ಸುಂಟಿಕೊಪ್ಪ, ಜೂ. ೬: ಸುಂಟಿಕೊಪ್ಪ ಪಟ್ಟಣದ ಆಸ್ಪತ್ರೆ ರಸ್ತೆಯಲ್ಲಿರುವ ಅಕ್ಷತಾ ಭಂಡಾರ (ಭವಾನಿಸ್ಟೋರ್)ನಲ್ಲಿ ಕಳ್ಳತನ ನಡೆದಿದೆ.

ಸಾಮಗ್ರಿಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ವ್ಯಕ್ತಿಗಳು ಅಂಗಡಿ ಮಾಲೀಕರ ಗಮನವನ್ನು ಬೇರೆಡೆಗೆ ಸೆಳೆದು ಕೌಂಟರ್‌ನಲ್ಲಿ ಇರಿಸಲಾಗಿದ್ದ ಪರ್ಸನ್ನು ಎಗರಿಸಿ ಪರಾರಿಯಾಗಿದ್ದಾರೆ.

ಕಳುವಾದ ಪರ್ಸ್ನಲ್ಲಿ ಸುಮಾರು ರೂ. ೧೦,೦೦೦ ನಗದು ಎಟಿಎಂ ಕಾರ್ಡ್ಗಳು ಪಾನ್ ಕಾರ್ಡ್ ಹಾಗೂ ಇತರೆ ಪ್ರಮುಖ ದಾಖಲಾತಿಗಳು ಇದ್ದವು ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಈ ಸಂಬAಧ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಠಾಣಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.