ವೀರಾಜಪೇಟೆ, ಜೂ. ೯: ದರೋಡೆ ಯತ್ನ ಪ್ರಕರಣದಲ್ಲಿ ಜಿಲ್ಲೆಯ ಯುವಕ ಸೇರಿದಂತೆ ೧೩ ಮಂದಿ ಬಂಧÀನಕ್ಕೊಳಗಾದ ಘಟನೆ ಕೋಯಿಕೋಡು ಅಂತರರಾಷ್ಟಿçÃಯ ವಿಮಾನ ನಿಲ್ದಾಣ ಬಳಿ ನಡೆದಿದೆ.

ವೀರಾಜಪೇಟೆ ನಗರದ ನೆಹರು ನಗರದ ನಿವಾಸಿ ಕೇಬಲ್ ಕಾರ್ಮಿಕನಾಗಿದ್ದ ಅಭಿ ಅಲಿಯಾಸ್ ಅಭಿಲಾಷ್ (೩೧) ಸೇರಿದಂತೆ ಕಣ್ಣೂರು ಮತ್ತು ಕೋಯಿಕೋಡ್ ಜಿಲ್ಲೆಯ ೧೦ ಮಂದಿ ಮಲಪುರಂ ಜಿಲ್ಲೆಯ ಇಬ್ಬರು ಬಂಧನಕ್ಕೊಳಗಾಗಿದ್ದಾರೆ.

ಕಣ್ಣೂರು ನಿವಾಸಿ ಕೆ.ಪಿ. ಜುನೈದ್ (೨೭), ಕಾಕಯಂಗಾಡ್ ಮುಕ್ಕಕುನ್ನು ನಿವಾಸಿಗಳಾದ ವಿ. ಶರತ್ (೩೫), ಕೆ.ಕೆ. ಕನಕರಾಜ್ (೨೮), ಕೆ.ಕೆ. ಅಕ್ಷಯ್ (೨೬), ಕೆ. ಧನಿಶ್ (೨೯), ತಿಲ್ಲಂಗೇರಿ ಮೂಲದ ಟಿ. ರಂಜಿತ್ (೪೧), ಚಕ್ಕರಕಲ್ಲ್ ನಿವಾಸಿ ತಾಜುದ್ದೀನ್ (೩೨), ವಾರಂ ಮೂಲದ ಶರೊಣ್ (೨೩), ಕೂತುಪರಂಬು ನಿವಾಸಿ ಕೆ. ಸ್ವರಲಾಲ್ (೩೮), ತಿರೂರ್ ಪುದಿಯಕಡಪುರಂ ನಿವಾಸಿ ರಿಯಾಜ್ (೨೯) ಬೇಪೂರ್ ನಿವಾಸಿ ಪಿ. ಸುಜೀತ್ (೨೬) ಮತ್ತು ಇರ್ಫಾನ್ (೨೬) ಬಂಧಿತ ಇತರ ಆರೋಪಿಗಳಾಗಿದ್ದಾರೆ.

ಇವರುಗಳು ಕೋಯಿ ಕೊಡ್ ಕರಿಪುರಂ ಅಂತರ ರಾಷ್ಷಿçÃಯ ವಿಮಾನ ನಿಲ್ದಾಣ ದಲ್ಲಿ ಪ್ರಯಾಣಿಕರಿಂದ ಚಿನ್ನ ದರೋಡೆ ಮಾಡುವ ಸಂಚು ರೂಪಿಸಿದ್ದ ಸಂದರ್ಭ ವಿಮಾನ ನಿಲ್ದಾಣದ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತ ಯುವಕರಿಂದ ಕೃತ್ಯಕ್ಕೆ ಬಳಸಿದ್ದ ಮೂರು ಕಾರುಗಳು, ಎರಡು ದ್ವಿಚಕ್ರ ವಾಹನಗಳು ಸೇರಿದಂತೆ ಮೊಬೈಲುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಿಶೋರ್‌ಕುಮಾರ್ ಶೆಟ್ಟಿ