ಸೋಮವಾರಪೇಟೆ, ಜೂ. ೫: ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷ ವಿಶ್ವ ಕುಂಬೂರು ಅಧ್ಯಕ್ಷತೆಯಲ್ಲಿ ಪಟ್ಟಣದ ಪತ್ರಿಕಾಭವನದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ಬೆಳವಣಿಗೆಗಳ ಬಗ್ಗೆ ಚರ್ಚೆಯಾಯಿತು. ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಕೊಡಗು ಪ್ರೆಸ್‌ಕ್ಲಬ್ ಸೌಹಾರ್ದ ಸಹಕಾರ ಸಂಘದ ವತಿಯಿಂದ ನೀಡಲಾದ ರೂ. ೫೦ ಸಾವಿರ ಮೌಲ್ಯದ ಚೆಕ್‌ನ್ನು ಸಂಘದ ನಿರ್ದೇಶಕ ಷಂಶುದ್ದೀನ್ ತಾಲೂಕು ಸಂಘಕ್ಕೆ ಹಸ್ತಾಂತರಿಸಿದರು.

ಇದರೊಂದಿಗೆ ಉದ್ಯಮಿ ಎಡಿಕೇರಿ ಪ್ರಸನ್ನ ರೂ. ೨೫ ಸಾವಿರ, ಮಾದಾಪುರ ಗ್ರಾ.ಪಂ. ಮಾಜಿ ಸದಸ್ಯ ಲತೀಫ್ ರೂ. ೧೦ ಸಾವಿರವನ್ನು ಸಂಘದಿAದ ಕೊಡಮಾಡುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗೆ ನೀಡಿದರು. ಅಂತೆಯೇ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷೆ, ರಾಜ್ಯ ಸಂಘದ ನಿರ್ದೇಶಕಿ ಸವಿತಾ ರೈ ರೂ. ೧೦ ಸಾವಿರವನ್ನು ದತ್ತಿನಿಧಿಗೆ ಹಸ್ತಾಂತರಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ವಿಶ್ವ ಕುಂಬೂರು ತಿಳಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿ ಯಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ತಾಲೂಕು ಸಂಘಗಳ ಬೆಳವಣಿಗೆಗೆ ಜಿಲ್ಲಾ ಸಂಘದಿAದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಸಭೆಗೆ ವೀಕ್ಷಕರಾಗಿ ಜಿಲ್ಲಾ ಸಂಘದ ಉಪಾಧ್ಯಕ್ಷ ವಾಸು ಆಚಾರ್ಯ ಆಗಮಿಸಿದ್ದರು. ತಾಲೂಕು ಸಂಘದ ಕಾರ್ಯದರ್ಶಿ ಭಾಸ್ಕರ್ ಮುಳ್ಳೂರು ಸ್ವಾಗತಿಸಿ, ನಿರ್ದೇಶಕ ವಿಜಯ್ ಹಾನಗಲ್ ವಾರ್ಷಿಕ ವರದಿ ವಾಚಿಸಿದರು. ಖಜಾಂಚಿ ಬಿ.ಎ. ಭಾಸ್ಕರ್ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ದಿನೇಶ್ ಮಾಲಂಬಿ ವಂದಿಸಿದರು.