ಸುಂಟಿಕೊಪ್ಪ, ಜೂನ್ ೨೦: ಪದಗ್ರಹಣ ಸಮಾರಂಭವು ಕೇವಲ ಹುದ್ದೆ ಅಥವಾ ಬ್ಯಾಡ್ಜ್ ನೀಡುವುದಕ್ಕಾಗಿ ಆಗಬಾರದು, ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ, ಶಿಸ್ತು ಹೆಚ್ಚಿಸಬೇಕೆಂದು ಸ್ವಸ್ಥ ಸಂಸ್ಥೆಯ ನಿರ್ದೇಶಕಿ ಆರತಿ ಸೋಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಸುಂಟಿಕೊಪ್ಪ ಸಂತ ಮೇರಿ ವಿದ್ಯಾಸಂಸ್ಥೆಗಳ ೨೦೨೬-೨೭ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಸತ್ ಪದಗ್ರಹಣ ಸಮಾರಂಭವು ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪದಗ್ರಹಣ ಸಮಾರಂಭವು ಕೇವಲ ಹುದ್ದೆ ಅಥವಾ ಬ್ಯಾಡ್ಜ್ ನೀಡುವುದಕ್ಕಾಗಿ ಅಲ್ಲ. ಸೇವಾ ಮನೋಭಾವವನ್ನು ಬೆಳೆಸುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು. ನೂತನ ನಾಯಕರು ತಮ್ಮ ನಡೆ-ನುಡಿಗಳ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೆÀ.ಫಾ. ವಿಜಯ್ ಕುಮಾರ್ ಅವರು ಮಾತನಾಡಿ, ಪದಗ್ರಹಣ ಸಮಾರಂಭದ ಉದ್ದೇಶ, ವಿದ್ಯಾರ್ಥಿಗಳಲ್ಲಿ ಪ್ರೀತಿ, ದಯೆ, ವಿನಯ, ಜವಾಬ್ದಾರಿ ಹಾಗೂ ಸೇವಾ ಮನೋಭಾವವನ್ನು ಬೆಳೆಸುವುದಾಗಿದೆ. ವಿದ್ಯಾರ್ಥಿ ನಾಯಕರು ಇತರರಿಗೆ ಮಾದರಿಯಾಗಿ ಸೇವಾಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮವು ಎನ್ ಸಿಸಿ ವಿದ್ಯಾರ್ಥಿಗಳ ಪಥ ಸಂಚಲನ ಹಾಗೂ ಶಾಲಾ ಬ್ಯಾಂಡ್ ತಂಡದೊAದಿಗೆ ಆರಂಭಗೊAಡಿತು. ನಂತರ ಮುಖ್ಯ ಅತಿಥಿಗಳು ಧ್ವಜಾರೋಹಣ ನೆರವೇರಿಸಿದರು. ಮುಖ್ಯೋಪಾಧ್ಯಾಯರಾದ ಸೆಲ್ವರಾಜು ಹಾಗೂ ಸಿಸ್ಟರ್ ಜೋವಿಟಾವಾಜ್ ಉಪಸ್ಥಿತರಿದ್ದರು.

೧೦ನೇ ತರಗತಿಯ ಮೊಹಮ್ಮದ್ ಮುಸ್ತಫಾ ವಿದ್ಯಾರ್ಥಿ ನಾಯಕರಾಗಿ, ದೀಪ್ತಿ ವಿದ್ಯಾರ್ಥಿನಿ ನಾಯಕಿಯಾಗಿ ವಿದ್ಯಾರ್ಥಿ ಸಂಸತ್ ಸದಸ್ಯರೊಂದಿಗೆ ಪದಗ್ರಹಣ ಅಧಿಕಾರ ವಹಿಸಿಕೊಂಡರು. ದ.ರಾ. ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಶಿವರಾಮ ಕಾರಂತ್ ಹಾಗೂ ಕುವೆಂಪು ಗುಂಪುಗಳ ನಾಯಕರಿಗೆ ಧ್ವಜಗಳನ್ನು ವಿತರಿಸಲಾಯಿತು.

ರೆ.ಫಾ. ವಿಜಯ್ ಕುಮಾರ್ ಅವರು ವಿದ್ಯಾರ್ಥಿ ಸಂಸತ್ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ನಿಧಾ ಎಂ. ಎಚ್. ಸ್ವಾಗತಿಸಿ, ಇಜ್ನಾ ಫೆಬಿನ್ ಕಾರ್ಯಕ್ರಮ ನಿರೂಪಿಸಿ, ನಿಮ್ರಾ ಫಾತಿಮಾ ವಂದಿಸಿದರು.