ಕೂಡಿಗೆ, ಜೂ. ೧೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯದಲ್ಲಿ ರೈತರು ತೊಡಗಿದ್ದಾರೆ. ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದ ಸಹಕಾರ ಸಂಘಗಳಲ್ಲಿ ಮತ್ತು ಖಾಸಗಿ ಸಂಸ್ಥೆಯ ಗೊಬ್ಬರದ ಅಂಗಡಿಗಳಲ್ಲಿ, ತಾಲೂಕು ಕೇಂದ್ರದ ರೈತ ಸಂಪರ್ಕ ಕೇಂದ್ರಗಳಲ್ಲಿ ಮೆಕ್ಕೆಜೋಳದ ವಿವಿಧ ಕಂಪೆನಿಯ ಮತ್ತು ಹೈಬ್ರೀಡ್ ತಳಿ ಮೆಕ್ಕೆಜೋಳದ ಕಾಳುಗಳನ್ನು ದಾಸ್ತಾನು ಇಡಲಾಗಿದ್ದು, ಸರಕಾರದ ನಿಯಮಾನುಸಾರ ರೈತರು ಖರೀದಿ ಮಾಡಿ ಬಿತ್ತನೆ ಮಾಡುವಲ್ಲಿ ತೊಡಗಿಸಿ ಕೊಂಡಿದ್ದಾರೆ. ಕೂಡಿಗೆ, ಹೆಬ್ಬಾಲೆ, ಕೂಡುಮಂಗಳೂರು, ತೊರೆನೂರು, ಶಿರಂಗಾಲ ಸೇರಿದಂತೆ ೫೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಮಳೆ ಆಶ್ರಯದ ಬೆಳೆಯಾಗಿರುವ ಮೆಕ್ಕೆಜೋಳದ ವ

್ಯವಸಾಯ ಮಾಡಲು ಭೂಮಿ ಉಳುಮೆ ಮಾಡಿ ಬಿತ್ತನೆ ಕಾರ್ಯ ನಡೆಯುತ್ತಿದೆ. - ಕೆ.ಕೆ. ನಾಗರಾಜಶೆಟ್ಟಿ.