ನವದೆಹಲಿ, ಜೂ. ೭: ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಅನಿಲದ ಬೆಲೆ ಏರಿಕೆಯಿಂದ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ರೂ. ೨೯ ಹೆಚ್ಚಿಸಲಾಗಿದೆ.
ಮಾರ್ಚ್ ೭ರಂದು ಸಿಲಿಂಡರ್‌ಗೆ ೬೦ ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಇದೀಗ ರೂ. ೨೯ ಹೆಚ್ಚಳದೊಂದಿಗೆ ಈ ವರ್ಷ ಒಟ್ಟು ಏರಿಕೆ ೮೯ ರೂಪಾಯಿಯಾಗಿದೆ. ಭಾನುವಾರದಿಂದಲೇ ಹೊಸ ದರ ಜಾರಿಗೆ ಬಂದಿದೆ. ಬೆಲೆ ಏರಿಕೆಯ ಬಗ್ಗೆ ಕೇಂದ್ರ ಸರಕಾರ ಸಮರ್ಥಿಸಿಕೊಂಡಿದ್ದು, ಭಾರತದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ವಿಶ್ವದಲ್ಲಿ ಅತ್ಯಂತ ಕಡಿಮೆ ದರಗಳಲ್ಲೇ ಉಳಿದಿವೆ ಎಂದು ಕೇಂದ್ರ ಹೇಳಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು ಮೊದಲ ನಾಲ್ಕು ಸಿಲಿಂಡರ್‌ಗಳ ಮರುಪೂರೈಕೆಗೆ ಪ್ರತಿ ಸಿಲಿಂಡರ್‌ಗೆ ೩೦೦ ರೂಪಾಯಿ ಸಬ್ಸಿಡಿ ಪಡೆಯುವುದರಿಂದ, ಅವರಿಗೆ ಪ್ರತಿ ಸಿಲಿಂಡರ್‌ನ ಬೆಲೆ ೬೪೨ ರೂಪಾಯಿ ಆಗಿಯೇ ಮುಂದುವರಿಯಲಿದೆ. ಸರ್ಕಾರದ ಪ್ರಕಾರ, ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ಜಾಗತಿಕ ಪೂರೈಕೆ ವ್ಯತ್ಯಯಗಳಿಂದಾಗಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಒದಗಿಸುವ ವೆಚ್ಚ ೧,೬೦೦ ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ. ಭಾರತದ ಎಲ್‌ಪಿಜಿ ಆಮದು ದರಗಳು ಸೌದಿ ಅರಾಮ್ಕೋ ನಿಗದಿಪಡಿಸುವ ಸೌದಿ ಕಾಂಟ್ರಾಕ್ಟ್ ಪ್ರೆöÊಸ್‌ಗೆ ಸಂಬAಧಿಸಿವೆ. ಫೆಬ್ರವರಿಯಿಂದ ಈ ಮಾನದಂಡದ ದರ ಸುಮಾರು ೪೬ ಶೇಕಡಾ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರವು, ಭಾರತದಲ್ಲಿ ಅಡುಗೆ ಅನಿಲದ ಬೆಲೆಗಳು ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದAತಹ ನೆರೆಯ ರಾಷ್ಟ್ರಗಳಿಗಿಂತಲೂ ಕಡಿಮೆಯಿದ್ದು, ಅಮೇರಿಕ, ಆಸ್ಟೆçÃಲಿಯಾ ಹಾಗೂ ಕೆನಡಾದಂತಹ ಅಭಿವೃದ್ಧಿ ಹೊಂದಿದ ದೇಶಗಳಿಗಿಂತಲೂ ಗಣನೀಯವಾಗಿ ಕಡಿಮೆ ಎಂದು ಹೇಳಿದೆ.