ಪೊನ್ನಂಪೇಟೆ, ಜೂ. ೬: ಕೊಡಗು ಬಾಕ್ಸಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ರಾಜ್ಯ ಮಟ್ಟದ ೧೪ ವರ್ಷದೊಳಗಿನ ಸಬ್ ಜೂನಿಯರ್ ಬಾಲಕ-ಬಾಲಕಿಯರ ಬಾಕ್ಸಿಂಗ್ ಚಾಂಪಿಯನ್ ಶಿಪ್ ತಾ. ೮ ಮತ್ತು ೯ ರಂದು ಗೋಣಿಕೊಪ್ಪ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಕೊಡಗು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಸಬ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ೧೦೦ ಕ್ಕೂ ಹೆಚ್ಚು ಸಬ್ ಜೂನಿಯರ್ ಬಾಕ್ಸರ್‌ಗಳು ಈ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ೧೪ ವರ್ಷದೊಳಗಿನ ವಯೋಮಿತಿಯ ಬಾಲಕ ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಈ ಚಾಂಪಿಯನ್ ಶಿಪ್‌ನಲ್ಲಿ ವಿಜೇತರಾಗುವ ಕ್ರೀಡಾಪಟುಗಳು ರಾಜ್ಯವನ್ನು ಪ್ರತಿನಿಧಿಸಿ ಅಖಿಲ ಭಾರತ ಓಪನ್ ನ್ಯಾಷನಲ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಕ್ಕೆ ತಾ. ೮ ರಂದು ಚಾಲನೆ ದೊರೆಯಲಿದ್ದು, ಫೈನಲ್ ಪಂದ್ಯಗಳು ತಾ. ೯ ರಂದು ನಡೆಯಲಿವೆ. ವಿಜೇತ ಕ್ರೀಡಾಪಟುಗಳಿಗೆ ಪದಕ ಮತ್ತು ಪ್ರಮಾಣಪತ್ರ ವಿತರಿಸಲಾಗುವುದು ಎಂದು ಕರ್ನಲ್ ಚೆಪ್ಪುಡಿರ ಮುತ್ತಣ್ಣ ತಿಳಿಸಿದ್ದಾರೆ.