ಕೋವರ್ ಕೊಲ್ಲಿ ಇಂದ್ರೇಶ್
ನವದೆಹಲಿ, ಜೂ. ೭: ಮುಂದಿನ ಜೂನ್ ೨೦೨೬ರ ಅಂತ್ಯದ ವೇಳೆಗೆ ಭಾರತದ ದೇಶೀಯ ಗುಪ್ತಚರ ಸಂಸ್ಥೆಯ (ಇಂಟೆಲಿಜೆನ್ಸ್ ಬ್ಯೂರೋ) ಮುಖ್ಯಸ್ಥ ತಪನ್ ದೇಕಾ ಅವರು ನಾಲ್ಕು ವರ್ಷಗಳ ಕಾಲ ಅಧಿಕಾರ ಪೂರ್ಣಗೊಳಿಸಲಿದ್ದಾರೆ . ಅವರ ಅಧಿಕಾರಾವಧಿ ಎರಡು ಬಾರಿಯ ವಿಸ್ತರಣೆ ನಂತರ ಮುಗಿದಿರುವುದರಿಂದ ದೇಶದ ಪ್ರಮುಖ ಸಂಸ್ಥೆಯ ನೇತೃತ್ವವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಕುರಿತು ದೆಹಲಿಯ ಐಪಿಎಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ದೇಕಾ ಅವರನ್ನು ಮೊದಲು ಜುಲೈ ೧, ೨೦೨೨ ರಂದು ಗುಪ್ತಚರ ಬ್ಯೂರೋದ ನಿರ್ದೇಶಕರನ್ನಾಗಿ ನೇಮಿಸಲಾಯಿತು. ನಂತರ ಅವರು ೨೦೨೪ರಲ್ಲಿ ತಮ್ಮ ಮೊದಲ ಒಂದು ವರ್ಷದ ವಿಸ್ತರಣೆಯನ್ನು ಮತ್ತು ೨೦೨೫ರಲ್ಲಿ ಎರಡನೇ ಒಂದು ವರ್ಷದ ವಿಸ್ತರಣೆಯನ್ನು ಪಡೆದರು, ಅವರ ಪ್ರಸ್ತುತ ಅಧಿಸೂಚಿತ ಅಧಿಕಾರಾವಧಿಯನ್ನು ಜೂನ್ ೩೦, ೨೦೨೬ಕ್ಕೆ ಹೆಚ್ಚಿಸಲಾಗಿದ್ದು, ಅವರು ಪ್ರಸ್ತುತ ಅವಧಿಯನ್ನು ಪೂರ್ಣಗೊಳಿಸಿದರೆ, ಅವರು ಗುಪ್ತಚರ ಬ್ಯೂರೋದ ಮುಖ್ಯಸ್ಥರಾಗಿ ಅವರು ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದಂತಾಗುತ್ತದೆ. ಈಗ ನಡೆಯುತ್ತಿರುವ ಚರ್ಚೆಯಲ್ಲಿ ಕೊಡಗು ಮೂಲದ ಐಪಿಎಸ್ ಅಧಿಕಾರಿ ಅಣ್ಣಳಮಾಡ ಸುನಿಲ್ ಅಚ್ಚಯ್ಯ ಅವರ ಹೆಸರೂ ಗಂಭೀರವಾಗಿ ಕೇಳಿ ಬಂದಿದೆ. ೧೯೯೧ರ ಬ್ಯಾಚ್ ನಾಗಾಲ್ಯಾಂಡ್ ಕೇಡರ್‌ನ ಐಪಿಎಸ್ ಅಧಿಕಾರಿ ಆಗಿರುವ ಅಚ್ಚಯ್ಯ ಅವರ ವೃತ್ತಿಜೀವನವು ಆಂತರಿಕ ಗುಪ್ತಚರ, ಬಾಹ್ಯ ಗುಪ್ತಚರ ಮತ್ತು ವಿದೇಶಿ ನಿಯೋಜನೆಗಳನ್ನು ಒಳಗೊಂಡಿದೆ.
೫೯ ವರ್ಷದ ಅಚ್ಚಯ್ಯ ಅವರು ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಇವರು ಹೊಂದಿರುವ ಹುದ್ದೆಯು ಗುಪ್ತಚರ ಇಲಾಖೆಯ ಮುಖ್ಯಸ್ಥರ ಹುದ್ದೆಗೆ ಸೂಕ್ತವಾಗಿದೆ ಅಲ್ಲದೆ ಭಾರತದ ವಿವಿಧ ಗುಪ್ತಚರ ಸಂಸ್ಥೆಗಳಲ್ಲಿ ಕೆಲಸ ಮಾಡಿರುವ ಅನುಭವದ ಇವರ ಪ್ರೊಫೈಲ್ ಕೇಂದ್ರ ಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಗಮನ ಸೆಳೆದಿದೆ. ಜುಲೈ ೨೦೧೯ ರಲ್ಲಿ ಖ&ಂWಗೆ ತೆರಳುವ ಮೊದಲು ಅಚ್ಚಯ್ಯ ಗುಪ್ತಚರ ಬ್ಯೂರೋದಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಆಗಿನ Iಃ ಮುಖ್ಯಸ್ಥ ರಾಜೀವ್ ಜೈನ್ ಅವರ ಸಿಬ್ಬಂದಿ ಅಧಿಕಾರಿಯಾಗಿಯೂ ಕೆಲಸ ಮಾಡಿದರು. ಅವರ ವೃತ್ತಿಜೀವನದ ಆ ಹಂತವು ಅವರನ್ನು ಭಾರತದ ಆಂತರಿಕ ಗುಪ್ತಚರ ಇಲಾಖೆಯ ಮಹತ್ವದ ಅಧಿಕಾರಿ ಎಂದು ಪರಿಗಣಿಸಿದ್ದೇ ಅಲ್ಲದೆ ಹಿರಿಯ ಮಟ್ಟದ ಸಾಂಸ್ಥಿಕ ಕಾರ್ಯನಿರ್ವಹಣೆ ಮತ್ತು ಸಮನ್ವಯದ ಅನುಭವವನ್ನೂ ಪಡೆಯುವಂತಾಯಿತು.
ಖ&ಂW ಪ್ರವೇಶದ ನಂತರ, ಅಚ್ಚಯ್ಯ ಸಂಸ್ಥೆಯ ವಿಶೇಷ ಕಾರ್ಯದರ್ಶಿ ಮಟ್ಟದವರೆಗೂ ಬಡ್ತಿ ಹೊಂದಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅವರು ಇತ್ತೀಚಿನ ದಿನಗಳಲ್ಲಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ, ಇದರಿಂದ ಅವರ ಗುಪ್ತಚರ ವೃತ್ತಿ ಜೀವನದ ಹಿನ್ನೆಲೆಗೆ ವಿದೇಶಿ ಮತ್ತು ರಾಜತಾಂತ್ರಿಕ ಅನುಭವವೂ ಸೇರಿದಂತಾಯಿತು. ಈ ಹಿಂದೆ ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ ಅವರನ್ನು ಅಂತಿಮವಾಗಿ ಆರ್ & ಎಡಬ್ಲ್ಯೂ ಮುಖ್ಯಸ್ಥರನ್ನಾಗಿ ನೇಮಿಸಿದ ಅವಧಿಯಲ್ಲಿ ಹಿರಿಯ ಗುಪ್ತಚರ ನೇಮಕಾತಿಗಳ ಕುರಿತಾದ ಚರ್ಚೆಗಳಲ್ಲಿ ಅಚ್ಚಯ್ಯ ಅವರ ಹೆಸರೂ ಕೇಳಿಬಂದಿತ್ತು.
ಅಚ್ಚಯ್ಯ ಜೊತೆಗೆ, ಗುಪ್ತಚರ ಬ್ಯೂರೋದೊಂದಿಗೆ ಸಂಬAಧ ಹೊಂದಿರುವ ೧೯೯೩ ರ ಬ್ಯಾಚ್ ಮಹಾರಾಷ್ಟ್ರ ಕೇಡರ್ ಐಪಿಎಸ್ ಅಧಿಕಾರಿ ಮಹೇಶ್ ದೀಕ್ಷಿತ್ ಅವರ ಹೆಸರೂ ಇಂಟೆಲಿಜೆನ್ಸ್ ಬ್ಯೂರೋ ಮುಖ್ಯಸ್ಥರ ಹುದ್ದೆಗೆ ಕೇಳಿ ಬಂದಿದೆ. ಉನ್ನತ ಮೂಲಗಳ ಪ್ರಕಾರ ೧೯೯೨ ರ ಬ್ಯಾಚ್ ಒಡಿಶಾ ಕೇಡರ್‌ನ ಐಪಿಎಸ್ ಅಧಿಕಾರಿ, ಪ್ರಸ್ತುತ ಗುಪ್ತಚರ ಬ್ಯೂರೋದಲ್ಲಿ ವಿಶೇಷ ನಿರ್ದೇಶಕಿಯಾಗಿರುವ ಸಪ್ನಾ ತಿವಾರಿ ಕೂಡ ಅರ್ಹರ ಪಟ್ಟಿಯಲ್ಲಿದ್ದಾರೆ.
ಒಂದು ವೇಳೆ ಈ ಪ್ರಮುಖ ಹುದ್ದೆಗೆ ಅವರು ಆಯ್ಕೆಯಾದರೆ, ಅವರು ಐಬಿಯನ್ನು ಮುನ್ನಡೆಸುವ ದೇಶದ ಮೊದಲ ಮಹಿಳಾ ಅಧಿಕಾರಿಯಾಗುತ್ತಾರೆ. ಈ ಹಂತದಲ್ಲಿ, ಗುಪ್ತಚರ ಬ್ಯೂರೋವನ್ನು ಮುನ್ನಡೆಸಲು ಯಾವುದೇ ಭವಿಷ್ಯದ ನೇಮಕಾತಿಯ ಕುರಿತು ಯಾವುದೇ ಅಧಿಕೃತ ಘೋಷಣೆ ಮಾಡಲಾಗಿಲ್ಲ, ಮತ್ತು ಔಪಚಾರಿಕ ಸರ್ಕಾರಿ ಆದೇಶ ಹೊರಡಿಸುವವರೆಗೆ ಉತ್ತರಾಧಿಕಾರದ ಕುರಿತು ಯಾವುದೇ ಚರ್ಚೆ ಊಹಾಪೋಹವಾಗಿಯೇ ಉಳಿದಿದೆ. ಆದರೆ ಸರ್ಕಾರ ಹಿರಿತನವನ್ನು ಪರಿಗಣಿಸಿದರೆ ಅಚ್ಚಯ್ಯ ಅವರಿಗೆ ಮುಖ್ಯಸ್ಥರ ಹುದ್ದೆ ಒಲಿಯುವುದು ಸಲೀಸಾಗಲಿದೆ.