ಕೂಡಿಗೆ, ಜೂ. ೧೬: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಒಂಟಿ ಕಾಡಾನೆಯೊಂದು ಕಾಣಿಸಿ ಕೊಳ್ಳುತ್ತಿದ್ದು, ಗ್ರಾಮದ ಸೀತಮ್ಮ ಎಂಬವರ ಮನೆಯ ಸಮೀಪದ ಕೊಟ್ಟಿಗೆಗೆ ದಾಳಿ ಮಾಡಿ ಕರುವನ್ನು ತುಳಿದ ಪರಿಣಾಮವಾಗಿ ಕರುವಿನ ಸೊಂಟ ಮುರಿಯಲ್ಪಟ್ಟ ಘಟನೆ ನಡೆದಿದೆ.

ಮಂಗಳವಾರ ಬೆಳಗ್ಗಿನ ಜಾವ ಕೊಟ್ಟಿಗೆ ಕಡೆಗೆ ಕಾಡಾನೆ ಬರುವುದನ್ನು ಕಂಡು ಕೊಟ್ಟಿಗೆಯಲ್ಲಿದ್ದ ಹಸು ಹಗ್ಗ ಸಮೇತ ಓಡಿ ಹೋಗಿದ್ದು, ಕಾಡಾನೆ ಅಲ್ಲಿದ್ದ ಕರುವಿನ ಮೇಲೆ ದಾಳಿ ಮಾಡಿದೆ. ಅಲ್ಲದೆ ಈ ವ್ಯಾಪ್ತಿಯ ಅನೇಕ ರೈತರ ಜಮೀನಿಗೆ ದಾಳಿ ಮಾಡಿ ಬೆಳೆ ನಷ್ಟಪಡಿಸಿದೆ.

ಅರಣ್ಯ ಇಲಾಖೆಯವರು ಈ ಕಾಡಾನೆಯನ್ನು ಬೇರೆಡೆಗೆ ಓಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.