ಕೂಡಿಗೆ, ಜೂ.೯: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಪಶು ಚಿಕಿತ್ಸಾಲಯ ಕೇಂದ್ರದ ಗೋಸದನ ಜಾಗವು ಸೋಮವಾರಪೇಟೆ ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ಹೆಸರಿಗೆ ನೋಂದಣಿ ಆಗಿರುವ ವಿಷಯಕ್ಕೆ ಸಂಬAಧಿಸಿದAತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಈ ಹಿಂದೆ ಕುಶಾಲನಗರ ಪೊಲೀಸ್ ವಿಶ್ರಾಂತಿ ಗೃಹದಲ್ಲಿ ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಶಾಸಕ ಡಾ. ಮಂತರ್ ಗೌಡ ಅವರ ಸೂಚನೆಯಂತೆ ಜಿಲ್ಲಾ ಮುಖ್ಯ ಅರಣ್ಯಾಧಿಕಾರಿ ಮತ್ತು ಪಶುಪಾಲನಾ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆಯನ್ನು ಕರೆಯಲು ಸೂಚನೆ ನೀಡಲಾಗಿತ್ತು, ಆದರೆ ಒಂದು ವರ್ಷ ಕಳೆದರೂ ಇನ್ನೂ ಈ ಸಭೆ ನಡೆಯದಿರುವುದು ಗ್ರಾಮಸ್ಥರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಗೋ ಸದನ ಜಾಗದಲ್ಲಿ ತಾಲೂಕು ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಸಸಿ ಮಡಿಗಳ ಸಿದ್ಧತೆ ಕಾರ್ಯ ನಡೆಯುತ್ತಿದೆ.
ಈ ಜಾಗದಲ್ಲಿ ಪಶು ಚಿಕಿತ್ಸಾಲಯಕ್ಕೆ ಸಂಬAಧಿಸಿದAತೆ ನೂತನ ಕಟ್ಟಡÀ ನಿರ್ಮಾಣ ಕಾರ್ಯದ ಕ್ರಿಯಾ ಯೋಜನೆ, ಕಟ್ಟಡ ನಿರ್ಮಾಣ, ಪಶು ಚಿಕಿತ್ಸಾಲಯವನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಪಶುಪಾಲನಾ ಇಲಾಖೆಯ ಮುಖೇನ ಮಂಜೂರು ಆದ ಹಣ ಮಾತ್ರ ಇಲಾಖೆಯ ಖಾತೆಯಲ್ಲಿಯೇ ಉಳಿದಿದೆ.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೬ ಹಾಲು ಉತ್ಪಾದಕರ ಸಹಕಾರ ಸಂಘಗಳು ಇದ್ದು, ಅಲ್ಲಿ ಹಾಲನ್ನು ಹಾಕಲು ಉತ್ತಮ ಗುಣಮಟ್ಟದ ಹಸುಗಳನ್ನು ಸಾಕುವ ಅಗತ್ಯವಿದೆ. ಆದರೆ ಹಸುಗಳಿಗೆ ಬೇಕಾಗುವ ಚಿಕಿತ್ಸೆಯ ವ್ಯವಸ್ಥೆಗೆ ಪಶು ಆಸ್ಪತ್ರೆಯೇ ಇಲ್ಲಾದಾಗಿದೆ.
ಪಶುಪಾಲನಾ ಇಲಾಖೆಯ ಪಶು ಚಿಕಿತ್ಸಾಲಯವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಅಧಿಕಾರಿಗಳು ಹೇಳುವುದರಲ್ಲಿ ತೊಡಗಿದ್ದಾರೆ ಹೊರತು ಜಾಗದ ಸಮಸ್ಯೆ ಬಗೆಹರಿಯಲೇ ಇಲ್ಲ.
ಸಂಬAಧಿಸಿದ ಇಲಾಖೆಯವರು ಶಾಸಕರ ಸೂಚನೆಯಂತೆ ಮತ್ತು ಹುದುಗೂರು ವ್ಯಾಪ್ತಿಯ ಹಾಲು ಉತ್ಪಾದಕರ ಸಂಘಗಳ ರೈತರ ಹಸುಗಳ ಚಿಕಿತ್ಸೆಗೆ ಪ್ರಮುಖ ಆದ್ಯತೆಯನ್ನು ನೀಡುವ ಉದ್ದೇಶದಿಂದ ತುರ್ತಾಗಿ ಕ್ರಮ ಕೈಗೊಳ್ಳಲು ಹುದುಗೂರು ವ್ಯಾಪ್ತಿಯ ಜನಜಾಗೃತಿ ರೈತರ ಸಮಿತಿ, ಕಾಳಿಕಾಂಭ ಯುವಕರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ