ವಿನಾಯಕ ಶಾಲೆ
ವೀರಾಜಪೇಟೆ: ಮಲಬಾರ್ ರಸ್ತೆಯಲ್ಲಿರುವ ವಿನಾಯಕ ಇಂಗ್ಲೀಷ್ ಸ್ಕೂಲ್‌ನಲ್ಲಿ ಪರಿಸರ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ ನಡೆಯಿತು.
ವಿಶ್ವ ಪರಿಸರ ದಿನಾಚರಣೆ, ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶಾಲಾ ಶಿಕ್ಷಕರಾದ ಮೀನ ಎಂ.ಎನ್, ಪರಿಸರ ಮಾಲಿನ್ಯ, ಅದನ್ನು ತಡೆಯುವ ಬಗ್ಗೆ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕಾದ ಜವಾಬ್ದಾರಿಗಳನ್ನು ಅದರ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಾದ ಜಯಕುಮಾರಿ, ಶಾಲಾ ಮುಖ್ಯೋಪಾಧ್ಯಯಿನಿ ಪ್ರತಿಮಾ ಆಚಾರ್ಯ ಹಾಗೂ ಶೈಲಾ ಬಿ.ಎ ಸೇರಿದಂತೆ ಶಿಕ್ಷಕರು ವಿಧ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕಿಯರಾದ ದಿವ್ಯ ಟಿ.ಟಿ., ಅರ್ಪಿತಾ ಎನ್.ಎಸ್. ಮುಫೀದ ಎಂ. ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಂತ ಮೈಕಲರ ವಿದ್ಯಾಸಂಸ್ಥೆ.
ಮಡಿಕೇರಿ: ನಗರದ ಸಂತಮೈಕಲರ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಸಂಸ್ಥೆಯ ಸಂಚಾಲಕ ಪ್ಯಾಟ್ರಿಕ್ ಕ್ಸೇವಿಯರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಿನ ಪರಿಸ್ಥಿತಿಯಲ್ಲಿ ಪರಿಸರ ಸಂರಕ್ಷಣೆ ಅನಿವಾರ್ಯ ಆದ್ದರಿಂದ ಪ್ರತಿಯೊಬ್ಬರೂ ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಿ, ಕಾರ್ಯನಿರತರಾಗಬೇಕು ಎಂಬ ಕರೆ ನೀಡಿದರು.
ವಿದ್ಯಾರ್ಥಿನಿ ಲಿಪಿಕ್ಷಾ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಪ್ರಾಂಶುಪಾಲರಾದ ಪಂಕಜ, ಪ್ರೌಢಶಾಲಾ ಮುಖ್ಯ ಶಿಕ್ಷಕÀ ಜೆಫ್ರಿ ಡಿಸಿಲ್ವಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರುಗಳಾದ ಸಿಸ್ಟರ್ ಸರಿತಾ ಮಾಡ್ತಾ ಹಾಗೂ ಸಿಸ್ಟರ್ ಸಿಸಿಲಿಯ ಉಪಸ್ಥಿತರಿದ್ದರು. ಚರಿಷ್ಮಾ ನಿರೂಪಿಸಿ, ವಿನಯ ಶೆಟ್ಟಿ ಸ್ವಾಗತಿಸಿ, ಶ್ರುತಿ ವಂದಿಸಿದರು.
ವಿಜಯ ಆಂಗ್ಲ ಮಾಧ್ಯಮ ಶಾಲೆ
ಕಡಂಗ: ಕಡಂಗದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.
ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು. ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯಿನಿ ಪಟ್ರಪಂಡ ಗೀತಾ ಭೋಜಮ್ಮ ಅವರು ಪರಿಸರ ಸಂರಕ್ಷಣೆಯ ಅಗತ್ಯತೆ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರತಿಯೊಬ್ಬರೂ ಒಂದು ಗಿಡವನ್ನು ನೆಟ್ಟು ಅದರ ಆರೈಕೆ ಮಾಡುವ ಮೂಲಕ ಪರಿಸರವನ್ನು ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು, ಸಹ ಶಿಕ್ಷಕರು, ಶಾಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಸಂತ ಅಂತೋಣಿ ವಿದ್ಯಾಸಂಸ್ಥೆ
ಮಡಿಕೇರಿ: ಪೊನ್ನಂಪೇಟೆ ಸಂತ ಅಂತೋಣಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನವನ್ನು ಶಾಲೆಯ ಇಕೋ ಕ್ಲಬ್ ವತಿಯಿಂದ ಆಚರಿಸಲಾಯಿತು. ಇದೇ ಸಂದರ್ಭ ವಿದ್ಯಾರ್ಥಿಗಳು ಪರಿಸರ ಸಂರಕ್ಷಣಾ ಪ್ರತಿಜ್ಞೆ ಸ್ವೀಕರಿಸಿದರು.
ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಚಿತ್ರಕಲೆ ಸ್ಪರ್ಧೆಯನ್ನು ನಡೆಸಲಾಯಿತು. ಶಾಲಾ ಆವರಣದಲ್ಲಿ ತೆಂಗಿನ ಗಿಡಗಳನ್ನು ಮತ್ತು ಹಣ್ಣಿನ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ಮ್ಯಾನುವಲ್ ಡಿಸೋಜ, ಪ್ರಾಂಶುಪಾಲ ಶಂಭು ಕಾರ್ಯಪ್ಪ, ಮುಖ್ಯ ಶಿಕ್ಷಕಿ ರಜನಿ ಪಿ.ಎಸ್., ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೀರಾಜಪೇಟೆ: ಇಲ್ಲಿನ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಪರಿಸರ ದಿನಾಚರಣೆಯನ್ನು ರಾಷ್ಟಿçÃಯ ಸೇವಾ ಘಟಕದ ವತಿಯಿಂದ ಆಚರಿಸಲಾಯಿತು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮ ಎಂ.ಕೆ. ಮಾತನಾಡಿ, ಗಿಡವನ್ನು ನೆಟ್ಟು ಒಂದು ದಿನಕ್ಕೆ ಪರಿಸರ ದಿನ ಸೀಮಿತವಾಗಬಾರದರು. ಪ್ರತಿ ನಿತ್ಯವೂ ಪರಿಸರ ಸಂರಕ್ಷಣೆಯ ಕಾಳಜಿ ಹೊಂದಿರಬೇಕು. ಇದು ನಮ್ಮೆಲ್ಲರ ಜವಬ್ದಾರಿ ಹಾಗೂ ಕರ್ತವ್ಯವಾಗಿದೆ. ಪರಿಸರವು ಮಾನವನ ಜೀವನದ ಆಧಾರವಾಗಿದೆ. ಗಾಳಿ, ನೀರು, ಮಣ್ಣು, ಮರಗಳು, ಪ್ರಾಣಿಗಳು ಮತ್ತು ಪ್ರಕೃತಿಯ ಇತರ ಅಂಶಗಳು ಸೇರಿ ಪರಿಸರವನ್ನು ರೂಪಿಸುತ್ತವೆ. ಪರಿಸರವಿಲ್ಲದೆ ಜೀವಿಗಳ ಅಸ್ತಿತ್ವ ಸಾಧ್ಯವಿಲ್ಲ. ಪರಿಸರದ ಮಹತ್ವವನ್ನು ಅರಿಯುವ ಹಾಗೂ ಅದರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ ಎಂದರು.
ಗಿಡಗಳನ್ನು ನೆಡುವುದರ ಮೂಲಕ ಪರಿಸರ ಪ್ರಜ್ಞೆಯನ್ನು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟಿçÃಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ಅನುಪಮ ತಿಮ್ಮಯ್ಯ, ರಾಷ್ಟಿçÃಯ ಸೇವಾ ಯೋಜನಾ ಘಟಕದ ಸದಸ್ಯೆ ಪಿ.ಬಿ. ದೇಚಮ್ಮ, ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವೃಂದದವರು, ಬೋಧಕಕೇತರ ಸಿಬ್ಬಂದಿಗಳು, ಎನ್.ಎಸ್.ಎಸ್. ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಕರಡ ಪ್ರಾಥಮಿಕ ಶಾಲೆ
ಚೆಯ್ಯಂಡಾಣೆ: ಸಮೀಪದ ಕರಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಖ್ಯ ಶಿಕ್ಷಕಿ ಲೀಲಾವತಿ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಭಾಷಣ, ಹಾಡು, ಘೋಷಣೆಗಳು ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಕೂಡ ಏರ್ಪಡಿಸಲಾಗಿತ್ತು. ಎಲ್ಲಾ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತು ಚಿತ್ರಗಳನ್ನು ಬಿಡಿಸಿದರು. ನಂತರ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಸಂರಕ್ಷಿಸುವ ಸಂಕಲ್ಪ ಮಾಡಲಾಯಿತು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಸ್ವಚ್ಛ ಪರಿಸರವನ್ನು ನಿರ್ಮಿಸುವ ಬಗ್ಗೆ ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳು ಮರ ಬೆಳೆಸಿ, ಪರಿಸರ ಉಳಿಸಿ, ಸ್ವಚ್ಛ ಪರಿಸರ ನಮ್ಮ ಹಕ್ಕು ಎಂಬ ಘೋಷಗಳನ್ನು ಕೂಗಿ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ಈ ಸಂದರ್ಭ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಕಡಂಗ ಪ್ರಾಥಮಿಕ ಶಾಲೆ
ಕಡಂಗ: ಕಡಂಗದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ೫೦ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೇರಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು. ಈ ಸಂದರ್ಭದಲ್ಲಿ ಮರಗಳನ್ನು ಬೆಳೆಸುವ ಹಾಗೂ ಪ್ರಕೃತಿಯನ್ನು ಕಾಪಾಡುವ ಜವಾಬ್ದಾರಿಯ ಬಗ್ಗೆ ಪ್ರತಿಜ್ಞೆ ಸ್ವೀಕರಿಸಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.
ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ ಹೆಚ್.ಎ., ಶಿಕ್ಷಕರಾದ ಶೋಭಾ, ವತ್ಸಲ, ಬಬಿತ ಹಾಗೂ ಸೈಬುನ್ನಿಸ ಹಾಜರಿದ್ದರು.
ವಾಲ್ನೂರು ಪ್ರಾಥಮಿಕ ಶಾಲೆ
ಸಿದ್ದಾಪುರ: ವಾಲ್ನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಂಜರಾಯಪಟ್ಟಣ ಪ್ರಾಥಮಿಕ ಆರೋಗ್ಯ, ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ, ಅಂಚೆ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಡಿಆರ್‌ಎಫ್‌ಓ ಸಚಿನ ನಿಂಬಾಳ್ಕರ್, ಪಿಡಿಓ ಮೇದಪ್ಪ, ಬೀಟ್ ಫಾರೆಸ್ಟರ್ ನಾಗರಾಜ್ ರಡರಟ್ಟಿ, ಆರ್‌ಆರ್‌ಟಿ ಸಿಬ್ಬಂದಿಗಳಾದ ತಿಲಕ್, ಸಾಗರ, ದೀಕ್ಷಿತ್, ಸತೀಶ್, ಮಣಿ, ಜಗದೀಶ್, ವಾಹನ ಚಾಲಕ ವಚನ್ ಇದ್ದರು.
ಶ್ರೀ ಶನೇಶ್ಚರ ಭಕ್ತಜನ ಮಂಡಳಿ
ವೀರಾಜಪೇಟೆ: ವೀರಾಜಪೇಟೆ ನಗರದ ಮಲೆತಿರಿಕೆ ಬೆಟ್ಟದ ಶ್ರೀ ಶನೇಶ್ಚರ ಭಕ್ತಜನ ಮಂಡಳಿ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ವೀರಾಜಪೇಟೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಚರಿಸಲಾಯಿತು. ಚಿತ್ರಕಲಾ ಶಿಕ್ಷಕ ಬಿ.ಆರ್. ಸತೀಶ್ ಪರಿಸರದ ಚಿತ್ರ ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಸ್ ನಿಲ್ದಾಣದ ಸಮೀಪದ ಆವರಣದಲ್ಲಿ ಸಸಿ ನೆಟ್ಟು ಬಳಿಕ ಮಾತನಾಡಿದ ಪಕ್ಷಿ ತಜ್ಞರೂ ಹಾಗೂ ವೈದ್ಯರಾದ ಡಾ. ನರಸಿಂಹನ್ ಮಾತನಾಡಿ, ಪರಿಸರವನ್ನು ಉಳಿಸುವ ಕಾರ್ಯ ಪ್ರತಿ ವ್ಯಕ್ತಿಯು ಮಾಡಬೇಕು. ಪ್ರಾಣಿ - ಪಕ್ಷಿಗಳು ಯಾವುದೇ ಸ್ವಾರ್ಥವಿಲ್ಲದೆ ಹಣ್ಣು ತಿಂದು ಅದರ ಬೀಜಗಳನ್ನು ಭೂಮಿಯ ಮೇಲೆ ಹಾಕಿ ಸಾವಿರಾರು ಗಿಡಗಳನ್ನು ಬೆಳೆಸುತ್ತವೆ. ಪರಿಸರ ಸಂರಕ್ಷಣೆ ನಮ್ಮ ಮುಖ್ಯ ಉದ್ದೇಶವಾಗಬೇಕು ಎಂದು ತಿಳಿಸಿದರು.
ಚಿತ್ರ ಕಲಾವಿದ ಬಿ.ಆರ್. ಸತೀಶ್ ಮಾತನಾಡಿ, ಹಲವಾರು ವರ್ಷಗಳಿಂದ ಶ್ರೀ ಶನೀಶ್ವರ ಭಕ್ತಜನ ಮಂಡಳಿ ಪರಿಸರ ದಿನ ಆಚರಿಸುತ್ತ ಬಂದಿದ್ದು ಕೊಡಗಿನಲ್ಲಿ ಸರಕಾರಿ ಶಾಲಾ - ಕಾಲೇಜುಗಳಲ್ಲಿ ಸಸಿಗಳನ್ನು ನೆಡುತ್ತ ಬಂದಿದೆ. ಪರಿಸರವನ್ನು ಉಳಿಸುವುದು ನಮ್ಮ ಮುಖ್ಯ ಉದ್ದೇಶವಾಗಬೇಕು ಎಂದು ತಿಳಿಸಿದರು.
ಈ ಸಂದರ್ಭ ವೀರಾಜಪೇಟೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಂಚಾರಿ ನಿಯಂತ್ರಕ ವಿ.ಕೆ ಚಂದ್ರಶೇಖರ್, ಟಿ.ಪಿ ಚಂದ್ರ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಕಾರ್ ಚಾಲಕರ ಸಂಘದ ಸದಸ್ಯರಾದ ಹೆಚ್.ಪಿ. ರಾಮ್, ಮುಜಾಯಿದ್, ಶ್ರೀ ಶನೇಶ್ಚರ ಭಕ್ತಜನ ಮಂಡಳಿಯ ಅಧ್ಯಕ್ಷ ಯುವರಾಜ್ ಕೃಷ್ಣ, ಸದಸ್ಯರಾದ ಮಿಥುನ್, ಪ್ರತಾಪ್, ಸುಮಿತ್ರಾ ಸತೀಶ್, ಅಕ್ಕಮಹಾದೇವಿ, ದಿನೇಶ್ ನಂಬಿಯಾರ್ ಹಾಜರಿದ್ದರು.