ಅಪ್ಪ ಎಂಬ ಪದವೇ ಒಂದು ಶಕ್ತಿ., ಅಪ್ಪ ಎಂದರೆ ದೇವರು., ದೇವರಿಗೆ ಸಮಾನ., ಮಕ್ಕಳ ಜೀವನದಲ್ಲಿ ಅಪ್ಪನ ಪಾತ್ರ ಮಹತ್ವದ್ದಾಗಿರುತ್ತದೆ.
ತನ್ನ ಎಲ್ಲ ಸಂಕಷ್ಟಗಳನ್ನು ಸಹಿಸಿಕೊಂಡು ಕುಟುಂಬಕ್ಕಾಗಿ ಸಂಸಾರದ ಹೊರೆಯನ್ನು ಹೊತ್ತುಕೊಂಡು ಪಾಲನೆ, ಪೋಷಣೆ ಮಾಡುವವನೇ ಅಪ್ಪ., ಕರುಣಾಮಯಿಯಾಗಿರುವ ಅಪ್ಪನ ಪ್ರೀತಿಯನ್ನು ಸ್ಮರಿಸಿಕೊಳ್ಳುವ ದಿವಸ ಬಂದಿದೆ. ಇದೇ ಜೂನ್ ೨೧ರಂದು ವಿಶ್ವದಾದ್ಯಂತ ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಈ ಒಂದು ಸಂತೋಷದ ದಿನದಲ್ಲಿ ನೀವುಗಳೂ ಭಾಗಿಯಾಗಬಹುದು. ನೀವು ನಿಮ್ಮ ಅಪ್ಪನೊಂದಿಗೆ ಒಂದು ಸೆಲ್ಫಿ ತೆಗೆದು ಅಪ್ಪನ ಬಗ್ಗೆ ಹತ್ತು ಪದಗಳಲ್ಲಿ ಪ್ರೀತಿಯ ನುಡಿಗಳನ್ನು ಬರೆದು ನಮಗೆ ಕಳುಹಿಸಿಕೊಡಿ.
ನಿಮ್ಮ ಚಿತ್ರ ಹಾಗೂ ಬರಹಗಳನ್ನು ಜೂನ್ ೧೮ರ ಒಳಗಡೆ ಕಳುಹಿಸಿಕೊಡಬೇಕು. ಬರಹಗಳು ಸ್ವಂತದ್ದಾಗಿರಬೇಕು. ಅಂತರ್ಜಾಲದಿAದ ನಕಲು ಮಾಡಬಾರದು. ಬರಹ ಹಾಗೂ ಚಿತ್ರಗಳನ್ನು ೭೪೮೩೫೬೩೭೫೬ ಈ ಸಂಖ್ಯೆಗೆ ಕಳುಹಿಸಿಕೊಡಿ.
ನಿಮ್ಮ ಪ್ರೀತಿಯ
ಜಿ.ಚಿದ್ವಿಲಾಸ್
ಸಂಪಾದಕ