ಕೋವರ್‌ಕೊಲ್ಲಿ ಇಂದ್ರೇಶ್

ನವದೆಹಲಿ, ಜೂ. ೮: ಮಹತ್ವದ ಬೆಳವಣಿಗೆಯೊಂದರಲ್ಲಿ ಮಹಿಳೆಯೊಬ್ಬಳು ತನ್ನ ಸ್ವಂತ ಇಚ್ಚೆಯಿಂದ ಜೀವನೋಪಾಯಕ್ಕಾಗಿ ವೇಶ್ಯಾ ವೃತ್ತಿಯಲ್ಲಿ ತೊಡಗಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ವೇಶ್ಯಾವೃತ್ತಿಯನ್ನು ಕಾನೂನುಬದ್ಧವಾಗಿ ನಿಷೇಧಿಸುವುದು ಅಥವಾ ಅದನ್ನು ಸಂಪೂರ್ಣವಾಗಿ ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದು ಕಾನೂನಿನ ಉದ್ದೇಶವಲ್ಲ. ಬದಲಾಗಿ, ಅದನ್ನು ಒಂದು ಸಂಘಟಿತ ವೃತ್ತಿಯನ್ನಾಗಿ ಮಾಡಿ ಅದರ ‘ವಾಣಿಜ್ಯೀಕರಣ’ ಮಾಡುವುದನ್ನು ತಡೆಯುವುದು ಕಾನೂನಿನ ಪ್ರಮುಖ ಆಶಯವಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸುಮಾರು ೭೦ ವರ್ಷಗಳಷ್ಟು ಹಳೆಯದಾದ ‘ಅನೈತಿಕ ಕಳ್ಳಸಾಗಣೆ ತಡೆಗಟ್ಟುವಿಕೆ ಕಾಯ್ದೆ-೧೯೫೬ (IಖಿPಂ)(Immoಡಿಚಿಟ ಣಡಿಚಿಜಿಜಿiಛಿಞiಟಿg ಠಿಡಿeveಟಿಣioಟಿ ಚಿಛಿಣ) ’ ಅನ್ನು “ಸಮಗ್ರ ಹಾಗೂ ಸೂಕ್ಷ್ಮವಾಗಿ” ಅವಲೋಕಿಸಿದ ಸುಪ್ರೀಂ ಕೋರ್ಟ್ನ ಪೀಠ ಈ ಮಹತ್ವದ ತೀರ್ಮಾನವನ್ನು ನೀಡಿದೆ.

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ಪೀಠವು ಈ ಕುರಿತು ವಿಸ್ತೃತ ವಿವರಣೆ ನೀಡಿದೆ. ೧೯೫೬ರ IಖಿPಂ ಕಾಯ್ದೆಯನ್ನು ವಿಶ್ಲೇಷಿಸಿದ ಪೀಠ, ೨೦ನೇ ಶತಮಾನದ ಆರಂಭದಲ್ಲಿ ವೇಶ್ಯಾವೃತ್ತಿಗಾಗಿ ಮಹಿಳೆಯರ ಕಳ್ಳಸಾಗಣೆ ಸಾಮಾನ್ಯವಾಗಿತ್ತು ಮತ್ತು ಅದನ್ನು “ಅನೈತಿಕ” ಎಂದು ಪರಿಗಣಿಸಲಾಗಿತ್ತು. ಹಾಗಾಗಿ ಆ ಕಾನೂನಿಗೆ ಆ ಪದವನ್ನು ಸೇರಿಸಲಾಯಿತು ಎಂದು ವಿವರಿಸಿದೆ.

“ಈ ಕಾಯ್ದೆಯು (IಖಿPಂ) ಪ್ರಮುಖವಾಗಿ ತಪ್ಪು ಮಾಡುವವರನ್ನು ಶಿಕ್ಷಿಸಲು ಜಾರಿಗೆ ಬಂದಿದೆಯೇ ಹೊರತು, ವೇಶ್ಯಾ ವೃತ್ತಿಯಲ್ಲಿರುವವರನ್ನು ಶಿಕ್ಷಿಸಲು ಅಲ್ಲ. ವೇಶ್ಯಾವೃತ್ತಿಯನ್ನು ನಿಷೇಧಿಸುವುದು ಅಥವಾ ಅದನ್ನೇ ಕ್ರಿಮಿನಲ್ ಅಪರಾಧವೆಂದು ಘೋಷಿಸುವುದು ಈ ಕಾಯ್ದೆಯ ಮೂಲ ಉದ್ದೇಶ ಖಂಡಿತ ಅಲ್ಲ ಎನ್ನುವುದು ನಮಗೆ ಖಚಿತವಾಗಿದೆ. ಬದಲಾಗಿ, ವೇಶ್ಯಾವೃತ್ತಿಯ ವಾಣಿಜ್ಯೀಕರಣವನ್ನು ನಿರ್ಬಂಧಿಸುವುದು ಅಥವಾ ನಿಷೇಧಿಸುವುದು ಅಂದರೆ ಸಂಘಟಿತ ಜೀವನೋಪಾಯವಾಗಿ ಅದನ್ನು ನಡೆಸುವುದನ್ನು ತಡೆಯುವುದು ಇದರ ಗುರಿಯಾಗಿದೆ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವೇಶ್ಯಾಗೃಹಗಳಿಂದ ರಕ್ಷಿಸಲ್ಪಟ್ಟ ಮಹಿಳೆಯರ ಪುನರ್ವಸತಿ ಕುರಿತಾದ ವಿಚಾರಣೆಯ ವೇಳೆ ನ್ಯಾಯಮೂರ್ತಿ ಪಾರ್ದಿವಾಲಾ ಅವರು ೨೯೮ ಪುಟಗಳ ವಿಸ್ತೃತ ತೀರ್ಪನ್ನು ಬರೆದಿದ್ದಾರೆ. ಕಾಯ್ದೆಯ ಸೆಕ್ಷನ್ ೭ ಮತ್ತು ೮ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ನಡೆಯುವ (ಉದಾಹರಣೆಗೆ “ಬಹಿರಂಗ ವೇಶ್ಯಾವೃತ್ತಿ”) ವೈಯಕ್ತಿಕ ವೇಶ್ಯಾವೃತ್ತಿಯ ಕೃತ್ಯಗಳನ್ನು ದಂಡಿಸಲು ಮಾತ್ರ ಅನ್ವಯಿಸುತ್ತವೆ ಎಂದು ವಿವರಿಸಿದ್ದಾರೆ. ಸೆಕ್ಷನ್ ೭ ಸಾರ್ವಜನಿಕ ಸ್ಥಳಗಳ ಸಮೀಪದಲ್ಲಿ ವೇಶ್ಯಾವೃತ್ತಿಯಲ್ಲಿ ತೊಡಗುವವರನ್ನು ಶಿಕ್ಷಿಸಿದರೆ, ಸೆಕ್ಷನ್ ೮ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಹಕರನ್ನು ಆಕರ್ಷಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ.

ನ್ಯಾಯಾಲಯದ ಪ್ರಕಾರ, ವೈಯಕ್ತಿಕ ವೇಶ್ಯಾವೃತ್ತಿಯನ್ನು ನೇರವಾಗಿ ತಡೆಯುವುದು ಉದ್ದೇಶವಲ್ಲದಿದ್ದರೂ, ಸಾರ್ವಜನಿಕ ಸಭ್ಯತೆ ಮತ್ತು ಸಾಮಾಜಿಕ ನೈತಿಕತೆಯ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳು ಕಂಡುಬAದರೆ ಅದನ್ನು ತಡೆಯಬೇಕಾಗುತ್ತದೆ. ಆದರೆ, ವೇಶ್ಯಾವೃತ್ತಿಯನ್ನು ಸಂಪೂರ್ಣವಾಗಿ ಅಪರಾಧವೆಂದು ಪರಿಗಣಿಸಲು ಅಥವಾ ಯಾವುದೇ ನಿಯಂತ್ರಣವಿಲ್ಲದೆ ಬಿಟ್ಟುಬಿಡಲು ನ್ಯಾಯಾಲಯ ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಾಯ್ದೆಯ ಸೆಕ್ಷನ್ ೨ ರ ಅಡಿಯಲ್ಲಿ ‘ವೇಶ್ಯಾಗೃಹ’ದ ವ್ಯಾಖ್ಯಾನವನ್ನು ಪರಿಶೀಲಿಸಿದ ಪೀಠವು ಮಹತ್ವದ ಸ್ಪಷ್ಟೀಕರಣ ನೀಡಿದೆ. “ಒಬ್ಬಂಟಿ ಮಹಿಳೆಯು ತನ್ನ ಸ್ವಂತ ಜೀವನೋಪಾಯಕ್ಕಾಗಿ, ಬೇರೆ ಯಾವುದೇ ಲೈಂಗಿಕ ಕಾರ್ಯಕರ್ತೆ ಅಥವಾ ಬೇರೆ ಯಾವುದೇ ವ್ಯಕ್ತಿಯ ಹಸ್ತಕ್ಷೇಪ ಹಾಗೂ ನಿರ್ವಹಣೆ ಇಲ್ಲದೆ ತನ್ನದೇ ಆದ ನಿವಾಸದಲ್ಲಿ ವೇಶ್ಯಾವೃತ್ತಿಯನ್ನು ನಡೆಸುತ್ತಿದ್ದರೆ, ಅಂತಹ ನಿವಾಸವನ್ನು ‘ವೇಶ್ಯಾಗೃಹ’ ಎಂದು ಪರಿಗಣಿಸಲು ಅಥವಾ ಕಾನೂನಿನ ಪ್ರಕಾರ ಮೊಕದ್ದಮೆ ದಾಖಲಿಸಿ ಶಿಕ್ಷೆಗೊಳಪಡಿಸುವುದು ಸಾಧ್ಯವಿಲ್ಲ” ಎಂದು ಪೀಠವು ಸ್ಪಷ್ಟವಾಗಿ ಉಲ್ಲೇಖಿಸಿದೆ. ಅಲ್ಲದೆ ಪೊಲೀಸ್ ತಪಾಸಣೆಯ ವೇಳೆ ಸಿಕ್ಕಿಬಿದ್ದ ಆಕೆಯ ಗ್ರಾಹಕರನ್ನು ಆರೋಪಿಗಳೆಂದು ಪರಿಗಣಿಸಲಾಗದು ಎಂದು ಈ ಹಿಂದೆಯೇ ಕರ್ನಾಟಕ ಹೈ ಕೋರ್ಟ್ ಸೆಪ್ಟೆಂಬರ್ ೧೮, ೨೦೧೮ ರ ತೀರ್ಪಿನಲ್ಲಿ ಸ್ಪಷ್ಟ ಪಡಿಸಿತ್ತು. ಪ್ರಕರಣವೊಂದರಲ್ಲಿ ಪೊಲೀಸರು ಧಾಳಿ ವೇಳೆ ಸಿಕ್ಕಿದ ಗ್ರಾಹಕನೊಬ್ಬನ ಮೇಲೆ ಪ್ರಕರಣ ದಾಖಲಿಸಿದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ವೇಶ್ಯೆಯ ಸೇವೆ ಪಡೆಯುವುದನ್ನು ಐಪಿಸಿ ಮತ್ತು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆಯಡಿ ಶಿಕ್ಷೆಗೆ ಒಳಪಡಿಸುವಂತಿಲ್ಲ ಎಂದು ತೀರ್ಪು ನೀಡಿತ್ತು.