ಬೆಂಗಳೂರು, ಜೂ. ೧೭: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅಕ್ರಮಗಳನ್ನು ತಡೆಗಟ್ಟುವ ಹಾಗೂ ಆಯೋಗದಲ್ಲಿ ಮತ್ತಷ್ಟು ಸುಧಾರಣೆ ತರಲು ಸೂಕ್ತ ಶಿಫಾರಸ್ಸುಗಳೊಂದಿಗೆ ವರದಿ ನೀಡಲು ಆರ್.ವಿ. ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಐದನೇ ಸಭೆ ಇಂದು ವಿಧಾನಸೌಧದಲ್ಲಿ ಜರುಗಿತು.

ಕರ್ನಾಟಕ ವಿಧಾನಸಭೆಯ ಸದನ ಸಮಿತಿ ಸದಸ್ಯ, ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಸಭೆಯಲ್ಲಿ ಭಾಗವಹಿಸಿ ಹಲವು ಸಲಹೆಗಳನ್ನು ನೀಡಿದರು.

ಈ ಸಂದರ್ಭ ಎಸ್. ಸುರೇಶ್ ಕುಮಾರ್, ಹಂಪನಗೌಡ ಬಾದರ್ಲಿ, ಅರಗ ಜ್ಞಾನೇಂದ್ರ, ರಾಘವೇಂದ್ರ ಬಸವರಾಜು ಹಿಟ್ನಾಳ್, ರೂಪಕಲಾ ಎಂ. ಹಾಗೂ ಉನ್ನತ ಅಧಿಕಾರಿಗಳು, ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.