"ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ"

"ಸಮತ್ವಂ ಯೋಗ ಉಚ್ಯತೇ"-ಸಮತೋಲನವೇ ಯೋಗ.

ಯೋಗವು ವಿಶ್ವದ ಅತ್ಯಂತ ಪುರಾತನ ಆರೋಗ್ಯ ಪದ್ಧತಿಗಳಲ್ಲಿ ಒಂದು. ಆರೋಗ್ಯಕರ ವೃದ್ಧಾಪ್ಯಕ್ಕೆ ಇದು ಮಹತ್ತರ ಕೊಡುಗೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಯೋಗವು ಹೊಸದಾಗಿ ಹೆಚ್ಚಿನ ಗಮನವನ್ನು ಪಡೆಯುತ್ತಿದೆ.

ವಯಸ್ಸಾಗುವುದು ಕೇವಲ ವರ್ಷಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದಲ್ಲ ; ಅದು ಆರೋಗ್ಯ, ಸ್ವಾವಲಂಬನೆ ಮತ್ತು ಸಂತೋಷವನ್ನು ಕಾಪಾಡಿಕೊಳ್ಳುವ ಕಲೆಯಾಗಿದೆ. ಯೋಗವು ದೇಹವನ್ನು ಬಲಪಡಿಸಿ, ಮನಸ್ಸನ್ನು ಶಾಂತಗೊಳಿಸಿ ಮತ್ತು ಆತ್ಮವನ್ನು ಉನ್ನತಿಗೇರಿಸುವ ಮೂಲಕ ಆರೋಗ್ಯಕರ ವೃದ್ಧಾಪ್ಯದತ್ತ ನಮ್ಮನ್ನು ಕೊಂಡೊಯ್ಯುವ ಅಮೂಲ್ಯವಾದ ಸಾಧನವಾಗಿದೆ.

ಅನೇಕ ಉತ್ತಮವಾಗಿ ವಿನ್ಯಾಸಗೊಳಿಸಲಾದ ಅಧ್ಯಯನಗಳು, ಯೋಗಾಭ್ಯಾಸವು ಕೋಶಗಳ ವಯೋವೃದ್ಧಿ ಪ್ರಕ್ರಿಯೆಯನ್ನು ನಿಧಾನಗೊಳಿಸುವುದು (ಡಿeಜuಛಿes ಛಿeಟಟuಟಚಿಡಿ ಚಿgiಟಿg), ಚಲನಶೀಲತೆ ಸಮತೋಲನ, ಮಾನಸಿಕ ಆರೋಗ್ಯವನ್ನು ಸುಧಾರಿಸುವುದು ಹಾಗು ಜ್ಞಾನಾತ್ಮಕ ಕುಸಿತವನ್ನು ತಡೆಯಲು ಸಹಾಯಕವಾಗುವುದು ಎಂಬುದನ್ನು ತೋರಿವೆ.

ಯೋಗ ಮತ್ತು ಧ್ಯಾನ ಆಧಾರಿತ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದರಿಂದ ವಯೋವೃದ್ಧಿಯ ಸೂಚಕಗಳಲ್ಲಿ ಹಿಮ್ಮುಖ ಬದಲಾವಣೆ ಉಂಟಾಗುತ್ತದೆ.

ವಿಶೇಷವಾಗಿ ಆಕ್ಸಿಡೇಟಿವ್ ಒತ್ತಡ (ಔxiಜಚಿಣive sಣಡಿess), ಟೆಲೋಮರೇಸ್ ಚಟುವಟಿಕೆ (ಖಿeಟomeಡಿe ಚಿಛಿಣiviಣಥಿ) ಮತ್ತು ಆಕ್ಸಿಡೇಟಿವ್ ಡಿಎನ್‌ಎ ಹಾನಿ ಕಡಿಮೆಯಾಗುತ್ತವೆ.

ಇದರಿಂದ ವಯೋವೃದ್ಧಿಯನ್ನು ನಿಧಾನಗೊಳಿಸಿ, ಯೌವ್ವನ ಭರಿತ ಹಾಗು ಆರೋಗ್ಯಕರ ಜೀವನವನ್ನು ದೀರ್ಘಕಾಲ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಟೆಲೋಮಿಯರ್ ಎಂದರೇನು?

ನಮ್ಮ ದೇಹದ ಪ್ರತಿಯೊಂದು ಕೋಶದಲ್ಲಿರುವ ಕ್ರೋಮೋಸೋಮ್‌ಗಳ (ಅhಡಿomosome) ತುದಿಯಲ್ಲಿ ಟೆಲೋಮಿಯರ್‌ಗಳು ಎಂಬ ರಕ್ಷಣಾತ್ಮಕ ಭಾಗಗಳಿರುತ್ತವೆ. ಇವುಗಳನ್ನು ಒಂದು ಶೂಲೇಸ್‌ನ ತುದಿಯಲ್ಲಿರುವ ಪ್ಲಾಸ್ಟಿಕ್ ಕವಚಕ್ಕೆ ಹೋಲಿಸಬಹುದು. ಪ್ರತಿ ಬಾರಿ ಕೋಶಗಳು ವಿಭಜನೆಯಾಗುವಾಗ ಟೆಲೋಮಿಯರ್‌ಗಳು ಸ್ವಲ್ಪ ಸ್ವಲ್ಪವಾಗಿ ಚಿಕ್ಕದಾಗುತ್ತವೆ.

ಟೆಲೋಮಿಯರ್‌ಗಳು ತುಂಬಾ ಚಿಕ್ಕದಾದಾಗ, ಕೋಶಗಳು ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತವೆ ಅಥವಾ ಸಾಯುತ್ತವೆ. ಇದರಿಂದ ದೇಹದಲ್ಲಿ ವಯೋವೃದ್ಧಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ, ಟೆಲೋಮಿಯರ್‌ಗಳ ಉದ್ದವು ಆರೋಗ್ಯಕರ ವಯೋವೃದ್ಧಿಯ ಒಂದು ಪ್ರಮುಖ ಸೂಚಕವಾಗಿದೆ.

ಯೋಗವು ಟೆಲೋಮಿಯರ್‌ಗಳನ್ನು ಹೇಗೆ ರಕ್ಷಿಸುತ್ತದೆ?

ಯೋಗ ಮತ್ತು ಧ್ಯಾನವು ಒತ್ತಡವನ್ನು (sಣಡಿess) ಕಡಿಮೆ ಮಾಡುತ್ತವೆ.

* ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು (iಟಿಜಿಟಚಿmmಚಿಣioಟಿ) ಕಡಿಮೆ ಮಾಡುತ್ತವೆ.

* ಉತ್ತಮ ನಿದ್ರೆ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತವೆ.

* ಟೆಲೋಮಿರೇಸ್ ಎಂಬ ಎಂಜೈಮ್‌ನ (eಟಿzಥಿme) ಚಟುವಟಿಕೆಯನ್ನು ಹೆಚ್ಚಿಸಿ, ಟೆಲೋಮಿಯರ್‌ಗಳ

ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ, ಇದು ಆರೋಗ್ಯಕರ, ಸಂತೋಷಕರ ಮತ್ತು ಗೌರವಯುತ ವೃದ್ಧಾಪ್ಯದತ್ತ ಕೊಂಡೊಯ್ಯುವ ಸಮಗ್ರ ಜೀವನಶೈಲಿಯಾಗಿದೆ. ನಿಯಮಿತ ಯೋಗಾಭ್ಯಾಸವು

ದೇಹಕ್ಕೆ ಬಲ, ಮನಸ್ಸಿಗೆ ಶಾಂತಿ ಮತ್ತು ಆತ್ಮಕ್ಕೆ ಸಮತೋಲನವನ್ನು ನೀಡುತ್ತದೆ. ವಯಸ್ಸು ಹೆಚ್ಚಾದರೂ ಉತ್ಸಾಹ, ಚೈತನ್ಯ ಮತ್ತು ಸ್ವಾವಲಂಬನೆಯನ್ನು ಕಾಪಾಡಿಕೊಳ್ಳಲು ಯೋಗವು ಅತ್ಯುತ್ತಮ ಸಾಧನವಾಗಿದೆ.

"ಯೋಗ ಮಾಡಿ, ಯೌವ್ವನದ ಉತ್ಸಾಹ ಉಳಿಸಿ; ಆರೋಗ್ಯಕರ ವೃದ್ಧಾಪ್ಯವನ್ನು ಸ್ವಾಗತಿಸಿ"

- ಚೆರಿಯಮನೆ ಪ್ರಿಯಾಂಕ,

೩ನೇ ವರ್ಷದ ಃಓಙS ವಿದ್ಯಾರ್ಥಿನಿ, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು. (೯೩೮೦೧೫೬೦೪೨)

ಒಂದು ಕಾಲದಲ್ಲಿ ಮನೆ ಎಂದರೆ ಕೇವಲ ನಾಲ್ಕು ಗೋಡೆಗಳಾಗಿರಲಿಲ್ಲ, ಮನೆ ಸಂಬAಧಗಳ ಸಂಗಮವಾಗಿತ್ತು. ಅಜ್ಜನ ಅನುಭವ, ಅಜ್ಜಿಯ ಮಮತೆ, ಚಿಕ್ಕಪ್ಪನ ಕಾಳಜಿ, ಚಿಕ್ಕಮ್ಮನ ಪ್ರೀತಿ, ತಂದೆಯ ಮಾರ್ಗದರ್ಶನ, ತಾಯಿಯ ತ್ಯಾಗ -ಇವೆಲ್ಲವೂ ಸೇರಿದ ಮನೆಯೇ ಮಗುವಿನ ಜೀವನದ ಮೊದಲ ಪಾಠಶಾಲೆಯಾಗಿತ್ತು. ಮನೆಯ ಅಂಗಳದಲ್ಲಿ ಮಗುವಿನ ಜೀವನ ಭವಿಷ್ಯ ರೂಪುಗೊಳ್ಳುತ್ತಿತ್ತು. ಹಿರಿಯರ ನೆರಳಿನಲ್ಲಿ ಮಕ್ಕಳು ಸಂಸ್ಕಾರ ಕಲಿಯುತ್ತಿದ್ದರು, ಅವರ ಮಾತುಗಳಲ್ಲಿ ಜೀವನದ ಮೌಲ್ಯಗಳನ್ನು ಅರಿಯುತ್ತಿದ್ದರು.

ಸಂಜೆಯ ವೇಳೆ ಅಜ್ಜಿಯ ಮಡಿಲಿನಲ್ಲಿ ಕುಳಿತು ಕೇಳಿದ ಒಂದು ಕಥೆ ಮಗುವಿನ ಹೃದಯದಲ್ಲಿ ಕರುಣೆಯ ಬೀಜ ಬಿತ್ತುತ್ತಿತ್ತು, ತಂದೆಯ ಒಂದು ಸಲಹೆ ಜವಾಬ್ದಾರಿಯನ್ನು ಕಲಿಸುತ್ತಿದ್ದು, ತಾಯಿಯ ಒಂದು ಮಮತೆಯ ಸ್ಪರ್ಶ ಪ್ರೀತಿಯ ಅರ್ಥವನ್ನು ತಿಳಿಸುತ್ತಿತ್ತು ಆ ಕಾಲದಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಮೌಲ್ಯ ಶಿಕ್ಷಣವನ್ನು ಪ್ರತ್ಯೇಕವಾಗಿ ಕಲಿಸಬೇಕಾಗಿರಲಿಲ್ಲ, ಮನೆಯ ವಾತಾವರಣವೇ ಅದನ್ನು ಕಲಿಸುತ್ತಿತ್ತು.

ಆದರೆ ಇಂದು ಬದುಕಿನ ವೇಗ ಸಂಬAಧಗಳ ಹೆಜ್ಜೆಗಿಂತಲೂ ವೇಗವಾಗಿ ಓಡುತ್ತಿದೆ. "ಅವಿಭಕ್ತ ಕುಟುಂಬ"ಗಳ ಸ್ಥಾನವನ್ನು "ವಿಭಕ್ತ ಕುಟುಂಬ"ಗಳು ಪಡೆದುಕೊಂಡಿವೆ. ದೊಡ್ಡ ಮನೆಗಳಿವೆ. ಆದರೆ ತುಂಬಿದ ಮನಸ್ಸುಗಳು ಕಡಿಮೆಯಾಗಿದೆ. ಮಕ್ಕಳ ಕೊಠಡಿಗಳು ಆಟಿಕೆಗಳಿಂದ ತುಂಬಿದೆ. ಆದರೆ ಕಥೆ ಹೇಳುವ ಅಜ್ಜ_ ಅಜ್ಜಿ ಇಲ್ಲ. ಸೌಲಭ್ಯಗಳು ಹೆಚ್ಚಿವೆ ಆದರೆ ಸಂಬAಧಗಳಲ್ಲಿ ಆತ್ಮೀಯತೆ ಕಡಿಮೆಯಾಗಿದೆ.

ತಂದೆ ತಾಯಿಯರು ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ, ಅವರ ಕಷ್ಟದಲ್ಲಿ ಪ್ರೀತಿ ಇದೆ, ಕನಸು ಇದೆ, ಆದರೆ ಜೀವನದ ಓಟದಲ್ಲಿ ಮಕ್ಕಳ ಜೊತೆ ಮನಸ್ಸು ಬಿಚ್ಚಿ ಮಾತನಾಡಲು ಸಮಯ ಸಿಗುತ್ತಿಲ್ಲ. ಅದರ ಪರಿಣಾಮವಾಗಿ ಮಕ್ಕಳು ಮಾಹಿತಿಯನ್ನು ಇತರ ಮೂಲಗಳಿಂದ ಪಡೆಯುತ್ತಿದ್ದಾರೆ ಆದರೆ ಮಾರ್ಗದರ್ಶನವನ್ನು ಕಳೆದುಕೊಳ್ಳುತ್ತಿದ್ದಾರೆ, ಶಿಕ್ಷಣ ಪಡೆಯುತ್ತಿದ್ದಾರೆ ಆದರೆ ಸಂಸ್ಕಾರವನ್ನು ಕಳೆದುಕೊಳ್ಳುತ್ತಿದ್ದಾರೆ, ಜ್ಞಾನ ಸಂಪಾದಿಸುತ್ತಿದ್ದಾರೆ ಅದರೇ ಜೀವನ ಮೌಲ್ಯಗಳನ್ನು ಪಡೆಯುವ ಅವಕಾಶಗಳು ಕಡಿಮೆಯಾಗುತ್ತಿದೆ.

ಇಂತಹ ಸಂದರ್ಭದಲ್ಲಿ ಸಮಾಜದ ಮುಂದೆ ನಿಂತಿರುವ ದೊಡ್ಡ ಪ್ರಶ್ನೆ, ಮಕ್ಕಳಲ್ಲಿ ಮೌಲ್ಯಗಳನ್ನು ಯಾರು ತುಂಬಬೇಕು ಈ ಪ್ರಶ್ನೆಗೆ ಉತ್ತರವಾಗಿ ಬೆಳಕಿನ ಕಿರಣದಂತೆ ಕಂಡಿದ್ದು "ಯೋಗ " ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ ; ಅದು ಜೀವನದ ದಿವ್ಯ ಶಿಕ್ಷಣ. ಯೋಗವು ಕೇವಲ ಆರೋಗ್ಯದ ಮಾರ್ಗವಲ್ಲ; ಅದು ವ್ಯಕ್ತಿತ್ವ ನಿರ್ಮಾಣದ ಪವಿತ್ರ ಪಥ. ಯೋಗವು ಕೇವಲ ಆಸನಗಳ ಸಮೂಹವಲ್ಲ ;ಅದು ಬದುಕನ್ನು ಅರ್ಥಪೂರ್ಣಗೊಳಿಸುವ ಮೌಲ್ಯಗಳ ಮಹಾ ಗ್ರಂಥ. ಒಬ್ಬ ಮಗು ಪ್ರತಿದಿನ "ಯೋಗ ಮ್ಯಾಟ್" ಮೇಲೆ ನಿಂತಾಗ ಅದು ಕೇವಲ ದೇಹವನ್ನು ತರಬೇತಿಗೊಳಿಸುವುದು ಮಾತ್ರವಲ್ಲ ತನ್ನ ಮನಸ್ಸನ್ನು ರೂಪಿಸಲು ಆರಂಭಿಸುತ್ತದೆ, "ತಾಡಾಸನ"ವು "ಆತ್ಮ ವಿಶ್ವಾಸ"ವನ್ನು ಕಲಿಸಿದರೇ, "ವೃಕ್ಷಾಸನ"ವು ಸ್ಥಿರತೆಯನ್ನು ಕಲಿಸುತ್ತದೆ. "ಭುಜಂಗಾಸನ" ವು ಧೈರ್ಯವನ್ನು ಮೂಡಿಸಿದರೆ, " ವಜ್ರಾಸನ"ವು "ಶಾಂತಿ"ಯನ್ನು ನೀಡುತ್ತದೆ. "ಪ್ರಾಣಾಯಾಮ"ವು ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿ ಒಳಗಿನ ಬೆಳಕನ್ನು ಪರಿಚಯಿಸುತ್ತದೆ.

ಯೋಗದ ಪ್ರತಿಯೊಂದು "ಶ್ವಾಸ" ದಲ್ಲಿಯೂ ಒಂದು ಸಂದೇಶವಿದೆ. ಕಲಿಯುವ ಪ್ರತಿಯೊಂದು ಆಸನದಲ್ಲಿಯೂ ಒಂದು ಮೌಲ್ಯ ಅಡಗಿದೆ. ಮಕ್ಕಳಿಗೆ ಯೋಗವನ್ನು ಕಲಿಸುವುದು ಕೇವಲ ದೇಹವನ್ನು ಬಗ್ಗಿಸುವುದಕ್ಕಾಗಿ ಅಲ್ಲ; ಬದಲಿಗೆ ಅವರ

ಹೃದಯವನ್ನು ಮೃದುಗೊಳಿಸಲು, ಅವರ ಚಿಂತನೆಗಳನ್ನು ಶುದ್ಧಗೊಳಿಸಲು, ಅವರ ಬದುಕಿಗೆ ದಿಕ್ಕನ್ನು ನೀಡಲು. ಇಂದು ಮಕ್ಕಳಿಗೆ ಅತ್ಯಂತ ಅಗತ್ಯವಾಗಿ ಬೇಕಾಗಿರುವುದು, ಸ್ಪರ್ಧೆಯಲ್ಲ "ಸಮತೋಲನ" ಅಂಕಗಳಲ್ಲ "ಆತ್ಮವಿಶ್ವಾಸ" ಯಶಸ್ಸಲ್ಲ "ಮಾನವೀಯತೆ", ಈ ಎಲ್ಲವನ್ನು ಒಂದೇ ಸಮಯದಲ್ಲಿ ನೀಡಬಲ್ಲ ಶಕ್ತಿ "ಯೋಗ ಶಿಕ್ಷಣ"ಕ್ಕೆ ಮಾತ್ರವಿದೆ.

ಯೋಗಭ್ಯಾಸ ಮಾಡುವ ಮಗು "ಶಿಸ್ತನ್ನು" ಕಲಿಯುತ್ತದೆ "ಸಮಯದ ಮೌಲ್ಯ"ವನ್ನು ಅರಿಯುತ್ತದೆ ಕೋಪದ ಬದಲು "ಸಹನೆ"ಯನ್ನು ಅಹಂಕಾರದ ಬದಲು" ವಿನಯ"ವನ್ನು ಸ್ವಾರ್ಥದ ಬದಲು " ಸೇವಾ ಮನೋಭಾವ"ವನ್ನು ಅಳವಡಿಸಿಕೊಳ್ಳುತ್ತದೆ. ಇಂತಹ ಮಕ್ಕಳು ಮುಂದೆ ಉತ್ತಮ ವೈದ್ಯರು, ಶಿಕ್ಷಕರು, ಅಧಿಕಾರಿಗಳಷ್ಟೇ ಅಲ್ಲ "ಉತ್ತಮ ಮನುಷ್ಯ"ರಾಗಿ ಬದುಕುತ್ತಾರೆ. ಇಂದು ಬಹುತೇಕ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಆಸ್ತಿ ,ಶಿಕ್ಷಣ, ಸೌಲಭ್ಯಗಳನ್ನು ನೀಡಲು ಶ್ರಮಿಸುತ್ತಿದ್ದಾರೆ. ಆದರೆ ಮಕ್ಕಳಿಗೆ ನಾವು ನೀಡಬಹುದಾದ ಅತ್ಯಂತ ಅಮೂಲ್ಯ ಉಡುಗೊರೆ ಎಂದರೆ "ಉತ್ತಮ ಮೌಲ್ಯಗಳು" ಮಾತ್ರ. ಏಕೆಂದರೆ ಆಸ್ತಿ ಕಳೆದು ಹೋಗಬಹುದು, ಪದವಿ ಮರೆತು ಹೋಗಬಹುದು, ಆದರೆ ಬಾಲ್ಯದಲ್ಲಿ ಕಲಿತ ಮೌಲ್ಯಗಳು ಜೀವನದುದ್ದಕ್ಕೂ ಜೊತೆಯಾಗಿರುತ್ತದೆ.

ಯೋಗ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ನಾವು ಕೇವಲ ಆಸನಗಳನ್ನು ಬೋಧಿಸುವವರಲ್ಲ, ನಾವು ನಾಳಿನ ಸಮಾಜದ ಶಿಲ್ಪಿಗಳು. ನಮ್ಮ ಮುಂದೆ ಕುಳಿತಿರುವ ಪ್ರತಿಯೊಂದು ಮಗುವಿನೊಳಗೆ ಒಬ್ಬ ಉತ್ತಮ ನಾಗರಿಕ, ಜವಾಬ್ದಾರಿಯುತ ವ್ಯಕ್ತಿ, ಒಬ್ಬ ಕರುಣಾಮಯಿ ಮನುಷ್ಯ ಅಡಗಿದ್ದಾನೆ. ಈ ವ್ಯಕ್ತಿತ್ವವನ್ನು ಹೊರ ತರುವ ಶಕ್ತಿ "ಯೋಗ ಶಿಕ್ಷಣಕ್ಕಿದೆ.

ಇಂದು ಅವಿಭಕ್ತ ಕುಟುಂಬಗಳ ಅಂಗಳಗಳು ಕಡಿಮೆಯಾಗಿರಬಹುದು. ಆದರೆ ಯೋಗದ ಆರಂಭದಲ್ಲಿ ಮೊಳಗುವ ಓಂಕಾರದ ನಾದವು ಮಕ್ಕಳ ಮನಸ್ಸಿಗೆ ಶಾಂತಿಯ ಸ್ಪರ್ಶ ನೀಡಿ, ಆ ನಾದದ ಅಲೆಗಳಲ್ಲಿ ಏಕಾಗ್ರತೆ, ವಿನಯ, ಸಹನೆ ಮತ್ತು ಸಂಸ್ಕಾರದ ಮೌಲ್ಯಗಳು ನಿಧಾನವಾಗಿ ಬೇರು ಬಿಟ್ಟು ಅವರ ವ್ಯಕ್ತಿತ್ವವನ್ನು ಸುಂದರವಾಗಿ ರೂಪಿಸುತ್ತದೆ.

ಅಷ್ಟಾಂಗ ಯೋಗದ ಎಂಟು ಮೆಟ್ಟಿಲುಗಳಾದ ಮನೋನಿಗ್ರಹ, ಸಾರ್ವತ್ರಿಕ ನೀತಿ ನಿಯಮಗಳ ಶಿಕ್ಷಣಗಳಿಗೆ ಅಗತ್ಯವಾದ ಯಮ ಪಂಚಕಗಳು- ಅಹಿಂಸಾ ಸತ್ಯಾಸ್ತೇಯ ಬ್ರಹ್ಮಚರ್ಯಾಪರಿಗ್ರಹ, ವೈಯಕ್ತಿಕ ಶುದ್ಧೀಕರಣಗಳ ಶಿಕ್ಷಣವಾದ ನಿಯಮ ಪಂಚಕಗಳಾದ ಶೌಚ ಸಂತೋಷ ತಪಃಸ್ವಾಧ್ಯಾಯೇಶ್ವರಪ್ರಣಿಧಾನಾನಿ ನಿಯಮಾಃ ಮತ್ತು ದೇಹದ ಸ್ಥಿರ ಶಾರೀರಿಕ ಭಂಗಿಗಳು, ಪ್ರಾಣ ಶಕ್ತಿಯ ನಿಯಂತ್ರಣ ಮತ್ತು ಉಸಿರಾಟದ ಕ್ರಮಬದ್ಧ ಹತೋಟಿಯಿಂದ ಮನಸ್ಸಿಗೆ ಶಿಕ್ಷಣ, ಇಂದ್ರಿಯ ನಿಗ್ರಹ, ಆತ್ಮ ಸಾಕ್ಷಾತ್ಕಾರ ಇವುಗಳ ಮೂಲಕ ದೈಹಿಕ ಹಾಗು ಮಾನಸಿಕ ಗುಣಮಟ್ಟವನ್ನು ಅಭ್ಯಾಸ ಮಾಡಿಸಿ, ಪರಿಪೂರ್ಣ ಶ್ರದ್ಧೆಯಿಂದ ನಿಸ್ವಾರ್ಥ ಸೇವೆಯ ಕರ್ಮ ಯೋಗದ ಮೂಲಕ ನಾವು ಮಕ್ಕಳ ಮನಸ್ಸಿನಲ್ಲಿ ಮತ್ತೆ ಮೌಲ್ಯಗಳ ತೋಟವನ್ನು ಬೆಳೆಸಬಹುದು.

ಅಜ್ಜ ಅಜ್ಜಿಯರ ಕಥೆಗಳು ಕೇಳಿಸದಿದ್ದರೂ ಯೋಗದ ಸಂದೇಶಗಳು ಮಕ್ಕಳ ಹೃದಯವನ್ನು ತಲುಪಬಹುದು. ಬಾಂಧವ್ಯದ ನೆರಳು ಕಡಿಮೆಯಾಗಿದ್ದರೂ ಯೋಗದ ಬೆಳಕು ಅವರ ಜೀವನವನ್ನು ಪ್ರಕಾಶಮಾನಗೊಳಿಸಬಹುದು.

ಮಗುವಿನ ಕೈಯಲ್ಲಿ ಮೊಬೈಲ್ ಇರಬಹುದು; ಆದರೆ ಮನಸ್ಸಿನಲ್ಲಿ ಮೌಲ್ಯಗಳಿರಬೇಕು. ಮಗುವಿನ ಜೀವನದಲ್ಲಿ ಕನಸುಗಳಿರಬಹುದು,ಆದರೆ ಆ ಕನಸುಗಳಿಗೆ ದಿಕ್ಕು ತೋರಿಸುವ ಸಂಸ್ಕಾರಗಳು ಇರಬೇಕು. ಆ ಸಂಸ್ಕಾರಗಳ ಬೀಜ ಬಿತ್ತುವ ಪವಿತ್ರ ಕಾರ್ಯವೇ ಯೋಗ.

ಆದ್ದರಿಂದ ಇಂದಿನ ಪೀಳಿಗೆಗೆ ನಾವು ನೀಡಬೇಕಾದ ಅತ್ಯಂತ ದೊಡ್ಡ ಉಡುಗೊರೆ ಎಂದರೆ "ಯೋಗ ಶಿಕ್ಷಣ". ಏಕೆಂದರೆ, ಯೋಗ ಶಿಕ್ಷಣವು ಆರೋಗ್ಯವಂತ ದೇಹಗಳನ್ನು ಮಾತ್ರವಲ್ಲ, ಪ್ರೀತಿ ತುಂಬಿದ ಹೃದಯಗಳನ್ನು, ಮೌಲ್ಯಗಳಿಂದ ತುಂಬಿದ ವ್ಯಕ್ತಿತ್ವಗಳನ್ನು ಮತ್ತು ಮಾನವೀಯತೆಯಿಂದ ಕೂಡಿದ ಸಮಾಜವನ್ನು ನಿರ್ಮಿಸುತ್ತದೆ. ಮಕ್ಕಳನ್ನು ಯಶಸ್ವಿನತ್ತ ಕೊಂಡೊಯ್ಯುವುದು ಶಿಕ್ಷಣವಾದರೆ ಮಕ್ಕಳನ್ನು ಮಹಾನ್ ಮನುಷ್ಯರನ್ನಾಗಿ ಮಾಡುವುದು ಯೋಗ ಮತ್ತು ಮೌಲ್ಯ ಶಿಕ್ಷಣ.

ಅಲಿಮ. ಪಿ. ಹೆಚ್., ದೈಹಿಕ/ ಯೋಗ ಶಿಕ್ಷಣ ಶಿಕ್ಷಕಿ,

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಕುಟ್ಟ, ಮೊ. +೯೧ ೯೭೪೧೬ ೬೪೧೭೩