ಮಡಿಕೇರಿ, ಜೂ. ೨೨; ಕಸದ ಸಮಸ್ಯೆ ಕುಡಿಯುವ ನೀರು ಹಾಗೂ ಕಾಡಾನೆ ಹಾವಳಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನೆ ರೂಪಿಸುವಂತೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿAದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು; ಆರಂಭದಲ್ಲಿಯೇ ಮಡಿಕೇರಿ ನಗರದ ಕಸ ವಿಲೇವಾರಿ ಬಗ್ಗೆ ಮಾಹಿತಿ ಬಯಸಿದರು. ಮತ್ತೆ ಮಳೆಯ ನೆಪ ಹೇಳದೆ ಕಸ ತೆರವು ಮಾಡಿರುವ ಬಗ್ಗೆ ಮಾಹಿತಿ ನೀಡಿ ಎಂದು ಹೇಳಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ನಗರಸಭಾ ಪೌರಾಯುಕ್ತ ರಮೇಶ್; ಈಗಾಗಲೇ ಪಾರಂಪರಿಕ ಕಸದ ವಿಂಗಡಣಾ ಕಾರ್ಯ ಶೇ.೭೦ರಷ್ಟು ಆಗಿದೆ. ಉಳಿಕೆಯಾದ ಆರ್‌ಡಿಎಫ್ ಕಸವನ್ನು ಗುತ್ತಿಗೆದಾರರು ಕೊಂಡೊಯ್ಯಲಿದ್ದಾರೆ ಎಂದು ತಿಳಿಸಿದರು. ಡಿಯುಡಿಸಿ ಅಭಿಯಂತರ ಮಂಜುನಾಥ್ ಮಾತನಾಡಿ; ೨೦೧೮ರಲ್ಲಿ ಅಳತೆ ಮಾಡಿದ ಸಂದರ್ಭ ೭೬,೬೩೬ ಮೆ.ಟನ್‌ನಷ್ಟು ಕಸ ಸಂಗ್ರಹವಾಗಿರುವದು ಕಂಡುಬAದಿದ್ದು, ನಂತರದಲ್ಲಿ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿತ್ತು. ಇದೀಗ ಶೇ.೭೦ರಷ್ಟು ವಿಂಗಡಣೆ ಮಾಡಲಾಗಿದೆ. ಮೂರು ವಿಭಾಗಗಳಾಗಿ ವಿಂಗಡಣೆ ಮಾಡಲಾಗುತ್ತಿದೆ. ಗುತ್ತಿಗೆ ನೀಡಿದ ನಂತರ ಕಳೆದ ಏಪ್ರಿಲ್ ತಿಂಗಳಿಗೆ ವಿಂಗಡಣೆ ಹಾಗೂ ತೆರವು ಕಾರ್ಯ ಪೂರ್ಣಗೊಳ್ಳಬೇಕಿತ್ತು. ಆದರೆ ಮಳೆಯ ಕಾರಣದಿಂದ ವಿಳಂಬವಾಗಿರುವದಾಗಿ ಮಾಹಿತಿ ನೀಡಿದರು. ಮಧ್ಯಪ್ರವೇಶಿಸಿದ ಸಂಸದರು; ಶೇ.೭೦ರಷ್ಟು ಕೆಲಸವಾಗಿದ್ದರೆ ಅಷ್ಟೊಂದು ಕಸದ ರಾಶಿ ಎದ್ದು ಕಾಣುತ್ತಿದೆ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಮಂಜುನಾಥ್; ಪ್ರಸ್ತುತ ಕಸಹಾಕಲು ಜಾಗದ ಸಮಸ್ಯೆಯಿದ್ದು, ೨೦೧೮ರ ನಂತರದಲ್ಲಿ ಶೇ.೭೦ರಷ್ಟು ಕಸ ಜಾಸ್ತಿಯಾಗಿದೆ. ಆ ಕಸದ ರಾಶಿ ಬೆಳೆಯತ್ತಿದೆ ಎಂದು ತಿಳಿಸಿದರು.
ದಿಶಾ ಸಮಿತಿ ಸದಸ್ಯ ಡಾ. ಬಿ.ಸಿ. ನವೀನ್‌ಕುಮಾರ್ ಮಾತನಾಡಿ; ವೈಜ್ಞಾನಿಕವಾಗಿ ಕಸ ವಿಂಗಡಣೆ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಮಾತನಾಡಿ; ಜಾಗ ಯಾವದೆಂದು ಅರಿತುಕೊಳ್ಳದೆ ಜಾಗ ಗುರುತು ಮಾಡಲಾಗಿದೆ, ಸಭೆಯಲ್ಲಿ ಚರ್ಚೆಯಾಗುವ ವಿಚಾರಗಳ ಪರಿಹಾರಕ್ಕೆ ಕ್ರಮ ವಹಿಸುತ್ತಿಲ್ಲ. ಕಸ ಜಾಸ್ತಿ ಬರುತ್ತಿದೆ ಎಂದು ತಿಳಿದ ಮೇಲೆಯೂ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೀರಾ. ಕಸ ತೆರವು ಮಾಡಲು ದಿನಾಂಕ ನಿಗದಿ ಮಾಡಿ ಎಂದು ಹೇಳಿದರು. ಈ ಸಂದರ್ಭ ಮಾತನಾಡಿದ ಸಂಸದರು; ಈ ಹಿಂದೆಯೇ ದಿನಾಂಕ ನೀಡಲಾಗಿತ್ತಾದರೂ ತೆರವುಗೊಳಿಸಿಲ್ಲ. ಈಗಾಗಲೇ ಅರಣ್ಯ ಇಲಾಖೆಯವರು ಪರ್ಯಾಯ ಜಾಗ ನೋಡಿದ್ದಾರೆ. ಜಾಗ ಪರಿಶೀಲನೆ ಮಾಡಿ ಸೂಕ್ತವಾಗಿದೆಯೇ ಎಂದು ವರದಿ ಸಲ್ಲಿಸಿ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಬೇಕಿದ್ದು, ನೆರೆಯ ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ತೆರಳಿ ವಿಚಾರಿಸಿ ಕಸ ತೆರವಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರಲ್ಲದೆ, ಎಷ್ಟು ದಿವಸಗಳಲ್ಲಿ ಕಸ ತೆರವು ಮಾಡಲಾಗುತ್ತದೆ ಎಂದು ತಿಳಿಸುವಂತೆ ಹೇಳಿದರು. ಈ ಸಂದರ್ಭ ಮಾತನಾಡಿದ ಅಧಿಕಾರಿ ಮಂಜುನಾಥ್; ಮುಂದಿನ ಹದಿನೈದು ದಿನಗಳಲ್ಲಿ ತೆರವುಗೊಳಿಸಲಾಗುವದೆಂದು ಭರವಸೆ ನೀಡಿದರು.
ಜಿಲ್ಲೆಯಾದ್ಯಂತ ಸಮಸ್ಯೆ
ಕಸದ ಬಗ್ಗೆ ಚರ್ಚೆ ಮುಂದುವರಿಯುತ್ತಲೇ ಮಾತನಾಡಿದ ದಿಶಾ ಸದಸ್ಯೆ ಕಾಂತಿ ಸತೀಶ್; ಕಸ ವಿಲೇವಾರಿಯದ್ದು ದೊಡ್ಡ ಸಮಸ್ಯೆಯಾಗಿದೆ. ಮಡಿಕೇರಿ ಮಾತ್ರವಲ್ಲ; ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸಮಸ್ಯೆ ಇದೆ ಎಂದು ಸಭೆಯ ಗಮನಕ್ಕೆ ತಂದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ; ಕಸ ನಿರ್ವಹಣೆ ಬಗ್ಗೆ ಗ್ರಾಮ ಪಂಚಾಯ್ತಿಗಳಿಗೆ ನೋಟೀಸ್ ಬಂದಿದೆ. ಈ ಬಗ್ಗೆ ಯಾವ ರೀತಿ ಕ್ರಮ ಆಗಿದೆ, ಹೋಂಸ್ಟೇ, ರೆಸಾರ್ಟ್ಗಳಲ್ಲಿ ಕಸದ ನಿರ್ವಹಣೆ ಬಗ್ಗೆ ಗಮನ ಹರಿಸಬೇಕು, ಕಸÀಗಳನ್ನು ರಸ್ತೆ ಬದಿಗೆ ಸುರಿಯಲಾಗುತ್ತಿದೆ. ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘನೆ ಮಾಡುವ ಹೋಂ ಸ್ಟೇ, ರೆಸಾರ್ಟ್ಗಳ ಪರವಾನಗಿ ರದ್ದು ಮಾಡಬೇಕೆಂದು ಹೇಳಿದರು.
೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ; ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಜನರಿಂದ ಹಣ ಸಂಗ್ರಹಣೆ ಮಾಡಬೇಕಿದ್ದು, ಕಷ್ಟವಾಗುತ್ತಿದೆ. ಸ್ವಚ್ಛ ಭಾರತ್ ಯೊಜನೆಯಡಿ ಎಲ್ಲಾ ಪಂಚಾಯ್ತಿಗಳಿಗೆ ವಾಹನ ಒದಗಿಸಲಾಗಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಬೋಜೇಗೌಡರು ಮಾತನಾಡಿ; ಕ್ರಮ ಮಾತ್ರ ಆಗಬಾರದು; ಸೂಕ್ತ ಫಲಿತಾಂಶ ಸಿಗಬೇಕು. ನಿರ್ವಹಣೆ ಕಷ್ಟವಾದರೆ ಯಾವದಾದರೂ ಏಜೆನ್ಸಿಗೆ ವಹಿಸುವಂತೆ ಸೂಚಿಸಿದರು.
ಸಂಸದರು ಮಾತನಾಡಿ; ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಎಲ್ಲ್ಲಾ ರೀತಿಯಲ್ಲಿಯೂ ಕೆಲಸಗಳಾಗುತ್ತಿದ್ದರೂ ಫಲಿತಾಂಶ ಸಿಗುತ್ತಿಲ್ಲ. ಕ್ರಿಯಾಶೀಲರಾಗಿ ಏನು ಮಾಡಬಹುದೆಂದು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳನ್ನೊಳಗೊಂಡು ಚರ್ಚೆ ಮಾಡಿ, ನೆರೆಯ ಜಿಲ್ಲೆಗಳಿಗೆ ಭೇಟಿ ಮಾಡಿ ಕ್ರಿಯಾಯೋಜನೆ ತಯಾರಿಸಿ ಕಾರ್ಯೋನ್ಮುಖರಾಗುವಂತೆ ಸೂಚನೆ ನೀಡಿದರು. ಕಸದ ವಿಚಾರ ಮುಂದಿನ ಸಭೆಗೆ ಬರಬಾರದು. ಈ ಬಗ್ಗೆ ಯೋಜನೆ ರೂಪಿಸಿ ವರದಿ ನೀಡುವಂತೆ ತಾಕೀತು ಮಾಡಿದರು.
ಕುಡಿಯುವ ನೀರು
ಅಮೃತ್ ೨.೦ ಯೋಜನೆಯ ಪ್ರಗತಿ ಬಗ್ಗೆ ಸಂಸದರು ಸಭೆಯಲ್ಲಿ ಮಾಹಿತಿ ಬಯಸಿದರು. ಅಮೃತ್ ೨.೦ ಯೋಜನೆಯಡಿ ಮಡಿಕೇರಿ, ಕುಶಾಲನಗರ, ವೀರಾಜಪೇಟೆ, ಸೋಮವಾರಪೇಟೆ ಮತ್ತು ಪೊನ್ನಂಪೇಟೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಸಂಬAಧಿಸಿದAತೆ ಮಾಹಿತಿ ನೀಡಿದ ಇಂಜಿನಿಯರ್ ಜಯಕುಮಾರ್; ಮಡಿಕೇರಿಯಲ್ಲಿ ೪೫ ಕೋಟಿ ರೂ. ವೆಚ್ಚದಲ್ಲಿ ಯೋಜನಾ ಕಾಮಗಾರಿ ಕೈಗೊಳ್ಳಲಾಗಿದ್ದು, ಶೇ.೭೦ ರಷ್ಟು ಪ್ರಗತಿ ಸಾಧಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗಡೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು. ಅಮೃತ್ ೨.೦ ಯೋಜನೆ ಜಿಲ್ಲೆಯಲ್ಲಿ ಮತ್ತಷ್ಟು ಪ್ರಗತಿ ಸಾಧಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಅನುಸರಿಸಬಾರದು ಎಂದು ಸಂಸದರು ನಿರ್ದೇಶನ ನೀಡಿದರು.
ರಾಜ್ಯದಲ್ಲಿ ಹೆಚ್ಚಾಗಿ ಮಳೆಬೀಳುವ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದು ಬೇಸರ ತರಿಸುತ್ತದೆ. ಈ ವರ್ಷ ಮುಂಗಾರು ಆರಂಭ ಸರಿಯಾಗಿ ಮಳೆ ಆಗದಿದ್ದರೂ ಸಹ ಜಲಮೂಲವನ್ನು ಸಂರಕ್ಷಿಸುವಲ್ಲಿ ಮುಂದಾಗಬೇಕು. ಕೆರೆ, ಕಟ್ಟೆ, ಬಾವಿ, ಹಳ್ಳ, ಕೊಳ್ಳಗಳು ಹಾಗೂ ತೊರೆಗಳಲ್ಲಿ ನೀರು ಇದ್ದು, ಕುಡಿಯುವ ನೀರು ಪೂರೈಕೆಯಲ್ಲಿ ಟ್ಯಾಂಕರ್ ಬಳಸುವುದು ಸರಿಯಲ್ಲ ; ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ, ಮುಂದಿನ ದಿನಗಳಲ್ಲಿ ಮಳೆ ಆಗುವ ಸಾಧ್ಯತೆ ಇದ್ದು, ಕುಡಿಯುವ ನೀರು ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಬೋಜೇಗೌಡರು ಕಾಮಗಾರಿಯ ಗುತ್ತಿಗೆದಾರರಿಗೆ ಎಷ್ಟು ಹಣ ಪಾವತಿಯಾಗಿದೆ ಎಂದು ಪ್ರಶ್ನಿಸಿದಾಗ ಅಭಿಯಂತರರು; ೪೦ ಕೋಟಿ ಪಾವತಿಯಾಗಿರುವದಾಗಿ ಮಾಹಿತಿ ನೀಡಿದಾಗ ಅರ್ಧದಷ್ಟು ಕಾಮಗಾರಿಯಾಗದಿದ್ದರೂ ಮುಕ್ಕಾಲು ಭಾಗ ಹಣ ಪಾವತಿ ಮಾಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅಮೃತ್ ೨ ಯೋಜನೆ ಪ್ರಗತಿ ಕುರಿತು ಲೋಕಾಯುಕ್ತ ತನಿಖೆಯಾಗಬೇಕು ಎಂದು ದಿಶಾ ಸಮಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಒತ್ತಾಯಿಸಿದರು. ಇದಕ್ಕೆ ಸದಸ್ಯೆ ಕಾಂತಿ ಸತೀಶ್ ಕೂಡ ದನಿಗೂಡಿಸಿದರು.
ಜಲಜೀವನ್ ಮಿಷನ್ ಯೋಜನೆಗೆ ಸಂಬAಧಿಸಿದAತೆ ಮಾಹಿತಿ ನೀಡಿದ ಕಾರ್ಯಪಾಲಕ ಇಂಜಿನಿಯರ್ ಭಾಸ್ಕರ್ ಅವರು ಜಲಜೀವನ್ ಮಿಷನ್‌ಯಡಿ ಪ್ರತಿ ಮನೆಗೂ ನಲ್ಲಿ ನೀರು ಪೂರೈಸುವತ್ತ ಗಮನಹರಿಸಲಾಗಿದೆ ಎಂದರು.
ಭೋಜೇಗೌಡ ಅವರು ಜಲಜೀವನ್ ಮಿಷನ್ ಪ್ರಗತಿ ಯೋಜನೆ ಸಂಬAಧಿಸಿದAತೆ ಸ್ಥಳೀಯ ಪ್ರತಿನಿಧಿಗಳನ್ನು ಆಹ್ವಾನಿಸಿ ಮಾಹಿತಿ ನೀಡಬೇಕು. ಕಾಮಗಾರಿ ಪೂರ್ಣಗೊಂಡಿರುವ ನಂತರ ಸ್ಥಳೀಯರಿಗೆ ಮಾಹಿತಿ ನೀಡಬೇಕು ಎಂದರು.
ಈ ಕುರಿತು ಮಾತನಾಡಿದ ನಾಗೇಶ್ ಕುಂದಲ್ಪಾಡಿ ಅವರು ಕೇಂದ್ರ ಸರ್ಕಾರ ಅಮೃತ್ ೨.೦ ಯೋಜನೆಗೆ ಸಂಬAಧಿಸಿದAತೆ ಶೇ.೧೦ ರಷ್ಟು ಪ್ರಗತಿ ಸಾಧಿಸಿಲ್ಲ. ಕಾಮಗಾರಿ ಪೂರ್ಣಗೊಂಡ ನಂತರ ಪಂಚನಾಮೆ ಆಗಬೇಕು. ಆದರೆ ಯಾವುದೇ ಕೆಲಸ ಆಗಿಲ್ಲ ಎಂದು ದೂರಿದರು. ಜಲಜೀವನ್ ಮಿಷನ್ ಯೋಜನೆ ಸಂಬAಧಿಸಿದAತೆ ಮಾಹಿತಿ ತರಿಸಿಕೊಳ್ಳಲಾಗುವುದು. ತಾ.ಪಂ.ಇಒಗಳು ಎಲ್ಲಾ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಈ ಯೋಜನೆ ಬಗ್ಗೆ ಮಾಹಿತಿ ಪಡೆಯಬೇಕು. ಕೇಂದ್ರ ಸರ್ಕಾರದ ಯೋಜನೆಗಳು ಪರಿಣಾಮಕಾರಿಯಾಗಿ ಅರ್ಹರಿಗೆ ತಲುಪಬೇಕು ಎಂದರು. ಈ ಕುರಿತು ಮಾತನಾಡಿದ ಸಂಸದರು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ವರದಿ ನೀಡಿ, ಗ್ರಾಮ ಪಂಚಾಯಿತಿಗೆ ವರದಿ ನೀಡಬೇಕು ಎಂದರು.
ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಪ್ರಗತಿ ಸಂಬAಧಿಸಿದAತೆ ಮುಂದಿನ ಸಭೆಯಲ್ಲಿ ಸರಿಯಾದ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮವಹಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಡಾನೆ ಸಮಸ್ಯೆ
ಅರಣ್ಯ ಇಲಾಖೆಗೆ ಸಂಬAಧಿಸಿದ ವಿಚಾರಗಳ ಬಗ್ಗೆ ಚರ್ಚೆ ಆರಂಭವಾಗುತ್ತಿದ್ದAತೆ ಮಾತನಾಡಿದ ಸಂಸದರು; ಪ್ರೋಜೆಕ್ಟ್ ಎಲಿಫೆಂಟ್ ಯೋಜನೆಗೆ ಸಂಬAಧಿಸಿದAತೆ ಹೆಚ್ಚಿನ ಹಣ ಕೇರಳ ರಾಜ್ಯ ಪಡೆದಿದ್ದು, ಕರ್ನಾಟಕಕ್ಕೆ ಕಡಿಮೆ ಹಣ ಬಂದಿದೆ ಎಂಬ ಅಪಪ್ರಚಾರ ಮಾಡಲಾಗುತ್ತಿದ್ದು, ಇದು ಸರಿಯಲ್ಲ. ಕೇಂದ್ರದಿAದ ರಾಜ್ಯಕ್ಕೆ ಬರಬೇಕಿರುವ ಹಣ ಬಂದಿದ್ದು, ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಅಗತ್ಯ ಕ್ರಮವಹಿಸಬೇಕಿದೆ. ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಪರಿಸರವಾದಿ ಸಂಘಟನೆಗಳಿಗೆ ಹಣ ಒದಗಿಸಿಕೊಳ್ಳುವ ಸಲುವಾಗಿ ಕೆಲವೊಬ್ಬರು ವಿರೋಧ ಮಾಡುತ್ತಿದ್ದು, ಅಂತಹ ಸಂಘಟನೆಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಕಾಡಿನೊಳಗಡೆ ಕೆರೆ, ಹಳ್ಳ ತೋಡಬೇಕಿಲ್ಲ, ಅದು ನೈಸರ್ಗಿಕವಾಗಿಯೇ ಆಗುತ್ತದೆ. ಕಾಡಿನಲ್ಲಿರುವ ಹಾಗೂ ತೋಟದೊಳಗಡೆ ಇರುವ ಆನೆಗಳ ವರ್ತನೆ ಬೇರೆ ರೀತಿಯೇ ಇರುತ್ತದೆ. ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುಜಾ ಕುಶಾಲಪ್ಪ ಅವರು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯವರ ಕಿರುಕುಳ ಹೆಚ್ಚಾಗಿದ್ದು, ಇದು ನಿಲ್ಲಬೇಕು. ರೈತರು ಹಾಗೂ ಇತರರಿಗೆ ತೊಂದರೆ ನೀಡಬಾರದು. ಸ್ಥಳೀಯರಿಂದಲೇ ಅರಣ್ಯ ಉಳಿದಿದೆ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು; ಮಾನವ ಮತ್ತು ವನ್ಯಪ್ರಾಣಿಗಳ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಹಲವು ಸುತ್ತಿನ ಚರ್ಚೆಗಳು ನಡೆದಿದೆ ಎಂದರು.
ಭೋಜೇಗೌಡ ಮಾತನಾಡಿ ವನ್ಯಪ್ರಾಣಿಗಳು ಕಾಡಿನಲ್ಲಿ ಇರುವಂತಾಗಲು ಹಲಸು, ಬಿದಿರು, ಬಾಳೆ ಮತ್ತಿತರ ಹಣ್ಣಿನ ಗಿಡಗಳನ್ನು ನೆಡುವಂತಾಗಬೇಕು. ನೀಲಗಿರಿ ಮತ್ತು ಅಕೇಶಿಯಾ ಮರಗಳನ್ನು ಬುಡಸಮೇತ ತೆರವುಗೊಳಿಸಬೇಕು. ಜೊತೆಗೆ ಸೋಲಾರ್ ತಂತಿ ಬೇಲಿ ಅಳವಡಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
ಸಮಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಮಾತನಾಡಿ; ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾಡಾನೆಗಳಿವೆ, ಆನೆಗಳ ಸಂಖ್ಯೆ ಜಾಸ್ತಿಯಾಗಿವೆ ಎಂದು ಹೇಳಿದರು. ಸದಸ್ಯ ಆರ್..ಕೆ. ಚಂದ್ರು ಮಾತನಾಡಿ ; ಬ್ಯಾರಿಕೇಡ್ ಹಾಕುವ ಸಂದರ್ಭ ಸ್ಥಳೀಯರ ಸಲಹೆ ಪಡೆದುಕೊಂಡು ವೈಜ್ಞಾನಿಕವಾಗಿ ಹಾಕಬೇಕು. ಕಳಪೆ ಕೆಲಸ ಮಾಡಬಾರದೆಂದು ಸಲಹೆ ಮಾಡಿದರು. ಪರಿಶಿಷ್ಟರು ವಾಸಿಸುವ ಹಾಡಿಗಳ ಬಳಿ ಕಾಡಾನೆ ದಾಳಿ ಮಾಡುತ್ತಿದ್ದರೂ ಅದನ್ನು ಹಿಡಿಯಲು ಇಲಾಖೆ ಮುಂದಾಗುತ್ತಿಲ್ಲ ಎಂದು ಆರೋಪ ಮಾಡಿದರು.
ಪ್ರತಿಕ್ರಿಯಿಸಿದ ಬೋಜೇಗೌಡರು ಆನೆ ಹಿಡಿಯಲು ಸಮಯ ನಿಗದಿ ಮಾಡಿ ಕ್ರಮ ಕೈಗೊಳ್ಳುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರಿಗೆ ಸೂಚಿಸಿದರು. ಉಪ ಅರಣ್ಯ ಸಂಕ್ಷಣಾಧಿಕಾರಿ ಅಭಿಷೇಕ್ ಮಾತನಾಡಿ ವನ್ಯಪ್ರಾಣಿಗಳ ಹಾವಳಿ ತಡೆಯುವಲ್ಲಿ ಪ್ರತಿ ಕಿ.ಮೀ.ಗೆ ಒಂದೂವರೆ ಕೋಟಿ ರೂ. ಬೇಕಾಗುತ್ತದೆ ಎಂದು ಹೇಳಿದರು. ಅಧಿಕಾರಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸಂಸದರು ಮಾತನಾಡಿ; ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಜನರಿಗೆ ತೊಂದರೆ ಕೊಡುವ ಆನೆಗಳನ್ನು ಹಿಡಿದು ಮತ್ತೊಂದು ಆನೆ ಶಿಬಿರ ನಿರ್ಮಿಸಿದಲ್ಲಿ ಪ್ರವಾಸಿಗರಿಗೂ ನೋಡಲು ಸಾಧ್ಯವಾಗುತ್ತದೆ. ಆನೆ ಹಾವಳಿ ಸಮಸ್ಯೆ ಕಡಿಮೆಯಾಗಲಿದೆ. ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ನೆರೆ ಜಿಲ್ಲೆಗಳಿಗೆ ಸಂಪರ್ಕ ಸಾಧಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್. ಹಾದಿಮನಿ, ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ವ್ಯಾಪ್ತಿಗೆ ಸಂಬAಧಿಸಿದAತೆ ಮಾಹಿತಿ ನೀಡಿದರು.