ಸಿದ್ದಾಪುರ, ಜೂ. ೧೫ : ಕೊಡಗು ಜಿಲ್ಲೆಯ ಮೂರ್ನಾಡು ಐಕೊಳ ಗ್ರಾಮದ ನಿವಾಸಿ ಪಾರೇರ ಸೋನಿಶ್ ಚಂಗಪ್ಪ, ಅವರು ಭಾರತೀಯ ಸೇನೆಯ ಆರ್ಟಿಲರಿ ವಿಭಾಗದಲ್ಲಿ ಲೆಫ್ಟಿನೆಂಟ್ ಕಮಿಷನ್ಡ್ ಆಗಿದ್ದಾರೆ. ಪಾರೇರ ಸೋನಿಶ್ ಚಂಗಪ್ಪ ಅವರು ರಾಷ್ಟಿçÃಯ ಮಿಲಿಟರಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಪೂರ್ಣಗೊಳಿಸಿ ಪ್ರಥಮ ಪ್ರಯತ್ನದಲ್ಲಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್.ಡಿ.ಎ.) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಬಳಿಕ ಪುಣೆಯಲ್ಲಿ ಮೂರು ವರ್ಷಗಳ ಕಾಲ ಸೈನಿಕ ತರಬೇತಿ ಪಡೆದು ನಂತರ ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಒಂದು ವರ್ಷದ ಅಧಿಕಾರಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಇದೀಗ ಭಾರತೀಯ ಸೇನೆಗೆ ಅಧಿಕಾರಿಯಾಗಿ ಸೇರ್ಪಡೆಯಾಗಿದ್ದಾರೆ.

ಸೋನಿಶ್ ಅವರ ಕುಟುಂಬಕ್ಕೆ ಭಾರತೀಯ ಸೇನೆಯೊಂದಿಗೆ ದೀರ್ಘಕಾಲದ ನಂಟಿದೆ. ಅವರ ತಾತ ಪಾರೇರ ದಿ.ಚಂಗಪ್ಪ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು, ಇದಲ್ಲದೆ ಅವರ ತಂದೆ ಜಯ ಪಿ.ಸಿ. ಅವರು ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸುಬೇದಾರ್ ಮೇಜರ್ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಇದೀಗ ಸೋನಿಶ್ ಚಂಗಪ್ಪ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ಈ ಕುಟುಂಬದ ಮೂರನೇ ತಲೆಮಾರಿನ ಸೈನಿಕ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ.

ಸೋನಿಶ್ ಅವರು ಜಿಲ್ಲೆಯ ಮೂರ್ನಾಡು ಐಕೊಳ ಗ್ರಾಮದ ನಿವಾಸಿ ಪಿ.ಸಿ. ಜಯ ಮತ್ತು ಸಬಿತಾ (ಸೌಮ್ಯ) ದಂಪತಿಯ ಪುತ್ರ.