ಕೂಡಿಗೆ: ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟ.ಎ. ನಾರಾಯಣ ಗೌಡ ಅವರ ಹುಟ್ಟುಹಬ್ಬದ ಅಂಗವಾಗಿ ಕೊಡಗು ರಕ್ಷಣಾ ವೇದಿಕೆಯ ವತಿಯಿಂದ ಕೂಡಿಗೆ ಶ್ರೀ ಸದ್ಗುರು ಅಪ್ಪಯ್ಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳ ವಿತರಣೆಯ ಜೊತೆಯಲ್ಲಿ ಸಿಹಿ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರಾದ ದೀಪಾ ಪೂಜಾರಿ, ಕೊಡಗು ಜಿಲ್ಲಾಧ್ಯಕ್ಷ ಕೆ.ಪಿ ರಾಜು, ಕೊಡಗು ಮಹಿಳಾ ಜಿಲ್ಲಾಧ್ಯಕ್ಷೆ ಜ್ಯೋತಿ ಕುದುಪಜೆ, ಜಿಲ್ಲಾ ಸಂಚಾಲಕ ಗೋವಿಂದರಾಜ ದಾಸ್, ಜಿಲ್ಲಾ ಸಂಘ ಟನಾ ಕಾರ್ಯದರ್ಶಿ ಮಂಜುನಾಥ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ದಿವ್ಯ ದೇವಾಂಗ, ಜಿಲ್ಲಾ ಮಹಿಳಾ ಕಾರ್ಯದರ್ಶಿ ಭಾಗ್ಯ, ಕುಶಾಲನಗರ ತಾಲೂಕು ಗೌರವಾಧ್ಯಕ್ಷ ರೊನಾಲ್ಡ್, ಕುಶಲನಗರ ತಾಲೂಕು ಅಧ್ಯಕ್ಷರಾದ ಬಿಜೆ ಅಣ್ಣಯ್ಯ, ತಾಲೂಕು ಉಪಾಧ್ಯಕ್ಷ ಫಯಾಜ್, ಲೂಕು ಕಾರ್ಯದರ್ಶಿ ಹರೀಶ್, ಸದಸ್ಯ ಅಶ್ವಿನಿ, ಕೆ.ಜಿ ಮಂಜಯ್ಯ, ಸದ್ಗುರು ಅಪ್ಪಯ್ಯ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಪುಷ್ಪ, ಶಿಕ್ಷಕ ವೃಂದ, ವಿದ್ಯಾರ್ಥಿ ಬಳಗ ಇದ್ದರು.