ಶನಿವಾರಸಂತೆ, ಜೂ.೯: ಸಮೀಪದ ಕೊಡ್ಲಿಪೇಟೆ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಭಾಷಾ ಶಿಕ್ಷಕ ಕೆ.ಎನ್ ಕಿರಣ್ ಕುಮಾರ್ ಕಲಾರತ್ನ ಹಾಸನ ಜಿಲ್ಲಾ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹಾಸನದ ಹಾಸನಾಂಬ ಕಲಾ ಮಂದಿರದಲ್ಲಿ ಮೈತ್ರಿ ಎಜುಕೇಶನ್ ಸೊಸೈಟಿ ಹಾಗೂ ಅಕ್ಷರಶ್ರೀ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನಡೆದ ವಾರ್ಷಿಕೋತ್ಸವ, ಸರ್ಕಾರಿ ಶಾಲಾ ದತ್ತು ಸ್ವೀಕಾರ ಹಾಗೂ ಸಾಧನ ಪುರಸ್ಕಾರ ಸಮಾರಂಭದಲ್ಲಿ ಶಿಕ್ಷಕ ಕಿರಣ್ ಕುಮಾರ್ಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.