ಮಡಿಕೇರಿ, ಜೂ. ೧೧: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ಅವರ ಮೇಲೆ ವ್ಯಾಟ್ಸಾö್ಯಪ್ ಗ್ರೂಪ್‌ನಲ್ಲಿ ಕೆಲವಾರು ಆರೋಪ ಹೊರಿಸಿ ಸಂದೇಶ ಹರಿಯಬಿಟ್ಟಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಗೋಣಿಕೊಪ್ಪದ ಟಿ.ಎಲ್. ಶ್ರೀನಿವಾಸ್ ಅವರ ವಿರುದ್ಧ ಬಾಂಡ್ ಗಣಪತಿ ಅವರು ಮಡಿಕೇರಿ ನ್ಯಾಯಾಲಯದಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ. ಈ ಬಗ್ಗೆ ಈ ಹಿಂದೆ ಗೋಣಿಕೊಪ್ಪಲು ಠಾಣೆಗೆ ದೂರು ನೀಡಿದ ವೇಳೆ ಶ್ರೀನಿವಾಸ್ ಅವರನ್ನು ಪೊಲೀಸರು ವಿಚಾರಿಸಿದಾಗ ಅರ್ಜಿದಾರರಿಗೆ ನೋವಾಗಿದ್ದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ಅವಕಾಶವಿರುವುದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ.
ಸದರಿ ಸಂದೇಶ ವೈಯಕ್ತಿಕ ತೇಜೋವಧೆಗೆ ಸಂಬAಧಿಸಿ ರುವುದರಿಂದ ನ್ಯಾಯಾಲಯ ದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವಂತೆ ಪೊಲೀಸರು ಹಿಂಬರಹ ನೀಡಿದ್ದು, ಇದೀಗ ಬಾಂಡ್ ಗಣಪತಿ ಅವರು ಶ್ರೀನಿವಾಸ್ ವಿರುದ್ಧ ಮಡಿಕೇರಿ ನ್ಯಾಯಾಲಯದಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡಿದ್ದು, ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.