ಮಡಿಕೇರಿ, ಜೂ. ೧೪: ಸಂತ ಮೈಕಲರ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು ಧರ್ಮಗುರು ಜಿನುತು ಪರಿಸರದ ಕುರಿತು ಮಾತನಾಡಿದರು. ಬಾಲಕಿ ಹುವೀಕ್ಷ ಮತ್ತು ತಂಡ ನೃತ್ಯ ಪ್ರದರ್ಶಿಸಿತು. ವ್ಯವಸ್ಥಾಪಕರು, ಸಂಚಾಲಕರಾದ ಫಾದರ್ ಪ್ಯಾಟ್ರಿಕ್ ಜವೆರ್ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸರಿತ ಮಾಡ್ಸರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಗಾಯಿ ರಾಣಿ ತಂಡ ಪ್ರಾರ್ಥಿಸಿ, ಶಿಕ್ಷಕಿ ರಾಧಿಕ ಸ್ವಾಗತಿಸಿ, ನಿರೂಪಿಸಿದರು. ಸಾಗಾಯಿ ರಾಣಿ ವಂದಿಸಿದರು. ನಜಲ ಮತ್ತು ತಂಡದವರು ಪರಿಸರ ಗೀತೆ ಹಾಡಿದರು.