ಮಡಿಕೇರಿ, ಜೂ.೯: ಕರ್ನಾಟಕ ರಾಜ್ಯದ ಶ್ರೇಯಾಂಕಿತ ಆಟಗಾರರಾದ ಕೊಡಗಿನ ವಿಶಾಲ್ ಉತ್ತಪ್ಪ ಹಾಗೂ ಮೈಸೂರಿನ ಹನ್ಸಿಕಾ ರಾಕೇಶ್ ಹೈದರಾಬಾದಿನ ಕೊಟಕ್ ಫುಲೇಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತೆಲಂಗಾಣ ಬ್ಯಾಡ್ಮಿಂಟನ್ ಅಸೋಸಿಯೇಷನ್ ಹಾಗೂ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಆಶ್ರಯದಲ್ಲಿ ನಡೆದ ಮಿಶ್ರ ಡಬಲ್ಸ್ನಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ.
ಮೇ.೨೯ ರಿಂದ ಜೂನ್ ೬ರವರೆಗೆ ನಡೆದ ರಾಷ್ಟçಮಟ್ಟದ ೧೫ ವರ್ಷದೊಳಗಿನ ಮಿಶ್ರಡಬಲ್ಸ್ ನಲ್ಲಿ ಬೆಳ್ಳಿಯ ಪದಕದ ಸಾಧನೆ ಗೈದಿದ್ದಾರೆ.
ಭಾರತದ ಆರನೇ ಶ್ರೇಯಾಂಕಿತ ಆಟಗಾರರಾದ ಇವರು ಟೂರ್ನಿಯಲ್ಲಿ ಸಿಂಗಲ್ಸ್ನಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಇªರು ಇಬ್ಬರೂ ಹೈದರಾಬಾದಿನ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ವಿಶಾಲ್ ಅವರು ಮಡಿಕೇರಿಯ ಬೊಪ್ಪಂಡ ಭೀಮಯ್ಯ ಹಾಗೂ ಕುಸುಮ (ತಾಮನೆ ಕಂಬೀರAಡ) ದಂಪತಿಯ ಪುತ್ರ.