ಕೂಡಿಗೆ, ಜೂ. ೧೦: ವಾಲ್ನೂರು ಸಚಿನ್ ಫ್ರೆಂಡ್ಸ್ ವತಿಯಿಂದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಪಟ್ಟಣ ಗ್ರಾಮದಲ್ಲಿ ನಡೆದ ಪಂಚಾಯಿತಿ ಮಟ್ಟದ ಮಾನ್ಸೂನ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಕ್ತಿ ಫ್ರೆಂಡ್ಸ್ ನಂಜರಾಯಪಟ್ಟಣ ಪ್ರಥಮ ಸ್ಥಾನ ಪಡೆದುಕೊಂಡಿತು. ಸ್ಕೆöÊ ಕ್ರಿಕೆಟರ್ಸ್ ನೆಲ್ಲಿಹುದಿಕೇರಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ವಿಸಿಟರ್ಸ್ ಗುಡ್ಡೆಹೊಸೂರು ತೃತೀಯ ಹಾಗೂ ಚತುರ್ಥ ಪ್ರಶಸ್ತಿಯನ್ನು ಸಿಸಿಎಂ ಮಾರುತಿ ನಗರ ಹೊಸಕೋಟೆ ತಂಡ ತನ್ನದಾಗಿಸಿಕೊಂಡವು.
ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಕ್ಷಿತ್ ಮಾವಜಿ ಪಾಲ್ಗೊಂಡು ಮಾತನಾಡಿದರು.
ಹೊಸಪಟ್ಟಣ ಸಾರ್ವಜನಿಕ ಮೈದಾನದಲ್ಲಿ ರೂ. ೧ ಲಕ್ಷ ಪಂಚಾಯಿತಿ ಅನುದಾನದಲ್ಲಿ ಕ್ರಿಕೆಟ್ ಪಿಚ್ ನಿರ್ಮಿಸಲು ಸಹಕಾರ ನೀಡಿದ ರಕ್ಷಿತ್ ಅವರನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಪ್ರಮುಖರಾದ ಅಪ್ಪು ಸೆಬಾಸ್ಟಿನ್, ವಿಜೇಶ್, ರಾಜೇಶ್ ತಂಟೆಪಾಡಿ, ಅಜಯ್ ಮಾವಜಿ, ಯೋಗೇಶ್, ಮ್ಯಾಥ್ಯು ಕೊಚ್ಚೆ, ಶ್ರೀಜೇಶ್ ಕುಟ್ಟ, ಹ್ಯಾರೀಸ್, ಶರತ್ ಪಟ್ಲಮಂಟಿ, ಕಿರಣ್ ಪುಟ್ಟ, ಮಿಥುನ್, ಶರತ್ ಕಳಂಜನ, ಉದಯ್ ಉಪಸ್ಥಿತರಿದ್ದರು