ಮಡಿಕೇರಿ, ಜೂ. ೭: ಕೊಡಗು ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ/ ಅಟಲ್ ಬಿಹಾರಿ ವಾಜಪೇಯಿ, ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಿಗೆ ೨೦೨೬-೨೭ನೇ ಸಾಲಿನ ೭, ೮ ಮತ್ತು ೯ನೇ ತರಗತಿಗಳ ಖಾಲಿ ಇರುವ ಸೀಟುಗಳಿಗೆ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದೆ.
ಅದರಂತೆ ೨೦೨೬-೨೭ನೇ ಸಾಲಿನ ೭,೮ ಮತ್ತು ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಷರತ್ತಿಗೊಳಪಟ್ಟು ಇದೇ ಜೂನ್ ೧೦ ರೊಳಗೆ ಸೂಕ್ತ ದಾಖಲೆಗಳೊಂದಿಗೆ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಅಟಲ್ ಬಿಹಾರಿ ವಾಜಪೇಯಿ/ ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಸಂಪರ್ಕಿಸಬಹುದಾಗಿದೆ.
ಪೌರಕಾರ್ಮಿಕ/ ಸಫಾಯಿ ಕರ್ಮಚಾರಿ/ ಮ್ಯಾನ್ಯುವಲ್ ಸ್ಕಾವೆಂಜರ್/ ಸ್ಮಶಾನ ಕಾರ್ಮಿಕರ/ ದೇವದಾಸಿ ಹಾಗೂ ಇತರೆ ವಿಶೇಷ ವರ್ಗದ ವಿದ್ಯಾರ್ಥಿಗಳಿಗೆ ಪ್ರಥಮ ಆಧ್ಯತೆ ನೀಡಿ ನೇರ ಪರೀಕ್ಷೆ ಇಲ್ಲದೆ ನೇರ ಪ್ರವೇಶಾತಿ ಕಲ್ಪಿಸಲಾಗುವುದು. ಅರ್ಜಿ ವಿತರಣಾ ದಿನಾಂಕ: ೦೪-೦೬-೨೦೨೬ ರಿಂದ ೧೦-೦೬-೨೦೨೬ ರ ವರೆಗೆ, ವಿಶೇಷ ವರ್ಗದ ವಿದ್ಯಾರ್ಥಿಗಳು ಹೊರತುಪಡಿಸಿ ಉಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಸಲಾಗುವುದು.
ಉಪ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ದೂ. ೦೮೨೭೨-೨೨೫೫೩೧, ಮೊರಾರ್ಜಿ ದೇಸಾಯಿ ವಸತಿ ಶಾಲೆ/ ಕಾಲೇಜು, ಬಸವನಹಳ್ಳಿ, ಕುಶಾಲನಗರ ತಾಲೂಕು. ದೂ. ೯೮೪೫೬೫೯೯೦೯, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ, ಕುಶಾಲನಗರ ತಾಲೂಕು. ದೂ. ೯೯೦೧೨೬೭೬೩೫, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅಲೂರು ಸಿದ್ದಾಪುರ, ಸೋಮವಾರಪೇಟೆ ತಾಲೂಕು. ದೂ.೯೭೪೧೯೫೮೦೧೨, ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ನಾಪೋಕ್ಲು, ಮಡಿಕೇರಿ ತಾಲೂಕು. ದೂ. ೮೨೭೭೮೯೪೭೮೩, ಡಾ|| ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ, ತೊಳೂರು ಶೆಟ್ಟಳ್ಳಿ, ಸೋಮವಾರಪೇಟೆ ತಾಲೂಕು. ದೂ. ೯೯೪೫೭೦೭೨೩೪, ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಭಾಗಮಂಡಲ, ಮಡಿಕೇರಿ ತಾಲೂಕು. ದೂ:೯೬೧೧೩೦೭೬೪೬, ಮೊರಾರ್ಜಿ ದೇಸಾಯಿ ವಸತಿ ಶಾಲೆ, ತಿತಿಮತಿ, ವೀರಾಜಪೇಟೆ ತಾಲೂಕು. ದೂ.೭೮೯೨೭೯೫೬೨೪, ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಹುದಿಕೇರಿ, ಪೊನ್ನಂಪೇಟೆ ತಾಲೂಕು. ದೂ. ೮೮೬೧೫೭೨೨೧೫ಹಾಗೂ ಡಾ|| ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಸುಂಟಿಕೊಪ್ಪ, ಕುಶಾಲನಗರ ತಾಲೂಕು. ದೂ. ೯೪೮೨೩೫೯೮೧೨ ಇಲ್ಲಿಂದ ಅರ್ಜಿ ಪಡೆಯಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.