎಂಬ ತತ್ವ ಕೆಲಸವನ್ನು ದೈವತ್ವಕ್ಕೆ ಸಮೀಕರಿಸುತ್ತದೆ.ಕಾಯಕವೆಂದರೆ ಕೇವಲ ಕೆಲಸವಲ್ಲ.ಅದು ಧರ್ಮ,ಅದು ಶ್ರಮಕ್ಕೆ ನೀಡುವ ಪೂಜೆ.ಅದು ಬದುಕಿನಲ್ಲಿ ಸೋಮಾರಿತನಕ್ಕೆ ಕೊಡುವ ಉತ್ತರ.ಅದು ಸಮಾಜವನ್ನು ಕಟ್ಟುವ ನೈತಿಕ ಶಕ್ತಿಯಾಗಿದೆ ಎಂದು ಬಣ್ಣಿಸಿದರು.

ಕಾಯಕ ತತ್ವವನ್ನು ನಾವು ಇಂದಿನ ಆಧುನಿಕ ಯುಗದಲ್ಲಿ ಹೊಸ ಅರ್ಥದಲ್ಲಿ ಗ್ರಹಿಸಬೇಕು.ಉದ್ಯೋಗ, ಉದ್ಯಮ, ಶಿಕ್ಷಣ, ಕೃಷಿ,ಸಾರ್ವಜನಿಕ ಸೇವೆ,ಮಠಸೇವೆ ಎಲ್ಲವು ಕಾಯಕವೇ ಆಗಿದೆ.ಆದರೆ ಆ ಕಾಯಕವು ಶುದ್ಧ ಮನಸ್ಸಿನಿಂದ, ಸಮರ್ಪಣೆಯಿಂದ ಸ್ವಾರ್ಥವಿಲ್ಲದೆ ನಡೆಯಬೇಕು ಎಂದು ತಿಳಿಸಿದರು.

ಇಂದಿನ ಸಮಾಜದಲ್ಲಿ ಸಂಪತ್ತು ಕೆಲವರ ಕೈಯಲ್ಲಿ.ಜ್ಞಾನ ಕೆಲವರ ಭಾಷೆಯಲ್ಲಿ ಮತ್ತು ಅವಕಾಶ ಕೆಲವರ ಕೊಠಡಿಗಳಲ್ಲಿ ಸೀಮಿತವಾಗುತ್ತಿದೆ.ಶರಣ ದಾಸೋಹ ಈ ಅಸಮಾನತೆಯ ವಿರುದ್ದ ನಿಂತು ಎಲ್ಲರಿಗೂ ಬದುಕುವ ಹಕ್ಕು ಮತ್ತು ಬೆಳೆಯುವ ಹಕ್ಕು ಇರುವ ಸಮಾಜವನ್ನು ಕಲ್ಪಿಸುತ್ತದೆ.

ಅನುಭವ ಮಂಟಪದAತೆ ನಮ್ಮ ಶಿಕ್ಷಣ ಸಂಸ್ಥೆಗಳು ಸಾಹಿತ್ಯ ವೇದಿಕೆಗಳು,ಗ್ರಾಮಸಭೆಗಳು ಮತ್ತು ಯುವಸಂಘಗಳು ಸಂವಾದ ಮಯವಾಗಬೇಕು.ಶರಣ ಪರಂಪರೆಯಲ್ಲಿ ಪ್ರಶ್ನೆ ಅಪರಾಧವಲ್ಲ.ಅದು ಜಾಗೃತಿಯ ಆರಂಭ.ಪ್ರಶ್ನೆ ಕೇಳದ ಸಮಾಜ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಮೌನದ ಬಂಧನದಲ್ಲಿ ಸಿಲುಕುತ್ತದೆ ಎಂದು ಎಚ್ಚರಿಸಿದರು.

ಇಂದಿನ ಸಮಾಜದಲ್ಲಿ ಮಹಿಳಾ ಶಿಕ್ಷಣ, ಸ್ವಾಭಿಮಾನ, ನಿರ್ಣಯ ಹಕ್ಕು, ಸುರಕ್ಷತೆ ಕುರಿತ ಚರ್ಚೆಗಳನ್ನು ನಾವು ನಡೆಸುತ್ತಿರುವಾಗ ಅಕ್ಕನ ವಚನಗಳು ನಮ್ಮನ್ನು ಸಾವಿರ ವರ್ಷ ಹಿಂದೆಯೇ ಮುನ್ನಡೆಸಿದ ದಾರಿಯನ್ನು ನೆನಪಿಸುತ್ತವೆ.ಶರಣ ಪರಂಪರೆ ಮಹಿಳೆಯನ್ನು ಅಂಚಿಗೆ ತಳ್ಳಲಿಲ್ಲ ಕೇಂದ್ರದಲ್ಲಿ ನಿಲ್ಲಿಸಿತು.

ಹಿಂದೂ ,ಲಿಂಗಾಯತ, ಜೈನ, ಕ್ರೈಸ್ತ, ಮುಸ್ಲಿಂ, ಬೌದ್ಧ, ಸಿಖ್ ಯಾವ ಸಮುದಾಯದವರಾದರೂ ಶರಣ ತತ್ವದ ಸಮತೆ,ಕಾಯಕ,ದಾಸೋಹ, ಸತ್ಯ,ಮತ್ತು ಕರುಣೆಯನ್ನು ಅಳವಡಿಸಿಕೊಳ್ಳಬಹುದು.ಏಕೆಂದರೆ ಇದು ಮತಾಂತರವಲ್ಲ ಇದು ಮನಾಂತರ ಎಂದು ಅಭಿಪ್ರಾಯಪಟ್ಟರು. ಇಂದಿನ ಯುವ ಪೀಳಿಗೆಗೆ ಉದ್ಯೋಗ, ಉದ್ಯಮಶೀಲತೆ,ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಗಳ ಜೊತೆಗೆ ಮೌಲ್ಯಗಳು ಬೇಕು.ಈ ಮೌಲ್ಯಗಳನ್ನು ಶರಣ ಸಾಹಿತ್ಯ ನೀಡುತ್ತದೆ ಎಂದರು.