ಗೋಣಿಕೊಪ್ಪ ವರದಿ, ಜೂ. ೭: ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಭಾನುವಾರದಿಂದ ಆರಂಭಗೊAಡಿರುವ ಬಿ. ಡಿವಿಜನ್ ಹಾಕಿ ಟೂರ್ನಿಯಲ್ಲಿ ಕುತ್ನಾಡ್ ಸ್ಟೆçöÊಕರ್ಸ್ ಡ್ರಿಬ್‌ಲ್ ಹೆಂಪ್, ಟವರ್ಸ್, ಪನ್ನಂಗಾಲ ಹಾಗೂ ಅಂಜಿಗೇರಿ ತಂಡಗಳು ಗೆಲುವು ಪಡೆದುಕೊಂಡವು.

ಅAಜಿಗೇರಿ ನಾಡ್ ತಂಡವು ಟಾಟಾ ಕಾಫಿ ಲಿಮಿಟೆಡ್ ತಂಡವನ್ನು ೨-೦ ಗೋಲುಗಳ ಅಂತರದಲ್ಲಿ ಸೋಲಿಸಿತು. ಅಂಜಿಗೇರಿ ಆಟಗಾರ ಸಿದ್ದಾಂತ್ ಹಾಗೂ ಸೋಮಯ್ಯ ತಲಾ ಒಂದೊAದು ಗೋಲು ದಾಖಲಿಸಿದರು.

ಡ್ರಿಬ್‌ಲ್ ಹೆಂಪ್ ತಂಡಕ್ಕೆ ವೀರಾಜಪೇಟೆ ತ್ರಿವೇಣಿ ಶಾಲೆ ವಿರುದ್ದ ೨-೦ ಗೋಲುಗಳ ಜಯ ಲಭಿಸಿತು. ಹೆಂಪ್ ಆಟಗಾರರಾದ ಚರ್ಮಣ ಹಾಗೂ ಸಜನ್ ಗಣಪತಿ ಒಂದೊAದು ಗೋಲು ಬಾರಿಸಿದರು.

ಕುಶಾಲನಗರ ಟೈಕೂನ್ ಮತ್ತು ಕಾಕೋಟ್ ಸ್ಟೆçöÊಕರ್ಸ್ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಉಭಯ ತಂಡಗಳು ೧-೧ ಗೋಲು ಸಾಧಿಸಿದವು. ಕುಶಾಲನಗರ ಟೈಕೂನ್ ಆಟಗಾರ ಹರ್ಷಲ್, ಕಾಕೋಟ್ ಆಟಗಾರ ಸಿ. ಪಿ. ಅಮೋಘ್ ತಲಾ ಒಂದೊAದು ಗೋಲು ಬಾರಿಸಿದರು.

ಕುತ್ತ್ನಾಡ್ ಸ್ಟೆçöÊಕರ್ಸ್ ತಂಡವು ೭-೧ ಗೋಲುಗಳಿಂದ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ಬಿ ತಂಡವನ್ನು ಪರಾಭವಗೊಳಿಸಿತು. ಕುತ್‌ನಾಡ್ ಪರ ದೇವಯ್ಯ ೩,. ಸುಹಾನ್ ೨, ಧ್ಯಾನ್ ಕರೆಕಪ್ಪ, ಸುತನ್ ತಲಾ ಒಂದೊAದು ಗೋಲು ಬಾರಿಸಿದರು. ಪೊನ್ನಂಪೇಟೆ ಪರ ಪ್ರನದ್ ೧ ಗೋಲು ಗಳಿಸಿದರು.

ವೀರಾಜಪೇಟೆ ಟವರ್ಸ್ ತಂಡವು ಅಮ್ಮತ್ತಿ ಎಎಸ್ಸಿ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು. ಟವರ್ಸ್ ಆಟಗಾರ ಚಮನ್, ಮಾಚಯ್ಯ ಗೋಲು ಬಾರಿಸಿದರು. ಪನ್ನಂಗಾಲ ಪ್ಯಾಂಥರ್ಸ್ ತಂಡ ಕುರ್ಗೂರ್ ತಂಡವನ್ನು ೨-೦ ಗೋಲುಗಳ ಅಂತರದಲ್ಲಿ ಮಣಿಸಿತು. ಪನ್ನಂಗಾಲ ಆಟಗಾರರಾದ ಲಿಖಿತ್ ಹಾಗೂ ಸೋನು ನಾಣಯ್ಯ ಗೋಲು ಹೊಡೆದರು.