ಸಿದ್ದಾಪುರ, ಜೂ. ೧೦: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪ನೇ ವಾರ್ಡಿಗೆ ಸೇರಿರುವ ಶಾಲೆಯ ಮೇಲ್ಭಾಗದ ರಸ್ತೆ ಬದಿಯ ನೀರಿನ ಟ್ಯಾಂಕ್ ಬಳಿ ಚೀಲದಲ್ಲಿ ತ್ಯಾಜ್ಯಗಳನ್ನು ತುಂಬಿಸಿ ಎಸೆದಿರುವುದು ಕಂಡುಬAದಿದೆ.
ರಸ್ತೆ ಬದಿಯಿಂದ ಸಾರ್ವಜನಿಕ ರಸ್ತೆಯಿಂದ ದುರ್ನಾತ ಬೀರುತ್ತಿದ್ದು ಸ್ಥಳೀಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಯಾವುದೇ ದೂರುಗಳು ಬಂದಿರುವುದಿಲ್ಲ ಎಂದು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.