ಬಲ್ಯಮಂಡೂರು ಸ.ಕಿ.ಪ್ರಾ. ಶಾಲೆ
ಮಡಿಕೇರಿ: ಇತ್ತೀಚೆಗೆ ಪೊನ್ನಂಪೇಟೆ ತಾಲೂಕು ಬಲ್ಯಮಂಡೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಗೋಣಿಕೊಪ್ಪದ ಪ್ರತಿಷ್ಠಿತ ಸಂಸ್ಥೆ ಲಿಯೋರ ಗೋಲ್ಡ್ ಅಂಡ್ ಡೈಮಂಡ್ ವತಿಯಿಂದ ಸ್ಕೂಲ್ ಬ್ಯಾಗ್ಸ್ ಮತ್ತು ಲೇಖನಿ ಸಾಮಗ್ರಿ ವಿತರಿಸಿದರು. ಈ ಸಂದರ್ಭ ನಿತಿನ್ ಸೇಲ್ಸ್ ಎಕ್ಸಿಕ್ಯೂಟಿವ್, ಅಜೇಶ್ ಸೇಲ್ಸ್ ಆಫೀಸರ್, ಲಾರೆನ್ಸ್ ಸಮಾಜ ಸೇವಕರು, ಮುಖ್ಯ ಶಿಕ್ಷಕಿ ಕೆ.ಪಿ. ಪವಿತ್ರ., ಸಹ ಶಿಕ್ಷಕ ತಿರುನೆಲ್ಲಿಮಡ ಜೀವನ್, ಪದ್ಮ, ಸುನೋಜಮ್ಮ ಹಾಜರಿದ್ದರು.
ಚೆಟ್ಟಳ್ಳಿ ಪ್ರೌಢಶಾಲೆ
ಮಡಿಕೇರಿ: ಸಮಾಜ ಸೇವಕ ಹಾಗೂ ಉದ್ಯಮಿ ಎಡಿಕೇರಿ ಪ್ರಸನ್ನ ಅವರು ಚೆಟ್ಟಳ್ಳಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪೇರಿಯನ ಪಿ. ಜಯಾನಂದ, ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ, ಉಪಾಧ್ಯಕ್ಷ ಸೋಮೆಯಂಡ ದಿಲೀಪ್ ಅಪ್ಪಚ್ಚು, ಖಜಾಂಚಿ ಬಟ್ಟಿರ ಎಸ್. ಕಾಳಪ್ಪ ಸೇರಿದಂತೆ ಶಾಲಾ ಆಡಳಿತ ಮಂಡಳಿಯ ನಿರ್ದೇಶಕರು, ಶಾಲಾ ಮುಖ್ಯೋಪಾಧ್ಯಾ ಯಿನಿ ಕೆ. ತಿಲಕ ನೋಟ್ ಪುಸ್ತಕ ವಿತರಿಸಿದರು.
ಅಧ್ಯಕ್ಷ ಪಿ.ಪಿ. ಜಯಾನಂದ ಮಾತನಾಡಿ, ಉತ್ತಮ ಫಲಿತಾಂಶ ನೀಡುವುದರೊಂದಿಗೆ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.
ಕಡಂಗ ಸರ್ಕಾರಿ ಶಾಲೆ
ಕಡಂಗ: ಸ್ಥಳೀಯ ಸರ್ಕಾರಿ ಶಾಲೆಯ ೬೦ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನು ಸಮಾಜ ಸೇವಕರಾದ ಸಬೀಲ್ ಮತ್ತು ತಂದೆ ಅಬ್ದುಲ್ಲಾ ಹಾಜಿ ಅವರು ವಿತರಿಸಿದರು.
ಈ ಸಂದರ್ಭ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಹೇಮಾವತಿ, ಸ್ಥಳೀಯ ಪತ್ರಕರ್ತ ನೌಫಲ್ ಸ್ಥಳೀಯ ದಾನಿ ಗಳನ್ನು ಸಂಪರ್ಕಿಸಿ ಎಲ್ಲಾ ವಿದ್ಯಾರ್ಥಿ ಗಳಿಗೆ ನೋಟು ಪುಸ್ತಕ ವಿತರಣೆಗೆ ನೆರವಾಗಿ ದ್ದಾರೆ ಎಂದರು. ಮತ್ತೊಬ್ಬ ಶಿಕ್ಷಕಿ ವತ್ಸಲ ಮಾತನಾಡಿ, ವಿದ್ಯಾರ್ಥಿಗಳ ಯಶ್ಸಿಸಿಗೆ ದಾನಿಗಳ ಸಹಕಾರವು ಅಗತ್ಯ ಹಾಗೂ ದಾನಿಗಳ ಸಹಾಯ ಹೀಗೆ ಇರಲಿ ಎಂದರು.
ಈ ಸಂದರ್ಭ ಸಮಾಜ ಸೇವಕ ಝಕ್ರಿಯ ಮತ್ತು ಸಹ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಚೆಯ್ಯಂಡಾಣೆ ಸ.ಮಾ.ಪ್ರಾ. ಶಾಲೆ
ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಅವರು ನೋಟ್ ಪುಸ್ತಕ ವಿತರಿಸಿದರು.
ಶಾಲೆಯ ಮುಖ್ಯ ಶಿಕ್ಷಕಿ ವಿಮಲಾ ಕೆ.ಎಂ., ಎಸ್ಡಿಎಂಸಿ ಹಾಗೂ ಶಾಲೆಯ ಪರವಾಗಿ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಈ ಸಂದರ್ಭ ಬಿದ್ದಂಡ ರಾಜ ಉತ್ತಪ್ಪನವರ ಪತ್ನಿ ಸಿಂತ್ಯಾ ಉತ್ತಪ್ಪ, ಸಿಆರ್ಪಿ ಪವಿತ್ರ, ಶಿಕ್ಷಕಿ ಜಯಪ್ರದ, ಅತಿಥಿ ಶಿಕ್ಷಕಿ ಜಿಜ್ಞ, ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.