ಕುಶಾಲನಗರ, ಜೂ. ೧೨: ಕಾವೇರಿ ನದಿಯಲ್ಲಿ ಮುಳುಗಿದ ಇಬ್ಬರು ಯುವಕರ ಪೈಕಿ ಓರ್ವನ ಮೃತ ದೇಹದ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು ಶುಕ್ರವಾರ ಸಂಜೆ ತನಕ ಸುಳಿವು ಲಭಿಸಿಲ್ಲ.
ಬುಧವಾರ ಸಂಜೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ನಾಗಾಲ್ಯಾಂಡ್ ಮೂಲದ ಇಬ್ಬರು ಯುವಕರು ಮುಳುಗಿ ನಾಪತ್ತೆಯಾಗಿದ್ದು ಓರ್ವ ಯುವಕನ ದೇಹವನ್ನು ಗುರುವಾರ ಪತ್ತೆ ಮಾಡಲಾಗಿತ್ತು. ಇನ್ನೋರ್ವ ಯುವಕ ಯಾಂಕAಗ್ (೨೩) ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ದೇಹಕ್ಕಾಗಿ ಸ್ಥಳೀಯ ಅಗ್ನಿಶಾಮಕ ದಳ ಮತ್ತು ಈಜು ತಜ್ಞ ಮುನೀರ್ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ಕುಶಾಲನಗರ ಟೌನ್ ಪೊಲೀಸರು ತಿಳಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಕಳೆದ ಎರಡು ದಿನಗಳಿಂದ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕೂಡ ಹೆಚ್ಚಳಗೊಂಡಿದೆ. ಮೃತ ಯುವಕರ ಸ್ನೇಹಿತರು ಬೆಂಗಳೂರಿನಿAದ ಆಗಮಿಸಿದ್ದು, ಪೊಲೀಸರೊಂದಿಗೆ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.