ನಾಪೋಕ್ಲು: ಕೊಡಗು ಜಿಲ್ಲೆಯ ಮಳೆ ಬೆಳೆಯ ಆದಿದೇವ ಎಂಬ ನಂಬಿಕೆಯ ಶ್ರೀ ಇಗ್ಗುತ್ತಪ್ಪ ದೇವರ ಮೂಲಸ್ಥಾನ ಮಲ್ಮಕುಂದ್ ವ್ಯಾಪ್ತಿಯಲ್ಲಿ ಅನಧಿಕೃತ ಕಾಮಗಾರಿಯೊಂದಿಗೆ ದೈವಿಕ ಶಕ್ತಿಯ ಪರಿಸರಕ್ಕೆ ಯಾವುದೇ ರೀತಿಯ ಧಕ್ಕೆ ಉಂಟು ಮಾಡುವದು ಅಕ್ಷಮ್ಯ ಎಂದು ಸೋಮನಾಥಾನಂದಪುರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಲ್ಮಕುಂದ್ ಪರಿಸರದಲ್ಲಿ ಸ್ಥಳೀಯರೂ ಸೇರಿದಂತೆ ಶ್ರೀ ಇಗ್ಗುತ್ತಪ್ಪ ದೇವರ ಕಾರ್ಯಕ್ರಮ ಅಥವಾ ಪರಂಪರೆಯ ಕಟ್ಟುಪಾಡು ಹೊರತು ಬೇರೆ ಯಾವುದೇ ರೀತಿಯ ಚಟುವಟಿಕೆಗಳು ನಡೆಯದಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.