ಗೋಣಿಕೊಪ್ಪ ವರದಿ, ಜೂ. ೧೦: ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಜನ್ ಹಾಕಿ ಟೂರ್ನಿಯಲ್ಲಿ ಕೈಗ್ ಜೂಮರ್ಸ್, ಅಂಜಿಗೇರಿ ನಾಡ್, ಕಿರ್ಗೂರ್, ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ತಂಡಗಳು ಗೆಲುವು ದಾಖಲಿಸಿದವು.

ಅಂಜಿಗೇರಿ ನಾಡ್ ತಂಡಕ್ಕೆ ಕುತ್ತ್ನಾಡ್ ಸ್ಟೆçöÊಕರ್ಸ್ ವಿರುದ್ದ ೩-೦ ಗೋಲುಗಳ ಗೆಲುವು ಲಭಿಸಿತು. ಅಂಜಿಗೇರಿ ಪರ ಸುಪ್ರಿತ್, ಪೊನ್ನಣ್ಣ, ಆದರ್ಶ್ ಗೋಲು ಹೊಡೆದರು. ಕೈಗ್ ಜೂಮರ್ಸ್ ತಂಡವು ನಾಪೋಕ್ಲ್ ವೆಟರರ್ನ್ ವಿರುದ್ಧ ೯-೦ ಗೋಲುಗಳ ಗೆಲುವು ಪಡೆದುಕೊಂಡಿತು. ಕೈಗ್ ಪರ ಪೂವಯ್ಯ, ಡಿವಿನ್, ಅಯ್ಯಪ್ಪ, ನಾಚಪ್ಪ ತಲಾ ೨ ಗೋಲು ಹೊಡೆದರು.

ಪ್ರೀತಂ ೧ ಗೋಲು ಬಾರಿಸಿದರು. ಕಿರ್ಗೂರ್ ತಂಡ ತ್ರಿವೇಣಿ ಶಾಲೆ ತಂಡವನ್ನು ೮-೦ ಗೋಲುಗಳಿಂದ ಮಣಿಸಿತು. ಕಿರ್ಗೂರ್ ಆಟಗಾರ ಸೋಹನ್ ೬ ಗೋಲು ಬಾರಿಸಿ ಮಿಂಚಿದರು. ದೇವಯ್ಯ ಹಾಗೂ ಅಚ್ಚಯ್ಯ ತಲಾ ಒಂದೊAದು ಗೋಲು ಬಾರಿಸಿದರು. ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ಎ ತಂಡವು ಪನ್ನಂಗಾಲ ಪ್ಯಾಂಥರ್ಸ್ ವಿರುದ್ಧ ೨-೦ ಗೋಲುಗಳ ಜಯ ಪಡೆದುಕೊಂಡಿತು. ಪೊನ್ನಂಪೇಟೆ ಆಟಗಾರ ಆತ್ಮಿಕ್ ಹಾಗೂ ದೇವಯ್ಯ ತಲಾ ಒಂದೊAದು ಗೋಲು ಹೊಡೆದರು.