ಸಿದ್ದಾಪುರ, ಜೂ.೮ : ಮಾರುತಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಅಮ್ಮತ್ತಿ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಬಿಳುಗುಂದ ಗ್ರಾಮದ ಪಾರಾಣೆ ಕಾಲೋನಿಯ ನಿವಾಸಿ ವಾಸು ಎಂಬವರ ಪುತ್ರ ಪ್ರಗತ್ (೩೨) ಹಾಗೂ ನೆರೆಮನೆಯ ನಿವಾಸಿ ಚಂಗಪ್ಪ ಎಂಬಿಬ್ಬರು ಪ್ರಗತ್‌ಗೆ ಸೇರಿದ ಸ್ಕೂಟಿ (ಕೆ.ಎ.೧೨-ಡಬ್ಲುö್ಯ ೬೮೭೩) ಯಲ್ಲಿ ಬಿಳುಗುಂದದಿAದ ಅಮ್ಮತ್ತಿಗೆ ಬರುತ್ತಿದ್ದಾಗ ಅಮ್ಮತ್ತಿ ಭಾಗದಿಂದ ಅತಿ ವೇಗವಾಗಿ ಬಂದ ಮಾರುತಿ ವ್ಯಾನ್ (ಕೆ.ಎ.೫೧-ಎಲ್.೭೨೦೧) ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಚಾಲನೆ ಮಾಡುತ್ತಿದ್ದ ಪ್ರಗತ್ ರಸ್ತೆಗೆ ಬಿದ್ದಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಹಿಂಬದಿ ಸವಾರ ಚಂಗಪ್ಪ ಅವರ ಬಲಭಾಗದ ಕಾಲಿಗೆ ಗಂಭೀರ ಗಾಯವಾಗಿದೆ. ಗಾಯಾಳು ಚಂಗಪ್ಪ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಮಾರುತಿ ವ್ಯಾನ್ ಸ್ಕೂಟಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸಮೀಪದ ಗದ್ದೆಗೆ ಮಗುಚಿಕೊಂಡಿದೆ.೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಗಂಭೀರ ಗಾಯಗೊಂಡಿದ್ದ ಸ್ಕೂಟಿ ಸವಾರ ಪ್ರಗತ್‌ನನ್ನು ವೀರಾಜಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಆಂಬ್ಯುಲೆನ್ಸ್ ಮುಖಾಂತರ ಮಂಗಳೂರಿಗೆ ಕರೆದುಕೊಂಡು ಹೋಗುವ ಸಂದರ್ಭ ರಸ್ತೆ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ವೀರಾಜಪೇಟೆ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
-ವಾಸು