ಕಡಂಗ, ಜೂ. ೧೦: ಮರಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಮಡಿಕೇರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ ನೀಡಿದರು.

ಶಾಲೆಯ ಭೌತಿಕ ಸೌಲಭ್ಯಗಳು ಉತ್ತಮವಾಗಿದ್ದರು ಸಹ ದಾಖಲಾತಿ ಕುಂಠಿತಗೊAಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷರು, ಗ್ರಾಮಸ್ಥರು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪೋಷಕರುಗಳ ಸಭೆ ಕರೆದು ದಾಖಲಾತಿ ಹೆಚ್ಚಿಸುವುದರ ಬಗ್ಗೆ ಚರ್ಚಿಸಲಾಯಿತು. ಹಾಗೆಯೇ ಶಾಲೆಯ ಸಭಾಂಗಣಕ್ಕೆ ಇಂಟರ್‌ಲಾಕ್ ಅಳವಡಿಸಲು ಊರಿನ ದಾನಿಗಳ ಸಹಾಯವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.ಈ ಸಂದರ್ಭದಲ್ಲಿ ಪ್ರಭಾರ ಮುಖ್ಯಶಿಕ್ಷಕರಾದ ಅಶ್ರಫ್ ಕೆ.ಎಂ, ಸಹಶಿಕ್ಷಕರುಗಳಾದ ದನಿತ ಕೆ.ಆರ್, ಗಾನವಿ ಪಿ.ಎಲ್ ಅವರುಗಳು ಹಾಜರಿದ್ದರು.