ಮಡಿಕೇರಿ, ಜೂ. ೮: ಗೋಣಿಕೊಪ್ಪಲು ಸಮೀಪದ ಅರುವತೋಕ್ಲುವಿನ ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಅಂಗವಾಗಿ ಮಕ್ಕಳಿಗೆ ಸಿಹಿಯನ್ನು ಹಂಚಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿದ್ದು, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ, ಪ್ರಾಂಶುಪಾಲರಾದ ಲಲಿತ ಮೊಣ್ಣಪ್ಪ ಹಾಗೂ ಶಿಕ್ಷಕ ವೃಂದ ಹಾಜರಿದ್ದು, ಮಕ್ಕಳನ್ನು ಸಂತೋಷದಿAದ ಬರಮಾಡಿಕೊಳ್ಳ ಲಾಯಿತು.
ಶ್ರೀಶಿವಕುಮಾರ ಸ್ವಾಮೀಜಿ ಶಾಲೆ
ಶನಿವಾರಸಂತೆ, ಜೂ. ೮: ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಶಿವಕುಮಾರ ಸ್ವಾಮೀಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಜರುಗಿತು.
ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಶಾಲೆಗೆ ಬಂದ ಮಕ್ಕಳನ್ನು ಹೂಗುಚ್ಛ ಹಾಗೂ ಬಲೂನ್ ನೀಡಿ ಸ್ವಾಗತಿಸಿದರು. ನಂತರ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯು ಶಿಕ್ಷಣದ ಮುಖ್ಯ ಉದ್ದೇಶವಾಗಿದ್ದು; ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ಆರೋಗ್ಯ ಹಾಗೂ ಪೌಷ್ಟಿಕ ಜೀವನ ಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ಹೆಚ್. ಎಂ. ದಿವಾಕರ್, ಮುಖ್ಯ ಶಿಕ್ಷಕ ಹೆಚ್.ಎಂ. ಅಭಿಲಾಶ್ ಮಾತನಾಡಿದರು.
ಶಿಕ್ಷಕ ವೃಂದದವರು, ಸಿಬ್ಬಂದಿ ಹಾಗೂ ಪೋಷಕರು ಹಾಜರಿದ್ದರು. ಪ್ರಾರಂಭೋತ್ಸವ ಪ್ರಯುಕ್ತ ಸ್ವಾಮೀಜಿ ಅವರು ವಿದ್ಯಾರ್ಥಿಗಳಿಗೆ ಸಿಹಿ ತಿಂಡಿಯನ್ನು ಹಂಚಿ ಸಂಭ್ರಮಿಸಿದರು.