ಕೂಡಿಗೆ, ಜೂ. ೧೭: ೨೦೨೬-೨೭ನೇ ಸಾಲಿನ ಮುಂಗಾರು ಹಂಗಾಮು ಬೆಳೆಗೆ ಕುಶಾಲನಗರ ತಾಲೂಕು ವ್ಯಾಪ್ತಿಯ ರೈತರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ ಬೇಸಾಯಕ್ಕೆ ಬೇಕಾದ ಬಿತ್ತನೆಯ ಮುಸುಕಿನ ಜೋಳ ಮತ್ತು ವಿವಿಧ ಹೈಬ್ರೀಡ್ ತಳಿಯ ಭತ್ತದ ಬೀಜಗಳನ್ನು ಕೃಷಿ ಇಲಾಖೆಯ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರದ ಮೂಲಕ ವಿತರಣೆ ಮಾಡಲಾಗುವುದು. ಇದರ ಸೌಲಭ್ಯವನ್ನು ವ್ಯಾಪ್ತಿಯ ರೈತರು ಸದುಪಯೋಗಪಡಿಸಿಕೊಳ್ಳಲು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ಮನವಿ ಮಾಡಿದ್ದಾರೆ.
ಈ ಸಾಲಿನಲ್ಲಿ ಮುಸುಕಿನ ಜೋಳದ ಬಿತ್ತನೆ ಬೀಜ ಗಂಗಾ ಕಾವೇರಿ ಜಿ.ಕೆ. - ೩೨೧೮ ತಳಿಯ ೪. ಕೆ.ಜಿ. ತೂಕದ ಜೋಳಕ್ಕೆ ಬ್ಯಾಗ್‌ಗೆ ೧೪೩೨ ರೂಗಳಿದ್ದು, ಸಾಮಾನ್ಯ ರೈತರಿಗೆ ಪ್ರತಿ ಕೆ.ಜಿ.ಗೆ ಸಹಾಯಧನ ೮೦ ರೂ., ಎಸ್.ಸಿ.-ಎಸ್.ಟಿ.ಗೆ, ೧೨೦ ಇರುವುದು. ರೈತರು ತಮ್ಮ ಆರ್.ಟಿ.ಸಿ. ಮತ್ತು ಆಧಾರ್ ಕಾರ್ಡ್ ಒದಗಿಸಿ ರಿಯಾಯಿತಿ ದರದ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.