ವೀರಾಜಪೇಟೆ, ಜೂ. ೯: ನಗರದ ಸಂತ ಅನ್ನಮ್ಮ ದೇವಾಲಯಕ್ಕೆ ಒಳಪಡುವ ಸ್ನೇಹಿತರ ಸಂಘದ ಆಡಳಿತ ಮಂಡಳಿ ಮಹಾಸಭೆ ನಡೆದು ಡೆನಿಯಲ್ ಸಲ್ಡಾನ ಅವರು ಅಧ್ಯಕ್ಷರಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಈ.ಪಿ. ನೆಲ್ಸನ್ ಅವರು ಆಯ್ಕೆಗೊಂಡಿದ್ದಾರೆ.

ಸAತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘ ವೀರಾಜಪೇಟೆ ಮಹಾಸಭೆಯು ಸಂತ ಅನ್ನಮ್ಮ ದೇವಾಲಯದ ಆವರಣದಲ್ಲಿರುವ ದ್ವೀಶತಮಾನ ಭವನದ ಸಭಾಂಗಣದಲ್ಲಿ ನಡೆಯಿತು. ಡೆನಿಯಲ್ ಸಲ್ಡಾನ ಅವರು ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘವು ೨೦೨೪-೨೫ನೇ ಸಾಲಿನಲ್ಲಿ ನಡೆಸಿದ ವಾರ್ಷಿಕ ವರದಿಯನ್ನು ಓದಿದರು.

ನಂತರ ಮಾತನಾಡಿ, ಸಂಘವು ಸುಸೂತ್ರವಾಗಿ ೧೪ ವಸಂತಗಳನ್ನು ಕಂಡು ೧೫ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಸಂಘವು ದೇವಾಲಯದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಸಕ್ರಿಯವಾಗಿ ತೊಡಗಿಸಿಕೊಂಡು ಸೇವಾ ಕಾರ್ಯವನ್ನು ಮಾಡುತ್ತಾ ಬಂದಿದೆ.

ಇದಲ್ಲದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ.

ಸAಘವು ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳಲ್ಲಿ ಸದಸ್ಯರು ಪದಾಧಿಕಾರಿಗಳು ಹಾಗೂ ಹಿರಿಯ ಸದಸ್ಯರುಗಳು ಭಾಗಿಗಳಾಗಿ ತಮ್ಮ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಮುಂದೆಯು ಸಹಕಾರ ನೀಡುವಂತೆ ಸಭೆಯಲ್ಲಿ ಮನವಿ ಮಾಡಿದರು. ಸಭೆ ಮುಗಿದ ಬಳಿಕ ಸಂಘದ ಚುನಾವಣೆಯು ನಡೆಯಿತು.

ಸಂಘದ ಅಧ್ಯಕ್ಷರಾಗಿ ಡೆನಿಯಲ್ ಸಲ್ಡಾನ ಪುನರಾಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿಯಾಗಿ ಈ.ಪಿ. ನೆಲ್ಸನ್, ಉಪಾಧ್ಯ್ಯಕ್ಷರಾಗಿ ರಿಯಾನ್ ಲೋಬೊ, ಖಜಾಂಚಿಗಳಾಗಿ ಸ್ಟಾನಿ ಸಲ್ಡಾನ, ಸಹ ಕಾರ್ಯದರ್ಶಿ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಅರುಣ್ ಮ್ಯಾಥ್ಯು, ಕ್ರೀಡಾ ಕಾರ್ಯದರ್ಶಿಯಾಗಿ ಬಿಲ್ಟಾನ್ ವಾಜ್, ಪದಾಧಿಕಾರಿಗಳಾಗಿ ಐದು ಮಂದಿ ಗೌರವ ಸದಸ್ಯರಾಗಿ ಆಯ್ಕೆಗೊಂಡರು.

ಸಭೆಯಲ್ಲಿ ಸಂಘದ ಸದಸ್ಯರು, ಹಿರಿಯ ಸದಸ್ಯರಾದ ಮಾರ್ವಿನ್ ಲೋಬೊ, ಅನ್ಸಿ, ಜೂಡಿ ವಾಜ್, ಅಗಸ್ಟೀನ್ ಕ್ಷೆವಿಯರ್, ಜೋಕಿಂ ರಾಡ್ರಿಗಸ್ಸ್ ಹಾಗೂ ಬ್ಲೇಜಿ ಸಿಕ್ವೇರಾ ಹಾಜರಿದ್ದರು.