ಚೆಯ್ಯಂಡಾಣೆ, ಜೂ. ೧೦: ಸರಕಾರದಿಂದ ಜಾರಿಗೊಳಿಸಿರುವ ಕನಿಷ್ಟ ವೇತನ ಶೇ. ೬೦ ರಷ್ಟನ್ನು ಜೂನ್ ೧ ರಿಂದ ಅನುಷ್ಠಾನಗೊಳಿಸಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ಡಿಹೆಚ್‌ಓ ಡಾ. ಸತೀಶ್ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಅಜೀಶ್ ಮಾತನಾಡಿ, ಕನಿಷ್ಟ ವೇತನ ಸಿಗದೆ ಗುತ್ತಿಗೆ ನೌಕರರು ತೊಂದರೆ ಅನುಭವಿಸುವಂತಾಗಿದೆ. ಈಗ ಜಾರಿಗೊಳಿಸುವ ಯೋಜನೆಯನ್ನು ಜೂನ್ ತಿಂಗಳಿನಿAದಲೇ ಅನುಷ್ಠಾನಗೊಳಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಆರ್ ಸಿಹೆಚ್‌ಓ ಅಧಿಕಾರಿ ಡಾ. ಮಧುಸೂದನ್, ಎಫ್‌ಡಬ್ಲ್ಯೂಓ ಅಧಿಕಾರಿ ಡಾ. ಆನಂದ, ಹೊರಗುತ್ತಿಗೆ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಮಂಜುಳ, ಪದಾಧಿಕಾರಿಗಳಾದ ದೀಪ್ತಿ, ರತ್ನಕುಮಾರಿ, ಸಂಜು, ಕುಮಾರಿ ಮತ್ತಿತರರು ಇದ್ದರು.