ವೀರಾಜಪೇಟೆ, ಜೂ. ೨೩: ಬೆಂಗಳೂರಿನಿAದ ವೀರಾಜಪೇಟೆಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಇಲೆಕ್ಟಿçಕ್ ಬಸ್ಸೊಂದು ತಾಂತ್ರಿಕ ದೋಷದಿಂದ ಕಳೆದ ೩ ದಿನಗಳಿಂದ ವೀರಾಜಪೇಟೆ - ಗೋಣಿಕೊಪ್ಪ ಮುಖ್ಯ ರಸ್ತೆಯ ಪಂಜರಪೇಟೆ ಬಳಿ ನಿಂತಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.

ತಾAತ್ರಿಕ ಸಮಸ್ಯೆ ಉಂಟಾದ ಬೆನ್ನಲ್ಲೇ ಚಾಲಕ ದಿನೇಶ್ ಅವರು ಬಸ್ಸಿನಲ್ಲೇ ತಂಗಿದ್ದಾರೆ. ದುರಸ್ತಿಗೆ ಬೆಂಗಳೂರಿನಿAದ ಮೆಕಾನಿಕ್ ಬರಬೇಕಾಗಿದೆ ಎಂದು ತಿಳಿದುಬಂದಿದೆ. ಕೇವಲ ೧೦೦ ಮೀಟರ್ ದೂರದಲ್ಲಿ ರಾಜ್ಯ ಸಾರಿಗೆ ಬಸ್ ನಿಲ್ದಾಣವಿದ್ದು, ಅಲ್ಲಿ ಸಾಕಷ್ಟು ಜಾಗ ಲಭ್ಯವಿದ್ದರೂ ಬಸ್ ಅನ್ನು ಮುಖ್ಯ ರಸ್ತೆಯಲ್ಲೇ ನಿಲ್ಲಿಸಲಾಗಿದೆ.

ವೀರಾಜಪೇಟೆ ಪಟ್ಟಣದಲ್ಲಿ ಈಗಾಗಲೇ ವಾಹನ ದಟ್ಟಣೆ ಅಧಿಕವಾಗಿದೆ. ಇಂತಹ ಸಂದರ್ಭದಲ್ಲಿ ಮುಖ್ಯ ರಸ್ತೆಯಲ್ಲೇ ಬಸ್ ನಿಂತಿರುವುದರಿAದ ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಈ ಬಗ್ಗೆ ಸ್ಥಳೀಯರು ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದು, ತಕ್ಷಣ ಬಸ್ ದುರಸ್ತಿ ಮಾಡಿ ಅಥವಾ ಬಸ್ ನಿಲ್ದಾಣದ ಆವರಣಕ್ಕೆ ಸ್ಥಳಾಂತರಿಸಿ, ರಸ್ತೆ ಸಂಚಾರ ಸುಗಮಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೆಎಸ್‌ಆರ್‌ಟಿಸಿ ನಿಯಮಗಳ ಪ್ರಕಾರ ಕೆಟ್ಟು ನಿಂತ ವಾಹನವನ್ನು ೨೪ ಗಂಟೆಯೊಳಗೆ ರಸ್ತೆಯಿಂದ ತೆರವು ಮಾಡಬೇಕು. ಆದರೆ ೩ ದಿನ ಕಳೆದರೂ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.