ಶನಿವಾರಸಂತೆ, ಜೂ. ೧೬: ಪಟ್ಟಣದ ಸುರಭಿ ಹೋಲಿಸ್ಟಿಕ್ ಯೋಗ ಸ್ಟುಡಿಯೋ ಹಾಗೂ ಭಾರತೀಯ ಯೋಗ ಅಸೋಸಿಯೇಷನ್ ಸಹಯೋಗದೊಂದಿಗೆ ಅಂತರರಾಷ್ಟಿçÃಯ ಯೋಗ ದಿನಾಚರಣೆ ಅಂಗವಾಗಿ ಎಲ್ಲಾ ವಯೋಮಾನದವರಿಗಾಗಿ ಒಂದು ವಾರದ ಅವಧಿಯ ಉಚಿತ ಆನ್‌ಲೈನ್ ಯೋಗ ತರಗತಿಗಳನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ತಮ್ಮ ಮನೆಯ ಸೌಕರ್ಯದಲ್ಲೇ ಕುಳಿತು ವಿಶ್ವದಾದ್ಯಂತ ಸಾವಿರಾರು ಯೋಗಾಸಕ್ತರೊಂದಿಗೆ ಆರೋಗ್ಯ ಮತ್ತು ಸುಖ ಜೀವನದ ಜಾಗತಿಕ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅಪೂರ್ವ ಅವಕಾಶವನ್ನು ಒದಗಿಸಲಿದೆ.
ಯೋಗದ ಮಹತ್ವ ಹಾಗೂ ಅದರ ಆರೋಗ್ಯಕರ ಪ್ರಯೋಜನಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ತರಗತಿಗಳನ್ನು ನಡೆಸಲಾಗುತ್ತಿದೆ. ಆಸಕ್ತರು ನೋಂದಾಯಿಸಿಕೊAಡು ಕಾರ್ಯಕ್ರಮದ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಬೀನಾ ಅರವಿಂದ್-೯೪೪೮೮೯೫೮೭೯ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.