ಯೋಗ ಎನ್ನುವ ಪದ ಸಂಸ್ಕೃತ ಮೂಲಧಾತುವಾದ ಯುಜ್ ಎನ್ನುವುದರಿಂದ ಬಂದಿದ್ದು, ಬಂಧಿಸು, ಕೂಡಿಸು, ಚಿತ್ರವನ್ನು ನಿರ್ದೇಶಿಸಿ ಕೇಂದ್ರೀಕರಿಸು ಎನ್ನುವ ಅರ್ಥವನ್ನು ಕೊಡುತ್ತದೆ. ಶರೀರದ, ಮನಸ್ಸಿನ ಮತ್ತು ಆತ್ಮದ ಸರ್ವಶಕ್ತಿಗಳನ್ನು ಭಗವಂತನೊAದಿಗೆ ಸಂಯೋಜಿಸುವುದು ಯೋಗ. ಇದು ಚಿತ್ತ ಮನಸ್ಸು, ಭಾವನೆಗಳು ಇಚ್ಚೆ ಎನ್ನುವ ಯೋಗದ ಮೂಲಭಾವನೆಗಳನ್ನು ಶಿಸ್ತುಗೊಳಿಸುವುದು ಮತ್ತು ಜೀವನದ ಎಲ್ಲಾ ಅಂಶಗಳನ್ನು ಸಮದೃಷ್ಟಿಯಿಂದ ನೋಡಲು ಸಹಾಯಕವಾಗುವ ಆತ್ಮದ ಒಂದು ನಿಲುವು ಎಂದು ಹೇಳಲಾಗುತ್ತದೆ.
ಭಾರತೀಯ ಅಸ್ತಿಕದರ್ಶನಗಳಲ್ಲಿ ಯೋಗವು ಒಂದು. ಅದನ್ನು ೧೮೫ ಕ್ಲಿಷ್ಟ ಸೂತ್ರಗಳನ್ನೊಳಗೊಂಡ ಯೋಗ ಸೂತ್ರಗಳೆಂಬ ಶಾಸ್ತಿçÃಯ ಗ್ರಂಥದಲ್ಲಿ ಪತಂಜಲಿ ಮುನಿಗಳು ಸಂಶೋಧಿಸಿ ಸಂಯೋಜಿಸಿದ್ದಾರೆ.
ಯೋಗ ಎನ್ನುವುದು ಅತಿಆಸೆಯಿಂದ ಭಕ್ಷಿಸುವವನಿಗೂ ಅಲ್ಲ. ಅತಿಯಾಗಿ ಉಪವಾಸ ಮಾಡುವವನಿಗೂ ಅಲ್ಲ, ಹೆಚ್ಚು ನಿದ್ದೆ ಮಾಡುವವನಿಗೂ ಅಲ್ಲ, ಯಾವಾಗಲೂ ನಿದ್ದೆ ಮಾಡದವನಿಗೂ ಅಲ್ಲ. ಎನ್ನುವುದರಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದರಲ್ಲಿ ಮಧ್ಯವರ್ತಿಯಾಗುವಂತೆ ಕೆಲಸದಲ್ಲಿ ಕ್ರಮವಹಿಸುವಂತೆ ನಿದ್ದೆ ಮತ್ತು ಎಚ್ಚರ ಇವುಗಳಲ್ಲಿ ಹೊಂದಾಣಿಕೆಗೊಳಿಸುವAತೆ ಮಾಡಿ ಯೋಗವು ನೋವು ಮತ್ತು ದುಃಖವನ್ನು ನಿವಾರಿಸುತ್ತದೆ. ಸಾಧನೆಯ ಗುರಿ ಹೇಗೆ ಮುಖ್ಯವೊ ಅಷ್ಟೇ ಮುಖ್ಯ ಸಾಧನೆಯ ಮಾರ್ಗಗಳು. ಪತಂಜಲಿಯು ಆತ್ಮಸಾಧನೆಗಾಗಿ ಅಷ್ಟಾಂಗ ಯೋಗವನ್ನು ಹೇಳಿದ್ದಾರೆ.
ಯೋಗದ ಹಂತಗಳು: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ. ಸೃಷ್ಟಿಕರ್ತನೆಡೆಗೆ ಹೋಗಲು ಮಾನವನಿಗೆ ವಿವಿಧ ಮಾರ್ಗಗಳಿವೆ. ಅವುಗಳನ್ನು ಯೋಗ ಪಥಗಳೆಂದು ಕರೆಯಲಾಗಿದೆ. ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ, ರಾಜಯೋಗ. ರಾಜಯೋಗದಲ್ಲಿ ಬರುವಂತಹದ್ದು ಅಷ್ಟಾಂಗ ಯೋಗ, ೩ನೇಯ ಅಂಗವೇ ಆಸನ. ಸ್ಥಿರಂ ಸುಖಂ ಆಸನಂ ಇದು ಅಂಗಗಳ ನಿಲುವು. ದೇಹಕ್ಕೆ ಆರೋಗ್ಯ ಮತ್ತು ಲಘುತ್ವವನ್ನು ನೀಡುತ್ತದೆ. ನಿಶ್ಚಲವಾದ ಮತ್ತು ಆನಂದಕರವಾದ ನಿಲುವು ಮನಸ್ಸಿನ ಚಿಂತೆಯನ್ನು ನಿವಾರಿಸಿ ಧ್ರುವತ್ವವನ್ನು ನೀಡುತ್ತದೆ. ಅವು ಒಳ್ಳೆಯ ದೇಹವನ್ನು ಬೆಳೆಸುತ್ತದೆ. ಅಂದರೆ ದೃಢಕಾಯವಾಗಿ, ಮೃದುವಾಗಿ ಮಾಂಸಗಳ ಮುದ್ದೆಯಾಗದೆ ರೋಗವರ್ಚಿತವಾಗಿ ಬೆಳೆಸುತ್ತದೆ. ಅವು ಆಯಾಸವನ್ನು ತಡೆಗಟ್ಟಿ ನರಗಳಿಗೆ ಶಾಂತಿಯನ್ನು ಕೊಡುತ್ತದೆ. ಅವುಗಳ ಮುಖ್ಯ ಉಪಯೋಗ ಅಡಗಿರುವುದು ಮನಸ್ಸಿಗೆ ಅವು ನೀಡುವ ಶಿಸ್ತಿನಲ್ಲಿ. ಆಸನಗಳಲ್ಲಿ ೪ ವಿಧಗಳು ನಿಂತುಮಾಡುವ ಆಸನ, ಕುಳಿತು ಮಾಡುವ ಆಸನ, ಬೆನ್ನಿನ ಮೇಲೆ ಮಲಗಿ ಮಾಡುವ ಆಸನ, ಹೊಟ್ಟೆಯ ಮೇಲೆ ಮಲಗಿ ಮಾಡುವ ಆಸನ.
ನಿಂತು ಮಾಡುವ ಆಸನಗಳು : ತಾಡಾಸನ, ಉತ್ಕಟಾಸನ, ವೃಕ್ಷಾಸನ, ಅರ್ಧಕಟ್ಟಿ, ಚಕ್ಷಾಸನ, ವೀರಭದ್ರಾಸನ, ಉತ್ತಿತ ತ್ರಿಕೋನಾಸನ, ಪರಿವೃತ ತ್ರಿಕೋನಾಸನ, ಗರುಡಾಸನ, ಅರ್ಧಚಂದ್ರಾಸನ ಇನ್ನು ಸಾಕಷ್ಟು ಆಸನಗಳಿವೆ. ಕುಳಿತು ಮಾಡುವ ಆಸನಗಳು : ಪದ್ಮಾಸನ, ವಜ್ರಾಸನ, ಗೋಮುಖಾಸನ, ಸುಪ್ತವಿರಾಸನ, ಏಕಪಾದ ಶಿರ್ಷಾಸನ, ಚಾನು ಶಿರ್ಷಾಸನ, ಪಶ್ಚಿಮೋತ್ತಾನಸನ ಇನ್ನೂ ಸಾಕಷ್ಟು ಆಸನಗಳಿವೆ. ಬೆನ್ನಿನ ಮೇಲೆ ಮಲಗಿ ಮಾಡುವ ಆಸನಗಳು : ಅರ್ಧನವಾಸನ, ನೌಕಾಸನ, ಪೂರ್ಣನವಾಸನ ಶವಾಸನ, ಮತ್ಸಾಸನ, ಯೋಗ ನಿದ್ರಾಸನ ಇನ್ನೂ ಸಾಕಷ್ಟು ಆಸನಗಳಿವೆ. ಹೊಟ್ಟೆಯ ಮೇಲೆ ಮಲಗಿ ಮಾಡುವ ಆಸನಗಳು : ಧನುರಾಸನ, ಉರ್ದ್ವಾಮುಖ ಶ್ವಾನಾಸನ, ಅಧೋಮುಖ ಶ್ವಾನಾಸನ, ಇನ್ನೂ ಸಾಕಷ್ಟು ಆಸನಗಳಿವೆ. ಆಸನಗಳು ಪ್ರಾಣಿಗಳ, ಋಷಿಮುನಿಗಳ, ಮರಗಳ, ಜಲಚರಗಳ, ಪ್ರಾಣಿ ಪಕ್ಷಿಗಳ ಹೆಸರಿನಲ್ಲಿ ಇವೆ. ಅಸಂಖ್ಯಾತ ಆಸನಗಳು ರೂಢಿಯಲ್ಲಿವೆ. ಯೋಗಾಸನಗಳನ್ನು ಮಾಡುವುದರಿಂದ ಶರೀರದ ಎಲ್ಲಾ ಅಂಗಗಳಿಗೂ, ಗ್ರಂಥಿಗಳಿಗೂ, ನರನಾಡಿಗಳಿಗೂ ವ್ಯಾಯಾಮ ಸಿಗುತ್ತದೆ. ಹಾಗೆಯೇ ರಕ್ತ ಸಂಚಾರ ಸುಗಮ ರೀತಿಯಲ್ಲಿ ಶರೀರದ ಎಲ್ಲಾ ಭಾಗಗಳಿಗೆ ಹರಿಯುತ್ತದೆ. ಮೆದುಳು ಚುರುಕಾಗುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಶರೀರ ಮತ್ತು ಮನಸ್ಸು ಸದೃಢವಾಗಿ ಸದೃಢ ದೇಹದಲ್ಲಿ ಸದೃಢ ಮನಸ್ಸಿರುತ್ತದೆ. ಯೋಗ ಕೇವಲ ಬರವಣಿಗೆ ಮಾತ್ರವಾಗದೆ, ಅಂತರರಾಷ್ಟಿçÃಯ ದಿನಾಚರಣೆಗೆ ಮಾತ್ರ ಸೀಮಿತವಾಗದೆ ಸಮಾಜದ ಪ್ರತಿಯೊಬ್ಬರು ಬ್ರಾಹ್ಮಿ ಮುಹೂರ್ತ (ಮುಂಜಾನೆ) ಮತ್ತು ಸಂಜೆ ಯೋಗ ಅಭ್ಯಾಸಕ್ಕಾಗಿ ಸಮಯ ಮೀಸಲು ಇಟ್ಟು ತಮ್ಮ ಹಾಗೂ ಕುಟುಂಬದ ಆರೋಗ್ಯ ಕಾಪಾಡಬಹುದು. ಸ್ವಾಸ್ತö್ಯ ಸಮಾಜ ನಿರ್ಮಾಣಕ್ಕೆ ಯೋಗವು ತುಂಬಾ ಪ್ರಯೋಜನಕಾರಿಯಾಗಿದೆ. ಯೋಗದ ಬಗ್ಗೆ ಸಾಕಷ್ಟು ಅಂಶಗಳಿವೆ. ಅದು ಸಾಗರದಷ್ಟು ವಿಶಾಲ ಮತ್ತು ಆಳವಾಗಿದೆ. ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಲಾಭ ತಿಳಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಯೋಗವನ್ನು ಒಂದು ಪಠ್ಯ ವಿಷಯವಾಗಿ ಬೋಧಿಸಲಾಗುತ್ತದೆ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳಲ್ಲಿ ದೈಹಿಕ ಸಮಸ್ಯೆ, ಉಸಿರಾದ ತೊಂದರೆ, ಜ್ಞಾಪಕ ಶಕ್ತಿ ಹೆಚ್ಚಲು, ಜೀವನ ಶೈಲಿ, ಶಿಸ್ತು ಇವುಗಳಿಗೆ ಯೋಗ ತುಂಬಾ ಸಹಕಾರಿ. ನಾವು ಮತ್ತು ಕುಟುಂಬದ ಎಲ್ಲಾ ಸದಸ್ಯರೂ ಸಮಯಾವಕಾಶವನ್ನು ಮಾಡಿಕೊಂಡು ದಿನದಲ್ಲಿ ಒಂದು ಗಂಟೆ ಯೋಗಾಭ್ಯಾಸ ಮಾಡಿ ಆರೋಗ್ಯ ಕಾಪಾಡಿಕೊಳ್ಳೋಣ.
- ವಿ.ಕೆ. ಲಲಿತ, ಯೋಗ ಶಿಕ್ಷಕರು, ವೀರಾಜಪೇಟೆ,
ಮೊ. ೯೪೪೯೨೭೬೫೪೭