ಮಡಿಕೇರಿ, ಜೂ. ೨೩: ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಲವ್ ಜಿಹಾದ್ ವಿರುದ್ಧ ತಾ. ೩೦ ರಂದು ಕುಶಾಲನಗರದಲ್ಲಿ ಬೃಹತ್ ಜನಜಾಗೃತಿ ಆಂದೋಲನ ಕೈಗೊಂಡಿದ್ದು, ಇದಕ್ಕೆ ಹಿಂದೂ ಜಾಗರಣಾ ವೇದಿಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ವೇದಿಕೆಯ ಪ್ರಮುಖರು ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಂಯೋಜಕ ಬೋಜೇಗೌಡ, ಇತ್ತೀಚಿಗೆ ಕುಶಾಲನಗರದಲ್ಲಿ ವಿವಾಹಿತ ಮಹಿಳೆಯನ್ನು ಸೆಳೆದು ಲವ್ ಜಿಹಾದ್‌ಗೊಳಪಡಿಸಿ ಕೇರಳಕ್ಕೆ ಕರೆದೊಯ್ದು ಮತಾಂತರ ಮಾಡಿದಲ್ಲದೆ ಆಕೆಯ ಮಗನನ್ನು ಬಲವಂತವಾಗಿ ಮತಾಂತರ ಮಾಡಿಸಿರುವುದು ಖಂಡನೀಯವಾಗಿದ್ದು, ಲವ್‌ಜಿಹಾದ್ ಪ್ರಕರಣಗಳಿಗೆ ಈ ಘಟನೆ ಪುಷ್ಠಿ ನೀಡುತ್ತದೆ. ಅನ್ಯಕೋಮಿನವರು ವ್ಯಾಪಾರ, ವ್ಯವಹಾರ ನಡೆಸಲು ನಮ್ಮ ಅಡ್ಡಿಯಿಲ್ಲ. ಆದರೆ, ವ್ಯಾಪಾರ ಕೇಂದ್ರಗಳಲ್ಲಿ ಕೆಲಸ ಮಾಡುವ ಹಿಂದೂ ಯುವತಿಯರನ್ನು ಪುಸಲಾಯಿಸಿ ಈ ರೀತಿ ಮತಾಂತರಕ್ಕೊಳಪಡಿಸಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕುಶಾಲನಗರ ಭಾಗದಲ್ಲಿ ಈ ರೀತಿ ೧೨ಕ್ಕೂ ಹೆಚ್ಚು ಪ್ರಕರಣಗಳು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ನಡೆದಿವೆ ಎಂಬ ಮಾಹಿತಿ ಇದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ಕೈಗೊಳ್ಳಬೇಕು. ತಾಯಿ ಹಾಗೂ ಮಗನ ಮತಾಂತರ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸಮರ್ಪಕವಾಗಿ ತನಿಖೆ ನಡೆಸಬೇಕು. ಮತಾಂತರಗೊAಡವರನ್ನು ಉಗ್ರಗಾಮಿಗಳನ್ನಾಗಿ ರೂಪಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಗುಡ್ಡೆಹೊಸೂರಿನ ಯುವತಿಯೂ ಇದೇ ರೀತಿ ಮತಾಂತರಕ್ಕೊಳಗಾಗಿ ಅಂತರರಾಷ್ಟಿçÃಯ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾದ ಘಟನೆಯೂ ಎನ್‌ಐಎ ತನಿಖೆ ವೇಳೆ ಬಹಿರಂಗಗೊAಡಿದೆ. ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳದಿದ್ದಲ್ಲಿ ಹಿಂದೂ ಸಂಘಟನೆಗಳು ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಎಚ್ಚರಿಸಿದರು.

ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್ ಕುಕ್ಕೇರ ಮಾತನಾಡಿ, ದೇಶವ್ಯಾಪಿ ಲವ್‌ಜಿಹಾದಿ ಕೃತ್ಯಗಳು ನಡೆಯುತ್ತಿದ್ದು, ಹಿಂದೂ ಸಮಾಜವನ್ನು ಅವನತಿಗೊಳಿಸುವ ಕೃತ್ಯವನ್ನು ಮತಾಂದ ಶಕ್ತಿಗಳು ನಡೆಸುತ್ತಿವೆ. ಕುಶಾಲನಗರದ ತಾಯಿಯೊಂದಿಗೆ ಆತನ ಮಗನನ್ನು ಬಲವಂತವಾಗಿ ಮತಾಂತರ ಮಾಡಿರುವುದು ಖಂಡನೀಯ. ಈ ಪ್ರಕರಣದಲ್ಲಿ ಭಾಗಿಯಾದವರೆಲ್ಲರನ್ನು ತನಿಖೆಗೆ ಒಳಪಡಿಸಬೇಕು. ಕೇರಳದ ಧರ್ಮಗುರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಬೇಕು. ಪೊಲೀಸ್ ಇಲಾಖೆ ಸಮರ್ಪಕವಾಗಿ ತನಿಖೆ ನಡೆಸುತ್ತಿಲ್ಲ ಎಂಬುದು ಎದ್ದು ಕಾಣುತ್ತಿದೆ ಎಂದು ಆರೋಪಿಸಿದ ಅವರು, ಹೀಗೆ ಮುಂದುವರೆದರೆ ಹಿಂದೂ ಸಮಾಜವೇ ಕಾರ್ಯೋನ್ಮುಖಗೊಳ್ಳಬೇ ಕಾಗುತ್ತದೆ ಎಂದು ಎಚ್ಚರಿಸಿದರು. ಕುಶಾಲನಗರದಲ್ಲಿ ತಾ. ೩೦ ರಂದು ಜನಜಾಗೃತಿ ಜನಾಂದೋಲನ ನಡೆಯಲಿದ್ದು, ಮೊದಲು ಬೆಳಿಗ್ಗೆ ೧೦.೩೦ಕ್ಕೆ ನಿಸರ್ಗಧಾಮ ಎದುರಿನಿಂದ ಗಣಪತಿ ದೇವಾಲಯ ತನಕ ಜಾಥಾ ನಡೆಸಿ ಬಳಿಕ ಸಮಾವೇಶ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ತಿಮ್ಮಯ್ಯ, ಸುನಿಲ್ ಮಾದಾಪುರ, ಮಡಿಕೇರಿ ತಾಲೂಕು ಸಂಯೋಜಕ ಅಪ್ಪು ರೈ, ಪ್ರಚಾರ ಪ್ರಮುಖ್ ಭುವನ್ ಹಾಜರಿದ್ದರು.