ಸಿದ್ದಾಪುರ, ಜೂ. ೧೧: ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಅರಣ್ಯ ಇಲಾಖೆ ತಂಡವನ್ನು ಕಾಡಾನೆಯೊಂದು ಬೆನ್ನಟ್ಟಿ ದಾಳಿಗೆ ಮುಂದಾದ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ನಡೆದಿದೆ.

ಕಳೆದೆರಡು ದಿನಗಳಿಂದ ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಬೈರಂಬಾಡ, ಕಣ್ಣಂಗಾಲ, ಯಡೂರು, ಪಲ್ಲಕೆರೆ, ಗುಹ್ಯ ಗ್ರಾಮಗಳ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿದ್ದ ಕಾಡಾನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರು ಒತ್ತಾಯಿಸಿದ ಮೇರೆಗೆ ೨ ದಿನಗಳಿಂದ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು.

ಗುರುವಾರ ಗುಹ್ಯ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಗುಂಪಿನಲ್ಲಿದ್ದ ಸಲಗ ಕೋಪಗೊಂಡು ತಂಡವನ್ನು ಕಾಫಿ ತೋಟದೊಳಗೆ ಬೆನ್ನಟ್ಟಿ ದಾಳಿಗೆ ಮುಂದಾಗಿದೆ. ಅಪಾಯವನ್ನು ಅರಿತ ಸಿಬ್ಬಂದಿ ಓಡಿ ದಾಳಿಯಿಂದ ಪಾರಾಗಿದ್ದಾರೆ ಮರಿಯಾನೆ ಸೇರಿದಂತೆ ೧೩ಕ್ಕೂ ಅಧಿಕ ಕಾಡಾನೆಗಳು ಕಂಡುಬAದಿತು. ಗುಹ್ಯ ಮಾರ್ಗದಿಂದ ಸಿದ್ದಾಪುರದ ಬೀಟಿಕಾಡು ಕಾಫಿ ತೋಟ ಮುಖಾಂತರ ಕಾಡಿಗೆ ಅಟ್ಟಲು ಕಾರ್ಯಾಚರಣೆ ತಂಡ ಪ್ರಯತ್ನಿಸಿತು. ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಕಾಫಿ ತೋಟದ ಒಳಗಿನಿಂದ ಕಾಡಿಗೆ ತೆರಳಲು ಹಿಂದೇಟು ಹಾಕುತ್ತಿವೆ.

ಕಾರ್ಯಾಚರಣೆ ಸಂದರ್ಭದಲ್ಲಿ ಗುಂಪಿನಿAದ ಬೇರ್ಪಟ್ಟು ಕೆಲವು ಕಾಡಾನೆಗಳು ಕಾಫಿ ತೋಟದ ಒಳಗೆ ಉಳಿದುಕೊಂಡಿದ್ದು, ರಾತ್ರಿ ಸಮಯದಲ್ಲಿ ಕಾರ್ಯಾಚರಣೆ ನಡೆಸಲು ಕೂಡ ಮಳೆಯಿಂದಾಗಿ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ.

ಡ್ರೋನ್ ಕ್ಯಾಮರಾ ಬಳಸಿ ಕಾಡಾನೆಗಳ ಚಲನವಲನವನ್ನು ಕಂಡು ಹಿಡಿದು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಕಾಡಿಗೆ ತೆರಳಿದ ಕಾಡಾನೆಗಳು ಮರಳಿ ಕಾಫಿ ತೋಟಕ್ಕೆ ಹಿಂತಿರುಗಿ ಬರುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.