ಮಾನವ ಜೀವನದಲ್ಲಿ ಮುಖ್ಯವಾಗಿ ಮೂರು ಹಂತಗಳು. ಹುಟ್ಟು, ಮದುವೆ, ಸಾವು. ಹುಟ್ಟು - ಸಾವು ನಮ್ಮ ಕೈಯಲ್ಲಿ ಇಲ್ಲ. ಅದು ಪ್ರಕೃತಿ ನಿಯಮ. ಮದುವೆಯು ಮಾನವನ ಜೀವನದ ಪ್ರಮುಖಘಟ್ಟ. ಮಾನವನ ಜೀವನ ನಿಜವಾಗಿ ಆರಂಭವಾಗುವುದು ಇಲ್ಲಿಂದಲೆ.

ಭಾರತದಂತಹ ರಾಷ್ಟçದ ಸಂಸ್ಕೃತಿಯಲ್ಲಿ ಮದುವೆಗೆ ಪ್ರಾಮುಖ್ಯತೆ ಅಷ್ಟು ಇತ್ತು. ಈಗ ಮದುವೆ ಅಂದರೆ ಭಯವಾಗುತ್ತದೆ. ಏಕೆಂದರೆ ದಿನವೊಂದಕ್ಕೆ ನೂರಾರು ವಿಚ್ಛೇದನೆಯ ವ್ಯಾಜ್ಯಗಳು ದಾಖಲೆ ಆಗುತ್ತಿದೆ. ಅದಕ್ಕೆ ಕಾರಣಗಳು ಸಾವಿರ ಹೇಳಬಹುದು. ಆದರೆ ನನ್ನ ಪ್ರಕಾರ ಯುವ ಪೀಳಿಗೆಯ ಕೆಲವು ಮಂದಿ ಮದುವೆಯನ್ನು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಅಂದರೆ ವ್ಯಾಪಾರ ಅಂತ ತಿಳಿದುಕೊಂಡಿದ್ದಾರೆ. ಈಗ ಮದುವೆ ನಡೆಯುವುದು ದೈಹಿಕ ಮತ್ತು ಆರ್ಥಿಕ ಸ್ಥಿತಿ ಮೇಲೆ. ಹಳೆ ಕಾಲದಲ್ಲಿ ಗಂಡಿನ ಕಡೆ ಆರ್ಥಿಕವಾಗಿ ಚೆನ್ನಾಗಿದ್ದರೆ ಸಾಕಿತ್ತು. ಅದು ಈಗಿನಷ್ಟು ನಿರೀಕ್ಷೆ ಇರಲಿಲ್ಲ. ಈಗ ಹೆಣ್ಣು, ಗಂಡು ಇಬ್ಬರ ಸಂಪನ್ಮೂಲಗಳು ಸರಿ ಹೊಂದಿದರೆ ಮಾತ್ರ ಮದುವೆ. ಅದ್ದರಿಂದ ಇಂದು ಬಹುಸಂಖ್ಯೆಯಲ್ಲಿ ಸರಿಯಾದ ವಯಸ್ಸಿಗೆ ಮದುವೆ ಆಗುತ್ತಿಲ್ಲ. ಹಳ್ಳಿಯಲ್ಲಿರುವ ಹುಡುಗರಿಗೆ ಹೆಣ್ಣು ಸಿಗುವುದು ಮರೀಚಿಕೆಯಾಗಿದೆ. ಹೆಚ್ಚು ಓದಿ ಒಳ್ಳೆ ಕೆಲಸವಿರುವ ಹುಡುಗಿಯರ ನಿರೀಕ್ಷೆ ಅಗತ್ಯಕ್ಕಿಂತ ಹೆಚ್ಚು. ಇದರ ಪರಿಣಾಮ ಸಂಬAಧಗಳು ಅರ್ಥ ಕಳೆದುಕೊಂಡಿದೆ. ಈಗಿನ ಪೋಷಕರು ಹಾಗೂ ಮಕ್ಕಳು ಆರ್ಥಿಕವಾಗಿ ಒಂದಷ್ಟು ಜನ ಚೆನ್ನಾಗಿ ಇದ್ದಾರೆ. ಇವರುಗಳು ತಮ್ಮ ಮಕ್ಕಳ ಮದುವೆಯನ್ನು ತಮ್ಮ ತೃಪ್ತಿಗಾಗಿ ಮಾಡುವುದಿಲ್ಲ. ಸಮಾಜದಲ್ಲಿ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಲು ನಡೆಸುತ್ತಾರೆ. ಉಳಿದವರು ಅವರನ್ನು ಅನುಕರಣೆ ಮಾಡಿ ಜೀವನಪೂರ್ತಿ ಸಂಪಾದನೆ ಮಾಡಿದ್ದು ಅದರೊಡನೆ ಒಂದಷ್ಟು ಸಾಲ ಮಾಡಿ ಮದುವೆ ಮಾಡಿ ಒದ್ದಾಡ್ತಾರೆ.

ಇನ್ನು ಕೆಲವು ಸಂಬAಧಗಳಲ್ಲಿ ಮದುವೆಗೆ ಮುಂಚೆನೇ ಹನಿಮೂನ್ ಟಿಕೆಟ್ ಬುಕ್ ಆಗಿರುತ್ತದೆ. ಮದುವೆಯಾದ ೨ ರಿಂದ ೩ ದಿನದಲ್ಲಿ ಹನಿಮೂನ್ ಹೋಗಿ ಬರುವಾಗ ಡೈವೋರ್ಸ್ಗೆ ರೆಡಿ ಆಗಿ ಬರುತ್ತಾರೆ. ಇದು ಉತ್ಪೆçÃಕ್ಷೆ ಅಲ್ಲ ವಾಸ್ತವ. ಏಕೆಂದರೆ ಹಳೆ ಕಾಲದಲ್ಲಿ ಹೊಸದಾಗಿ ಮದುವೆ ಆದ ನಂತರ ಹುಡುಗ - ಹುಡುಗಿ ಇಬ್ಬರನ್ನು ಒಂದು ತಿಂಗಳು ಕನಿಷ್ಟ ಹತ್ತಿರದ ಸಂಬAಧಿಕರು, ಆಪ್ತರ ಮನೆಗೆ ಊಟಕ್ಕೆ ಕರಿಯುತ್ತಿದ್ದರು. ಹೊಸ ದಂಪತಿಗಳಿಗೆ ಇದರಿಂದ ಅವರಿಗೆ ನೆಂಟರು, ಊರಿನವರು ಹೀಗೆ ಎಲ್ಲರ ಪರಿಚಯ ಆಗುತಿತ್ತು. ಈಗ ಹಾಗೆ ಅಲ್ಲ, ಮದುವೆಯಾಗಿ ನಾಲಕ್ಕು ಐದು ದಿನಕ್ಕೆ ಹನಿಮೂನ್‌ಗೆ ಹೊರಟು ಬಿಡುತ್ತಾರೆ. ಹನಿಮೂನ್‌ನಲ್ಲಿ ಬರಿ ಇಬ್ಬರೇ. ಒಬ್ಬರೊಬ್ಬರು ಇಂಪ್ರೆಸ್ ಮಾಡುತ್ತಾ ೧೫ ರಿಂದ ೨೦ ದಿನ ಕಳೆದು ವಾಪಸ್ಸು ಬಂದ ನಂತರ ತಮ್ಮ ನಿತ್ಯದ ಬದುಕಿನ ಜಂಝಾಟ ಆರಂಭಗೊAಡಾಗ ಗೊತ್ತಾಗುತ್ತದೆ. ಇಷ್ಟು ದಿನ ನಾನು ಅನುಭವಿಸಿದ್ದು ಬೇರೆ, ಇನ್ನು ಅನುಭವಿಸುವುದು ಬೇರೆ ಅಂತ. ಅದನ್ನು ಅರ್ಥ ಮಾಡಿಕೊಂಡರೆ ಬದುಕು ಸುಗಮ. ‘ಇಗೋ' (ಅಹಂ) ಅಥವಾ ಹಳೆಯ ಹೋಲಿಕೆ ಬೆಳೆದರೆ ಬಾಳಿನ ಹಾದಿ ದುರಂತ.

ಹಿಂದೆ ಮದುವೆ ಅಂದರೆ ಅಷ್ಟು ಪ್ರಾಮುಖ್ಯತೆ ಇತ್ತು. ಮದುವೆ ದಿನ ತಂದೆ - ತಾಯಿ ಸತ್ತು ಹೋದರೂ ಸುದ್ದಿ ಯಾರಿಗೂ ತಿಳಿಸದೆ ಮದುವೆ ಕಾರ್ಯಕ್ರಮ ಮುಗಿಸಿದ ಅನೇಕ ಉದಾಹರಣೆ ನಮ್ಮ ಮುಂದಿದೆ.

ಇದು ಸುಮಾರು ೬೦ ರಿಂದ ೭೦ ವರ್ಷದ ಹಿಂದೆ ಮದುವೆಯ ಒಂದು ಚಿತ್ರಣ. ಮದುವೆ ಅಂದರೆ ಮನೆಯಲ್ಲಿ ನೆಂಟರಿಷ್ಟರಲ್ಲಿ ಒಂದು ರೀತಿಯ ಸಂಭ್ರಮ - ಸಡಗರ. ಸಾಧಾರಣವಾಗಿ ಮದುವೆ ದಿನಾಂಕ ನಿಗದಿಯಾದ ದಿನದಿಂದ ಮದುವೆಗೆ ತಯಾರಿ ಆರಂಭವಾಗುತ್ತದೆ. ಈಗಿನ ಹಾಗೆ ಅಲ್ಲ. ಪ್ರತಿಯೊಂದು ವಸ್ತುವನ್ನು ಹೊಂದಿಸಬೇಕಿತ್ತು. ಗುಡಿಸಲು ಹಿಡಗಲಿನಿಂದ ಹಿಡಿದು ಕೂರಲು ಬೆಂಚ್‌ವರೆಗೂ. ಅಂದು ಮನೆಯಲ್ಲಿ ಬಹುತೇಕ ಮದುವೆ ನಡೆಯುತ್ತಿದ್ದವು. ನಂತರದ ದಿನಗಳಲ್ಲಿ ಊರಿನ ಶಾಲೆಗಳಲ್ಲಿ ನಡೆಯುತ್ತಿದ್ದವು. ಮೊದಲು ಪಾತ್ರೆ, ಬೆಂಚ್‌ಗಳ ಸಂಗ್ರಹ, ಊರಿನ ಸುತ್ತಮುತ್ತಲಿನವರ ಮನೆಗಳಿಂದ ಸಂಗ್ರಹ, ಸಣ್ಣ ಚಮಚದಿಂದ ಹಿಡಿದು ದೊಡ್ಡ ಪಾತ್ರೆಗಳವರೆಗೂ ಸಂಗ್ರಹಿಸಬೇಕಿತ್ತು. ಅದಕ್ಕೆ ಯಾರ-ಯಾರ ಮನೆಯಿಂದ ತಂದದ್ದು ಎಂದು ಗುರುತಿಸಿ ಇಡಬೇಕು. ಅಡುಗೆಯವರು ಬಂದು ಅಡುಗೆ ಮಾಡುವ ಜಾಗದಲ್ಲಿ ಒಲೆ ಹಾಕಬೇಕು. ಅದಕ್ಕೆ ದೊಡ್ಡ ದೊಡ್ಡ ಕಲ್ಲು ಅದರ ಮೇಲೆ ಪಾತ್ರೆ ಇಟ್ಟು ಅವನು ಓಕೆ ಮಾಡಬೇಕು. ಮದುವೆ ಒಂದು ಅಂದಾಜು ಒಂದು ತಿಂಗಳ ಮೊದಲೇ ಸೌದೆ ಕಡಿಯಬೇಕು. ಅದಕ್ಕೂ ನಿರ್ದಿಷ್ಟ ಮರ ಇರುತ್ತದೆ. ಮದುವೆ ಅಂಗಳದಲ್ಲಿ ಚಪ್ಪರ ಹಾಕಿ ಕೂರಲು ವ್ಯವಸ್ಥೆ ಮಾಡಬೇಕು. ಈಗಿನ ಹಾಗೆ ಶಾಮಿಯಾನ ಪ್ಲಾಸ್ಟಿಕ್ ಹೊದಿಕೆ ಇರಲಿಲ್ಲ. ಪೂರ್ತಿ ಸೊಪ್ಪು ಹಾಕಿ ಬಿಸಿಲು ಬೀಳದ ಹಾಗೆ ಮಾಡುತ್ತಿದ್ದರು. ಬೆಳಕಿನ ವ್ಯವಸ್ಥೆಗೆ ಪೆಟ್ರೋಮ್ಯಾಕ್ಸ್ ಅದನ್ನು ಪಂಪ್ ಮಾಡುವುದು. ಅದು ಉರಿಸೋಕೆ ಪಡುತ್ತಿದ್ದ ಪಾಡು ಇನ್ನೂ ನೆನಪಿದೆ. ಇನ್ನು ಅಡುಗೆಗೆ ಸಾಮಾನು, ತರಕಾರಿ ತರಲು ಮದುವೆಗೆ ಒಂದೆರಡು ದಿನ ಇರುವಾಗ ಸಂತೆಗೆ ಹೋಗಿ ಎಲ್ಲಾ ಸಾಮಾನು ತಂದು ಇಡಬೇಕು. ಮೊದಲು ಎಲ್ಲಾ ಹುಡಿಗಳನ್ನು, ತಿಂಡಿಯನ್ನು ಮನೆಯಲ್ಲಿ ಮಾಡುತ್ತಿದ್ದರು. ಅದನ್ನು ಮಾಡುವುದೇ ಒಂದು ಸಂಭ್ರಮ. ಏಕೆಂದರೆ ಅವರ ಆಪ್ತ ಕೆಲವು ಮಹಿಳೆಯರು ಸೇರಿ ಮಾಡುವುದು. ಹಾಗೆ ಬಟ್ಟೆ ನೋಡುವ, ಬಳೆ ಹಾಕುವ, ತಿಂಡಿ ಮಾಡುವುದು ಹೀಗೆ ಪ್ರತಿಯೊಂದು ಕೆಲಸವನ್ನು ಪರಸ್ಪರ ಹಂಚಿಕೊAಡು ಮಾಡುವುದು. ಹಾಗೆ ಅನೇಕರು ನಾನು ಇಂತಹದು ಕೊಡುತ್ತೇನೆ ಅಂತ ವಸ್ತು ರೂಪದಲ್ಲಿ ಸಹಾಯ ಮಾಡುತ್ತಿದ್ದರು. ಅಂದು ಬಹುತೇಕ ಮದುವೆಗಳು ಬೇರೆ ಬೇರೆ ಅಂದರೆ ಹುಡುಗಿ - ಹುಡುಗ ಅವರ ಅವರ ಮನೆಯಲ್ಲಿ ಮದುವೆ ಒಂಟಿ ಮುಹೂರ್ತ ಮಾಡಿ ಮಧ್ಯಾಹ್ನ ಊಟ ಮುಗಿಸಿ ಹುಡುಗನ ಕಡೆಯವರು ಹುಡುಗಿ ಮನೆಗೆ ದಿಬ್ಬಣ ಹೊರಡುತ್ತಾರೆ. ಆಗ ವಾಹನ ವ್ಯವಸ್ಥೆ ಇರಲಿಲ್ಲ. ಅಪರೂಪಕ್ಕೆ ಊರಿನಲ್ಲಿ ಜೀಪು ಇದ್ದರೆ ಒಂದು ಅಥವಾ ಎರಡು ಜೀಪು. ಅದರಲ್ಲಿ ನಾಲಕ್ಕು ಜೀಪಿನಷ್ಟು ಜನ. ಅದು ಬಹುತೇಕ ಊರುಗಳಿಗೆ ರಸ್ತೆ ವ್ಯವಸ್ಥೆ ಇರಲಿಲ್ಲ. ಜೀಪು ಇಳಿದು ಪುನಃ ನಡೆದು ಹುಡುಗಿ ಮನೆಯಲ್ಲಿ ದಂಪತಿ ಮುಹೂರ್ತ ಮುಗಿಸಿ ಹುಡುಗಿಯನ್ನು ಕರೆದುಕೊಂಡು ಗಂಡಿನ ಮನೆ ತಲುಪುವಷ್ಟರಲ್ಲಿ ಬೆಳಕು ಹರಿದ ಉದಾಹರಣೆಗಳಿವೆ.

ಕಾಲ ಉರುಳಿದಂತೆ ಅಲ್ಲಲ್ಲಿ ದವಸ ಭಂಡಾರಗಳು ಹುಟ್ಟಿಕೊಂಡವು. ಮುಂದೆ ಅಂದಾಜು ೮೦ರ ದಶಕಗಳಲ್ಲಿ ಕಲ್ಯಾಣ ಮಂಟಪಗಳ ಪರ್ವ ಆರಂಭವಾಯಿತು. ಈ ಸಮಯದಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿತು. ಕಲ್ಯಾಣ ಮಂಟಪದಲ್ಲಿ ದಂಪತಿ ಮುಹೂರ್ತ ಆರಂಭವಾಯಿತು. ಕಾಲ ಉರುಳಿದಂತೆ ಕಾಲಕ್ಕೆ ಸರಿಯಾಗಿ ಬದಲಾವಣೆ ಆಗಿದೆ. ಅದು ಪ್ರಕೃತಿ ನಿಯಮ. ಅದು ಈ ಪರಿ ಬದಲಾವಣೆ ಆಗಬಾರದಿತ್ತು. ನನಗೆ ಈಗ ಮದುವೆಯಲ್ಲಿ ಊಟ ಮಾಡುವುದು ಅಂದರೆ ಹೊಟೇಲಲ್ಲಿ ಊಟ ಮಾಡಿದ ಅನುಭವವಾಗುತ್ತದೆ. ಹಿಂದೆ ಜನರು ಕುಳಿತು ಊಟ ಮಾಡುತ್ತಿದ್ದರು. ವರ ಹಾಗೂ ವಧುವಿನ ಎರಡು ಕಡೆಯವರು ಹೇಗಿದ್ದೀರ, ನಿಮ್ಮ ಮನೆಯವರು ಬಂದಿಲ್ಲವ, ಊಟ ಮಾಡಿದ್ದೀರಾ, ಹೇಗಿತ್ತು, ಏನಾದ್ರು ಬೇಕಾದ್ರೆ ಕೇಳಿ ಹೀಗೆ ಎಲ್ಲರನ್ನು ಕೇಳಿ ಉಪಚಾರ ಮಾಡುತ್ತಿದ್ದರು. ಅದೇ ಇಂದು ೫೦೦ ಜನರ ಸಾಮರ್ಥ್ಯ ಇರುವ ಕಲ್ಯಾಣ ಮಂಟಪಕ್ಕೆ ಎರಡು ಮೂರು ಸಾವಿರ ಜನ ಸೇರಿಸುವುದು. ಇದರ ಪರಿಣಾಮ ಪಾರ್ಕಿಂಗ್ ಸಮಸ್ಯೆ, ಶುಭ ಕೋರಲು, ಊಟಕ್ಕೆ ದೊಡ್ಡ ಸರತಿ ಸಾಲು, ಇಂತಹ ಸಮಸ್ಯೆಗಳಿಂದ ಇದರ ಮೂಲ ಅರ್ಥ ಕಳೆದು ಕೊಂಡಿದೆ.

ಕೊನೆಯ ಮಾತು ಇಂದು ಮದುವೆ ಅನ್ನುವುದು ಸಂಭ್ರಮವಾಗಿ ಉಳಿದಿಲ್ಲ. ಮಾಡುವವರು ಎಲ್ಲಾ ಅದ್ದೂರಿಯಾಗಿ ಮಾಡುತ್ತಾರೆ. ಅದು ಕೊರಗಿಕೊಂಡೇ ಮಾಡುತ್ತಾರೆ. ಉದಾಹರಣೆಗೆ ಅಯ್ಯೊ ಮದುವೆಗೇ ಕರಿಬೇಕು, ಬಟ್ಟೆ ಮಾಡಬೇಕು ಹೀಗೆ... ಮತ್ತೆ ಮದುವೆಗೆ ಹೋಗುವವರು ಕಾಗದ ಕೊಟ್ಟರು ಎಂದು ಬರುತ್ತಾರೆಯೇ ಹೊರತು ಉತ್ಸಾಹದಿಂದ ಬರುವುದಿಲ್ಲ. ಏಕೆಂದರೆ ಜನರಿಗೂ ಕಷ್ಟ. ತುಂಬಾ ಸಮಾರಂಭ. ಒಂದೆಡೆ ಸಮಯ ಇನ್ನೊಂದೆಡೆ ಖರ್ಚು. ಒಂದೇ ದಿನ ೪-೫ ಸಮಾರಂಭ. ಅದರಿಂದ ಅವರಿಗೂ ಬೇಡ ಅನಿಸುತ್ತದೆ. ಅಂದು ಮದುವೆ ಅಂದರೆ ತಿಂಗಳಾಚರಣೆ. ಇಂದು ದಿನದ ಆಚರಣೆ. ಇಂದು ಹಣ ಕೊಟ್ಟರೆ ಎಲ್ಲಾ ರೆಡಿ. ವಧು-ವರ, ತಂದೆ-ತಾಯಿ ಕಲ್ಯಾಣ ಮಂಟಪಕ್ಕೆ ಬಂದರೆ ಸಾಕು. ಹಿಂದೆ ಮದುವೆಯಲ್ಲಿ ಸಿಗುವ ಮುಯ್ಯಿ ಹಣದಲ್ಲಿ ಮದುವೆ ಮನೆಯಲ್ಲಿ ಲೆಕ್ಕ ಮಾಡಿ ಅಲ್ಲೇ ಕೆಲವರ ಸಾಲ ನೀಡಬೇಕಿತ್ತು. ಆದರೂ ಮದುವೆಯಲ್ಲಿ ಏನೋ ಸಂಭ್ರಮ ಇತ್ತು. ಅದಕ್ಕೆ ಕಾರಣ ಮದುವೆ ಸಂಬAಧಿಕರ ಪಾತ್ರ ಮುಖ್ಯವಾಗಿತ್ತು. ಇಂದು ಇವೆಂಟ್ ಮ್ಯಾನೇಜ್‌ಮೆಂಟ್ ಪಾತ್ರ ಮುಖ್ಯ. ಅಂದು ಮೈ ಮೇಲೆ ಸಾಧಾರಣ ಬಟ್ಟೆ ಹಾಕಿದರೂ ಗಮನಿಸುವವರಿದ್ದರು. ಇಂದು ಬೆಲೆ ಬಾಳುವ ಬಟ್ಟೆ ಧರಿಸಿರುವುದನ್ನು ನೋಡಲು ಜನರಿಲ್ಲ. ಇಂದು ಟೇಬಲ್ ಮೇಲೆ ಅಲಂಕೃತ ಪಾತ್ರದಲ್ಲಿ ತಿನ್ನಲಾಗದಷ್ಟು ತಿನಿಸುಗಳಿವೆ. ಆದರೆ ಊಟ ಆಯಿತ ಎಂದು ಕೇಳುವವರಿಲ್ಲ. ಅಂದು ತಿನಿಸುಗಳು ಕಡಿಮೆ ಇದ್ದರೂ ಉಪಚರಿಸುವ ಹೃದಯಗಳು ಇದ್ದವು. ಕಾಲ ಬದಲಾವಣೆಗೊಂಡಿದೆ. ನಾವು ಸಮಯದ ಜೊತೆಗೆ ಹೆಜ್ಜೆ ಹಾಕೋಣ. ಆದರೆ ನಮ್ಮ ಅದ್ದೂರಿತನಕ್ಕೆ ಬದುಕಿನ ಅರ್ಥ ಕಳೆದುಕೊಂಡದ್ದು ದುಃಖಕರವಾದ ವಿಷಯ.

- ಬಾಳೆಯಡ ಕಿಶನ್ ಪೂವಯ್ಯ,

ಲೇಖಕರು ಮತ್ತು ವಕೀಲರು,

ಮಡಿಕೇರಿ, ಮೊ: ೯೪೪೮೮೯೯೫೫೪