ಪಳೆಯಂಡ ಪಾರ್ಥಚಿಣ್ಣಪ್ಪ
ವೀರಾಜಪೇಟೆ, ಜೂ. ೬: ಕೊಡಗು ಜಿಲ್ಲೆ ಕ್ರೀಡೆಗೆ ಹೆಸರುವಾಸಿಯಾಗಿದ್ದು ತಮ್ಮ ಕಠಿಣ ಪರಿಶ್ರಮದಿಂದ ಜಿಲ್ಲೆ, ರಾಜ್ಯ, ರಾಷ್ಟç, ಹಾಗೂ ಅಂತರರಾಷ್ಟಿçÃಯ ಮಟ್ಟದಲ್ಲೂ ತಮ್ಮನ್ನು ತೊಡಗಿಸಿಕೊಂಡು ಸಾಧನೆ ಮಾಡುತ್ತಿದ್ದಾರೆ. ಐಸ್ಹಾಕಿ ಒಂದು ಅಸಾಮಾನ್ಯ ಕ್ರೀಡೆಯಾಗಿದ್ದು ಅದರಲ್ಲಿ ಸಾಧನೆ ಮಾಡುವುದು ಬಹು ಕಷ್ಟದ ಕೆಲಸವಾಗಿದೆ. ಕೊಡಗಿನ ಇಬ್ಬರು ಸಹೋದರರು ಅಮೇರಿಕಾದ ಟೆಕ್ಸಾಸ್ ಫ್ರಿಸ್ಕೊ ಹಾಕಿ ಅಸೋಸಿಯೇಷನ್ನ ಸ್ಪರ್ಧಾತ್ಮಕ ತಂಡಗಳಿಗೆ ಆಯ್ಕೆಯಾಗುವ ಮೂಲಕ ಅಮೇರಿಕನ್ ಐಸ್ ಹಾಕಿಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ಹದಿನೈದರ ಪ್ರಾಯದ ಮೇರಿಯಂಡ ಮೇಯನ್ ಮಾಚಯ್ಯ ಫ್ರಿಸ್ಕೊ ವಾರ್ಸಿಟಿ ತಂಡಕ್ಕೆ ಆಯ್ಕೆ ಗೊಂಡಿದ್ದಾರೆ. ಅವರ ಕಿರಿಯ ಸಹೋದರ ಹದಿಮೂರರ ಪ್ರಾಯದ ಕ್ರಿಶ್ ಕಾರ್ಯಪ್ಪ ಜೂನಿಯರ್ ವಾರ್ಸಿಟಿ ತಂಡದಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ. ಕೊಡಗಿನ ಈ ಸಹೋದರರು ತಮ್ಮ ಸಮರ್ಪಿತ ಪರಿಶ್ರಮ ಹಾಗೂ ತರಬೇತಿಯಿಂದಾಗಿ ಉತ್ತರ ಅಮೇರಿಕಾದಲ್ಲಿ ಬಹು ಬೇಡಿಕೆ ಇರುವ ತಂಡಕ್ಕೆ ಆಯ್ಕೆಯಾಗುವ ಮೂಲಕ ಕಠಿಣ ಸಾಧನೆ ತೋರಿದ್ದಾರೆ.
ಫ್ರಿಸ್ಕೋದ ಇಂಡಿಪೆAಡೆನ್ಸ್ ಸ್ಕೂಲ್ನಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಯಾಗಿರುವ ಮೇಯನ್ ಮಾಚಯ್ಯ ಹಿಂದಿನ ಋತುವಿನಲ್ಲಿ ನೀಡಿದ ಉತ್ತಮ ಪ್ರದರ್ಶನದ ನಂತರ ವರ್ಸಿಟಿ ತಂಡಕ್ಕೆ ಬಡ್ತಿ ಪಡೆದು ಕೊಂಡಿದ್ದಾರೆ. ನೆಲ್ಸನ್ ಮಿಡಲ್ ಸ್ಕೂಲ್ನಲ್ಲಿ ೮ನೇ ತರಗತಿ ಪೂರ್ಣಗೊಳಿಸಿದ ಕ್ರಿಶ್ ಕಾರ್ಯಪ್ಪ ಅಭಿವೃದ್ಧಿ ಮಟ್ಟದಲ್ಲಿ ಸ್ಥಿರ ಪ್ರದರ್ಶನ ನೀಡಿದ ನಂತರ ಜೂನಿಯರ್ ವಾರ್ಸಿಟಿ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ ಐಸ್ ಹಾಕಿಯು ವೇಗ, ಕೌಶಲ್ಯ, ಸಹಿಷ್ಣತೆ, ಸಮತೋಲನ ಮತ್ತು ತಂಡದ ಸಾಮರಸ್ಯದೊಂದಿಗೆ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆಡುವ ವೇಗದ ಕ್ರೀಡೆಯಾಗಿದೆ. ಸಹೋದರರು ಚಿಕ್ಕ ವಯಸ್ಸಿನಿಂದಲೂ ಈ ಕ್ರೀಡೆಯನ್ನು ಆಡುತ್ತಿದ್ದಾರೆ ಮತ್ತು ಟೆಕ್ಸಾಸ್ನಲ್ಲಿ ಯುವ ಹಾಕಿ ಕಾರ್ಯಕ್ರಮಗಳ ಮೂಲಕ ವ್ಯಾಪಕ ತರಬೇತಿ ಪಡೆದಿದ್ದಾರೆ.
ಈ ಸಹೋದರರು ಕೊಡಗಿನ ಮೇರಿಯಂಡ ಕುಟುಂಬಕ್ಕೆ ಸೇರಿದವರಾಗಿದ್ದು, ಇವರ ಪೂರ್ವಜರ ಬೇರುಗಳು ಮೇರಿಯಂಡ ಐನ್ಮನೆಯಲಿದೆ. ಇವರು ಶಿರೋ ಟಿಕ್ನಾಲಾಜೀಸ್ನ ಸಂಸ್ಥಾಪಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಣಾಧಿüಕಾರಿಯಾಗಿರುವ ಶ್ರೀಕಾಂತ್ ತಿಮ್ಮಯ್ಯ ಹಾಗೂ ಟೆಕ್ಸಾಸ್ನ ಡಲ್ಲಾಸ್ನಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಚೇನಂಡ ಗಂಗಮ್ಮ ಅವರ ಪುತ್ರರು.
ಇವರ ಅಜ್ಜ ದಿವಂಗತ ಮೆರಿಯಂಡ ಕೆ ತಿಮ್ಮಯ್ಯ ಅವರು ಖ್ಯಾತ ವಕೀಲರಾಗಿದ್ದರು. ಅಜ್ಜಿ ಶಾರದ ತಮ್ಮಯ್ಯ ಅವರು ಮೈಸೂರಿನಲ್ಲಿ ವಾಸಿಸುತಿದ್ದಾರೆ. ಅಮೇರಿಕಾದಲ್ಲಿ ಬೆಳೆದಿದ್ದರು ಸಹ ಈ ಸಹೊದರರು ಕೊಡಗಿಗೆ ಭೇಟಿ ನೀಡುವ ಮೂಲಕ ತಮ್ಮ ನಿಕಟ ಸಂಬAಧವನ್ನು ಉಳಿಸಿಕೊಂಡಿದ್ದಾರೆ. ಕೊಡಗು ಮೂಲದ ಯುವಕರು ಪ್ರಪಂಚದಾದ್ಯAತ ತಮ್ಮ ವೈವಿದ್ಯಮಯ ಕ್ಷೇತ್ರಗಳು ಮತ್ತು ಕ್ರೀಡಾರಂಗಗಳಲ್ಲಿ ತಮ್ಮ ಅಸ್ತಿತ್ವವನ್ನು ಹೇಗೆ ಸಾಬೀತುಪಡಿಸುತ್ತಿದ್ದಾರೆ ಎಂಬುದಕ್ಕೆ ಈ ಸಹೊದರರ ಸಾಧನೆಯು ಸಾಕ್ಷಿಯಾಗಿದೆ.
ಐಸ್ ಹಾಕಿ: ಐಸ್ ಹಾಕಿ ಯನ್ನು ದೊಡ್ದದಾದ ಸಮತಟ್ಟಾದ ಐಸ್ನ ಮೇಲೆ ಮೂರು ಇಂಚಿನ (೭೬.೨ ಎಂ.ಎA) ವಿಸ್ತೀರ್ಣವುಳ್ಳ ಬಿರುಸು ಅಥವಾ ಮೆದು ರಬ್ಬರ್ನ ಪಕ್ ಎಂದು ಕರೆಯಲ್ಪಡುವ ಡಿಸ್ಕ್ನಿಂದ ಆಡಲಾಗುತ್ತದೆ. ಪಕ್ ಅನ್ನು ಉನ್ನತ ಶ್ರೇಣಿಯ ಆಟಗಳಲ್ಲಿ ಐಸ್ನ ಮೇಲೆ ಜಿಗಿತ ಮತ್ತು ಘರ್ಷಣೆಯನ್ನು ಕಡಿಮೆ ಮಾಡಲು ಗಟ್ಟಿಗೊಳಿಸಲಾಗಿರುತ್ತದೆ. ಎರಡು ಸ್ಕೇಟರ್ ತಂಡಗಳ ಮಧ್ಯ ಆಟದ ಸ್ಪರ್ಧೆ ಏರ್ಪಡುತ್ತದೆ. ಈ ಆಟವನ್ನು ಉತ್ತರ ಅಮೇರಿಕ ಮತ್ತು ಇನ್ನೂ ವಿಶ್ವದ ಇತರ ದೇಶಗಳಲ್ಲಿ ಬದಲಾದ ರೀತಿಯಲ್ಲಿ ಆಡಲ್ಪಡುತ್ತದೆ. ಕೆನಡಾ, ಫಿನ್ ಲ್ಯಾಂಡ್, ಲಟ್ವಿಯ, ಚೆಕ್ ರಿಪಬ್ಲಿಕ್ ಮತ್ತು ಚೆಕಸ್ಲೋವಾಕಿಯದಲ್ಲಿ ಈ ಆಟವು ಬಹಳ ಜನಪ್ರಿಯವಾಗಿದೆ.
ಇದರ ಆಡಳಿತ ಮಂಡಳಿಯು ೬೬ ಸದಸ್ಯರನ್ನು ಹೊಂದಿರುತ್ತದೆ. ಇಂಟರ್ ನ್ಯಾಷನಲ್ ಐಸ್ ಹಾಕಿ ಫೆಡರೆಷನ್, (IIಊಈ). ಪುರುಷರ ಐಸ್ ಹಾಕಿಯನ್ನು ೧೯೨೪ ರಿಂದ ಚಳಿಗಾಲದ ಒಲಂಪಿಕ್ ಮತ್ತು ೧೯೨೦ ಬೇಸಿಗೆ ಒಲಂಪಿಕ್ನಲ್ಲಿ ಆಡಲಾಗುತ್ತಿದೆ. ಮಹಿಳೆಯರ ಐಸ್ ಹಾಕಿಯನ್ನು ೧೯೯೮ರಲ್ಲಿ ಚಳಿಗಾಲದ ಒಲಂಪಿಕ್ಸ್ನಲ್ಲಿ ಸೇರಿಸಲಾಯಿತು. ಉತ್ತರ ಅಮೇರಿಕಾದ ನ್ಯಾಷನಲ್ ಹಾಕಿ ಲೀಗ್ (ಓಊಐ) ಬಲವಾದ ವೃತ್ತಿಪರ ಐಸ್ ಹಾಕಿ ಒಕ್ಕೂಟವಾಗಿದ್ದು, ಪ್ರಪಂಚದಾದ್ಯAತ ಉನ್ನತ ಶ್ರೇಣಿಯ ಐಸ್ಹಾಕಿ ಆಟಗಾರರನ್ನು ಹೊರತರುತ್ತಿದೆ. ಓಯುಐನ ನಿಯಮಾವಳಿಗಳು ಒಲಂಪಿಕ್ ಹಾಕಿಯಲ್ಲಿ ಉಪಯೋಗಿಸುವ ನಿಯಮಗಳಿಗಿಂತ ಸ್ವಲ್ಪ ಭಿನ್ನವಾಗಿ ಇರುತ್ತದೆ.
ಐಸ್ ಹಾಕಿ ಸ್ಟಿಕ್ಗಳು ಐ-ಆಕಾರದ ಮರದಿಂದ ಮಾಡಿದ ಗ್ರ್ಯಾಫೈಟ್ ಅಥವಾ ಕಾಂಪೋಸಿಟ್ ವಸ್ತುಗಳಿಂದ ತಯಾರಿಸಿದ್ದಾರೆ. ತಳಭಾಗದಲ್ಲಿ ಬ್ಲೇಡ್ ಇರುತ್ತದೆ. ಈ ವಿನ್ಯಾಸವು ಎಡ-ಅಥವಾ ಬಲ ಕೈ ಆಟಗಾರರಿಬ್ಬರಿಗೂ ಅನುಕೂಲಕರವಾಗಿರುತ್ತದೆ.