ಬೆAಗಳೂರು, ಜೂ.೯: ಕೊಡಗಿನ ಕುಟ್ಟ ಹೋಂಸ್ಟೇಯಲ್ಲಿ ೩೩ ವರ್ಷದ ಅಮೆರಿಕ ಪ್ರವಾಸಿ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖಾ ದಾಖಲೆಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಉಚ್ಛ ನ್ಯಾಯಾಲಯ ಆದೇಶಿಸಿದೆ ಹಾಗೂ ಪ್ರಕರಣದ ವಿಚಾರಣೆಗ ಸಂಬAಧಿಸಿದAತೆ ಮಧ್ಯಂತರ ತಡೆಯಾಜ್ಜೆ ನೀಡಲು ನಿರಾಕರಿಸಿದೆ.
೨೫ ವರ್ಷದ ಹೋಂಸ್ಟೇ ಕೆಲಸಗಾರ ಏಪ್ರಿಲ್ ೧೨ ರಂದು ಅಮೇರಿಕನ್ ಪ್ರವಾಸಿಗೆ ನೀಡಿದ ಪಾನೀಯದಲ್ಲಿ ಮದ್ಯ ಬೆರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಆರೋಪವನ್ನು ಈ ಪ್ರಕರಣ ಒಳಗೊಂಡಿದೆ.
ಹೋAಸ್ಟೇ ಮಾಲೀಕ ಪಾಲೆಕಂಡ ಪೊನ್ನಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿತ್ತು, ಅವರು ತಮ್ಮ ಹೋಂಸ್ಟೇಯಲ್ಲಿ ನಡೆದ ಅತ್ಯಾಚಾರದ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡದ ಆರೋಪದ ಮೇಲೆ ಈ ಹಿಂದೆ ಬಂಧಿಸಲ್ಪಟ್ಟಿದ್ದರು. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ವಿರುದ್ಧ ದಾಖಲಿಸಿರುವ ಎಫ್ಐಆರ್ ಮತ್ತು ಅವರ ಬಂಧನವನ್ನು ಪ್ರಶ್ನಿಸಿ ಪೊನ್ನಪ್ಪ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
೧.ತಮ್ಮ ವಿರುದ್ಧ ದಾಖಲಾದ ಎಫ್.ಐ.ಆರ್ ರದ್ದುಪಡಿಸುವಂತೆ, ೨.ತಾವು ಏಪ್ರಿಲ್ ೧೯ ರಿಂದ ಮೇ.೨ ರವರೆಗೆ ಬಂಧನದಲ್ಲಿದ್ದು, ಇದು ಕಾನೂನು ಬಾಹಿರ ಎಂಬುದಾಗಿ, ೩.ತಮ್ಮ ಘನತೆಗಾದ ಧಕ್ಕೆ ಹಾಗೂ ವ್ಯಾಪಾರಕ್ಕೆ ಸಂಭವಿಸಿದ ನಷ್ಟಕ್ಕೆ ಪರಿಹಾರವಾಗಿ ರಾಜ್ಯ ಸರಕಾರವು ರೂ.೧೫ ಲಕ್ಷ ಪರಿಹಾರವಾಗಿ ನೀಡುವಂತೆ, ೪.ಪ್ರಕರಣದ ತನಿಖೆಯನ್ನು ಐ.ಜಿ.ಪಿ ಮಟ್ಟದ ಅಧಿಕಾರಿ ನಡೆಸುವಂತೆ ಹಾಗೂ ೫.ಸರಕಾರದ ಅಪರಾಧ ಹಾಗೂ ಅಪರಾಧಿಗಳ ಟ್ರಾö್ಯಂಕಿAಗ್ ನೆಟ್ವರ್ಕ್ನಿಂದ ತಮ್ಮೆಲ್ಲಾ ಮಾಹಿತಿಯನ್ನು ತೆಗೆದು ಹಾಕುವಂತೆ ಉಚ್ಚ ನ್ಯಾಯಾಲಯಕ್ಕೆ ಪೊನ್ನಪ್ಪ ಅವರು ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಅರ್ಜಿ ಪರಿಶೀಲಿಸಿ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದ್ದು, ತನಿಖಾ ದಾಖಲೆಗಳನ್ನು ನೀಡುವಂತೆ ರಾಜ್ಯ ಸರಕಾರಕ್ಕೆ ಆದೇಶಿಸಿದ್ದಾರೆ. ಭಾರತದಲ್ಲಿ ವಿದೇಶಿ ಪ್ರಜೆಯೊಬ್ಬರು ಅತ್ಯಾಚಾರಕ್ಕೊಳಗಾಗಿರುವುದು ಕಳವಳಕಾರಿ ವಿಷಯವಾಗಿದೆ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ನುಡಿದರು.
ನ್ಯಾಯಾಲಯವು ರಾಜ್ಯದ ಹೆಚ್ಚುವರಿ ವಿಶೇಷ ಸಾರ್ವಜನಿಕ ಅಭಿಯೋಜಕರಿಗೆ ಸಂಪೂರ್ಣ ತನಿಖಾ ದಾಖಲೆಗಳನ್ನು ಹಾಜರುಪಡಿಸುವಂತೆ ನಿರ್ದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ತಾ.೧೦ರ ಬುಧವಾರಕ್ಕೆ(ಇಂದು) ಮುಂದೂಡಿದೆ.
ಹÉÆÃಂಸ್ಟೇ ಕೆಲಸಗಾರನನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾನೆ. ಅವನ ಜಾಮೀನು ಅರ್ಜಿಯನ್ನು ಇತ್ತೀಚೆಗೆ ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ.
ಪೊನ್ನಪ್ಪ ಪರ ಹಾಜರಾಗಿದ್ದ ಅವರ ವಕೀಲ ಅಂಗದ್ ಕಾಮತ್ ಅವರು ತಮ್ಮ ಕಕ್ಷಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ವಾದಿಸಿದರು.
ಈ ಪ್ರಕರಣ ದಾಖಲಾದ ನಂತರ ಪೊನ್ನಪ್ಪ ಅವರ ಹೋಂ ಸ್ಟೇ ವ್ಯವಹಾರದ ಮೇಲೆ ಪರಿಣಾಮ ಬೀರಿದ್ದು ಅವರ ಘನತೆ ಗೌರವಕ್ಕೂ ಕುಂದು ಉಂಟಾಗಿರುವುದರಿAದ ಪೊನ್ನಪ್ಪ ಅವರು ಸೂಕ್ತ ಪರಿಹಾರವನ್ನು ಕೋರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಪೊನ್ನಪ್ಪ ತಮ್ಮ ವಾದಕ್ಕೆ ಪೂರಕವಾಗಿ ಪೊಲೀಸರಿಗೆ ಒಪ್ಪಿಸಿರುವ ಹೋಂ ಸ್ಟೇ ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊ ರೆಕಾರ್ಡ್ಗ್ಗಳನ್ನು ಪರಿಶೀಲಿಸುವಂತೆ ಮನವಿ ಮಾಡಿದರು. ಈಗ ಬಂಧನದಲ್ಲಿರುವ ಅತ್ಯಾಚಾರ ಆರೋಪಿಯ ಮೇಲಿರುವ ಆರೋಪಗಳನ್ನು ತನಿಖಾಧಿಕಾರಿಗಳು ಸ್ವತಃ ತನಿಖೆ ಮಾಡುತ್ತಿದ್ದಾರೆ ಎಂದು ಅವರ ವಕೀಲರು ವಾದಿಸಿದರು.
ಅಂತಿಮವಾಗಿ ನ್ಯಾಯಾಲಯವು ಪೊನ್ನಪ್ಪ ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆಯೇ ಎಂದು ಪರಿಶೀಲಿಸುವ ಮೊದಲು ಪ್ರಕರಣದ ತನಿಖಾ ದಾಖಲೆಗಳನ್ನು ಪರಿಶೀಲಿಸುವುದಾಗಿ ತಿಳಿಸಿತು.